ಸಂಬಳ ಕೊಡದ ಕಂಪನಿ ಮಾಲಿಕ 2 ಬಾರಿ ಕಿಡ್ನ್ಯಾಪ್
ಬೆಂಗಳೂರು, ಏ.10: ಏಳು ತಿಂಗಳಿಂದ ಸಂಬಳ ನೀಡಿಲ್ಲ ಎನ್ನುವ ಕಾರಣಕ್ಕೆ ಬಾಸ್‌ನನ್ನು ಎರಡೆರೆಡು ಬಾರಿ ಅಪಹರಣ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬೆಂಗಳೂರು ಅಲಸೂರು ಸಮೀಪದಲ್ಲಿ ಖಾಸಗಿ ಸಂಸ್ಥೆಯನ್ನು ನಡೆಸುತ್ತಿದ್ದ ಸುಜಯ್ ತನ್ನ ಉದ್ಯೋಗಿಗಳಿಗೆ ಕಳೆದ ಸೆಪ್ಟೆಂಬರ್ 2018ರಿಂದ ವೇತನ ಪಾವತಿಸಿರಲಿಲ್ಲ.
ಇದರಿಂದ ನಿರಾಶೆಗೊಂಡ ಉದ್ಯೋಗಿಗಳು ತಮ್ಮ ಬಾಸ್ ಅನ್ನು ಅಪಹರಿಸಿ, ತಮ್ಮ ವೇತನ ಬಾಕಿ ಪಡೆದುಕೊಳ್ಳಲು ತೀರ್ಮಾನಿಸಿದ್ದರು. ಆತಮ ಸಂಬಳ ನೀಡುತ್ತೇನೆ ಎಂದು ಭರವಸೆ ನೀಡಿದ್ದರಿಂದ ಬಳಿಕ ಆತನನ್ನು ಬಿಡುಗಡೆ ಮಾಡಿದ್ದರು.

30 ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು, ಬಳಿಕ ಅಪಹರಣಕಾರರನ್ನು ಪೊಲೀಸರು ಬಂಧಿಸಿದ್ದರು. ಆದರೂ ಆಸ್ಪತ್ರೆಯಿಂದಲೂ ಕಂಪನಿ ಮಾಲೀಕ ಸುಜಯ್ ಕಾಣೆಯಾಗಿದ್ದರು. ಇದೀಗ ಎರಡನೇ ಬಾರಿಗೆ ಅಪರಹರಣ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೂರಿನ ಪ್ರಕಾರ ತನಿಖೆ ಕೈಗೊಂಡ ಪೋಲೀಸರು ಏಳು ಮಂದಿಯ ಪೈಕಿ ನಾಲ್ವರನ್ನು ಬಂಧಿಸಿದ್ದು ಇನ್ನೂ ಮೂವರಿಗಾಗಿ ಶೋಧ ನಡೆಸಿದ್ದಾರೆ. ಯೋಜನೆ ಪ್ರಕಾರ ಸಂಸ್ಥೆಯ ಸಿಬ್ಬಂದಿಗಳು ಸುಜಯ್ ನನ್ನು ಮಾರ್ಚ್ 21ರಂದು ಅಪಹರಿಸಿ ನಗರದ ಎಚ್.ಎಸ್.ಆರ್. ಲೇಔಟ್ ನಲ್ಲಿರುವ ತಮ್ಮ ಸ್ನೇಹಿತರ ಮನೆಯಲ್ಲಿ ಇರಿಸಿದ್ದರು.












Click it and Unblock the Notifications