ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತನ್ನ ಮಗುವಿಗಿಂತ ರೋಗಿಗಳು ಮುಖ್ಯ ಎಂದ ಬೆಂಗಳೂರಿನ ನರ್ಸ್

|
Google Oneindia Kannada News

ಬೆಂಗಳೂರು, ಏಪ್ರಿಲ್ 14: ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯ ಬಳಗದ ತ್ಯಾಗ ದೊಡ್ಡದಿದೆ. ಎಷ್ಟೋ ವೈದ್ಯರು ತಮ್ಮ ಕುಟುಂಬವನ್ನು ನೋಡಿ ತಿಂಗಳುಗಳೇ ಕಳೆದಿದೆ. ಅದೇ ರೀತಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿಯೊಬ್ಬರು ತಮ್ಮ ಮಗುವನ್ನು ನೋಡಲು ಆಗುತ್ತಿಲ್ಲ.

ವಿದ್ಯಾನಂದ ಮಂಗವತಿ ಬೆಳಗಾವಿ ಮೂಲದವರು. ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಅವರು ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 27 ರಂದು ಅವರ ಪತ್ನಿಗೆ ಮಗು ಜನಿಸಿದ ಸುದ್ದಿ ಬಂದಿದೆ. ತಂದೆಯಾದ ಸಂತೋಷದಲ್ಲಿ ಇದ್ದ ಅವರಿಗೆ ಮಗುವನ್ನು ನೋಡಲು ಆಗುತ್ತಿಲ್ಲ.

ಡಾಕ್ಟರ್, ನರ್ಸ್, ವೈದ್ಯಕೀಯ ಸಿಬ್ಬಂದಿಗೆ ಗೂಗಲ್ ಧನ್ಯವಾದಡಾಕ್ಟರ್, ನರ್ಸ್, ವೈದ್ಯಕೀಯ ಸಿಬ್ಬಂದಿಗೆ ಗೂಗಲ್ ಧನ್ಯವಾದ

ವಿಕ್ಟೋರಿಯ ಆಸ್ಪತ್ರೆ ಕೊರೊನಾ ಚಿಕಿತ್ಸೆಗೆ ವಿಶೇಷ ಚಿಕಿತ್ಸಾ ಕೇಂದ್ರವಾಗಿದೆ. ಕೊರೊನಾ ಕೇಸ್‌ಗಳು ಹೆಚ್ಚು ಅಲ್ಲಿಗೆ ಬರುತ್ತಿದೆ. ಹೀಗಾಗಿ, ಅವರಿಗೆ ಈ ವೇಳೆ ರಜೆ ಪಡೆಯಲು ಸಾಧ್ಯವಾಗಿಲ್ಲ. ಊರಿಗೆ ಹೋಗಲು ಆಗುತ್ತಿಲ್ಲ.

Not My Baby Patients Need Us More Says Bengaluru Male Nurse

ತನ್ನ ನವಜಾತ ಶಿಶುವನ್ನು ನೋಡಲು ಆಗದೆ, ಆ ಮಗುವನ್ನು ಮುಟ್ಟಲು, ಎತ್ತಿಕೊಳ್ಳಲು ಆಗದೆ, ವಿದ್ಯಾನಂದ ಮಂಗವತಿ ಬೇಸರದಲ್ಲಿ ಇದ್ದಾರೆ. ಆದರೆ, ಈ ಕ್ಷಣದಲ್ಲಿ ನನ್ನ ಅವಶ್ಯಕತೆ ಮಗುವಿಗಿಂತ ಹೆಚ್ಚಾಗಿ ರೋಗಿಗಳಿಗೆ ಇದೆ. ಈ ವೇಳೆ ಮಗುವಿಗಿಂತ ರೋಗಿಗಳೆ ಮುಖ್ಯ ಎಂದು ಅವರು ಹೇಳಿದ್ದಾರೆ. ಈ ವೇಳೆ ವೈದ್ಯಕೀಯ ಸಿಬ್ಬಂದಿ ಮಾಡುತ್ತಿರುವ ತ್ಯಾಗಕ್ಕೆ ವಿದ್ಯಾನಂದ ಸಾಕ್ಷಿಯಾಗಿದ್ದಾರೆ.

ಅಂದಹಾಗೆ, ಕರ್ನಾಟಕದಲ್ಲಿ ಕೊರೊನಾ ಕೇಸ್‌ಗಳು 258ಕ್ಕ ಏರಿಕೆಯಾಗಿದೆ. 11 ಹೊಸ ಪ್ರಕರಣಗಳು ಇಂದು ದೃಢವಾಗಿವೆ.

English summary
Not my baby, patients need us more says Bengaluru male nurse Vidyanand Mangavati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X