ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದುವುದರಲ್ಲಿ ತಪ್ಪಿಲ್ಲ: ತರೂರ್
ಬೆಂಗಳೂರು, ಜುಲೈ 23 : ಕರ್ನಾಟಕಕ್ಕೆ ಪ್ರತ್ಯೇಕ ಅಧಿಕೃತ ಧ್ವಜ ಹೊಂದುವ ರಾಜ್ಯ ಸರಕಾರದ ನಿರ್ಧಾರದ ಪರ ಕಾಂಗ್ರೆಸ್ ಸಂಸದ ಶಶಿ ತರೂರ್ ಬ್ಯಾಟಿಂಗ್ ಮಾಡಿದ್ದಾರೆ.
ಪ್ರತ್ಯೇಕ ರಾಜ್ಯ ಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯಕ್ಕೆ ಪ್ರತ್ಯೇಕ ಧ್ವಜದ ಬಗ್ಗೆ ವರದಿ 9 ಸದಸ್ಯರ ಸಮಿತಿಯನ್ನು ರಚಿಸಿರುವ ಬಗ್ಗೆ ಭಾನುವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಶಶಿ ಶಶಿತರೂರ್, " ಪ್ರತ್ಯೇಕ ಕರ್ನಾಟಕದಲ್ಲಿ ಎದ್ದಿರರುವ ರಾಜ್ಯಗಳು ಪ್ರತ್ಯೇಕ ಧ್ವಜಗಳನ್ನು ಹೊಂದುವುದರಲ್ಲಿ ತಪ್ಪಿಲ್ಲ, ಈ ವಿಷಯದ ಬಗ್ಗೆ ರಾದ್ಧಾಂತ ಮಾಡುವ ಅವಶ್ಯಕತೆ ಇಲ್ಲ ಎಂದರು.

"ರಾಜ್ಯ ಧ್ವಜಗಳನ್ನು ರಾಷ್ಟ್ರಧ್ವಜಗಳ ಬದಲಿಗೆ ಬಳಸುವಂತಿಲ್ಲ ಹಾಗೂ ಅದು ರಾಷ್ಟ್ರಧ್ವಜಕ್ಕಿಂತ ಕಡಿಮೆ ಎತ್ತರದಲ್ಲಿ ಹಾರಾಡಬೇಕು ಎಂಬಂತಹ ನಿಯಮಗಳನ್ನು ರೂಪಿಸಬೇಕು ಎಂದು ಹೇಳಿದರು.












Click it and Unblock the Notifications