Get Updates
Get notified of breaking news, exclusive insights, and must-see stories!

ಕರುನಾಡಲ್ಲೇ ಕನ್ನಡ ನಾಮಫಲಕಕ್ಕೆ ಅನ್ಯಭಾಷಿಕರಿಂದ ಅಡ್ಡಿ! ವಿಡಿಯೋ ವೈರಲ್‌

ಕನ್ನಡಿಗರ ಹಬ್ಬ ರಾಜ್ಯೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಹೊತ್ತಿನಲ್ಲೇ ಕನ್ನಡಕ್ಕೆ ಕರುನಾಡಿನ ನೆಲದಲ್ಲೇ ಘೋರ ಅವಮಾನವಾಗಿರುವ ಘಟನೆ ನಡೆದಿದೆ. ಬೋರ್ಡ್‌ನಲ್ಲಿ ಕನ್ನಡದ ಅಕ್ಷರಗಳನ್ನು ಬರೆಯುತ್ತಿದ್ದಾಗ ಅನ್ಯಭಾಷಿಕರ ಗುಂಪು ಅಡ್ಡಿಪಡಿಸಿದ್ದಾರೆ ಎನ್ನಲಾದ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಬೆಂಗಳೂರಿಗೆ ಹೊಂದಿಕೊಂಡಿರುವ ಆನೇಕಲ್ ಬಡಾವಣೆಯಲ್ಲಿ ಇಂತಹ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಈ ಬಡಾವಣೆಯಲ್ಲಿ ರಸ್ತೆಗಳಲ್ಲಿರುವ ಮಾಹಿತಿ ಫಲಕವನ್ನು ಕನ್ನಡ ಅಕ್ಷರಗಳಲ್ಲಿ ಬರೆಯಲಾಗುತ್ತಿತ್ತು. ಈ ವೇಳೆ ಅಲ್ಲಿದ್ದ ಪರಭಾಷಿಕರೆಲ್ಲ ಗುಂಪಾಗಿ ಬಂದು ಕನ್ನಡ ಅಕ್ಷರ ಬರೆಯುತ್ತಿದ್ದವರ ಮೇಲೆ ಜೋರು ಗಲಾಟೆ ಮಾಡಿರುವುದು ವಿಡಿಯೋದಲ್ಲಿದೆ.

Non Kanndigas Are A Hindrance In Bengaluru To Write Nameplates In Kannada

ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಾಹಿತಿಯಂತೆ, ಗ್ರಾಮ ಪಂಚಾಯಿತಿ ವತಿಯಿಂದ ಸಾರ್ವಜನಿಕರ ರಸ್ತೆಯಲ್ಲಿ ನಿಯಮಾನುಸಾರ ಎಲ್ಲ ಸರ್ಕಾರಿ ಇಲಾಖೆಗಳಿಂದ ಅನುಮತಿ ಪತ್ರ ಪಡೆದು ಅಲ್ಲಿ ಕನ್ನಡ ನಾಮಫಲಕಗಳನ್ನು ಬರೆಯಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ ಇದಕ್ಕೆ ಅಲ್ಲಿದ್ದ ಬೇರೆ ಭಾಷೆಯವರು ವಿರೋಧ ಮಾಡಿದ್ದಾರೆ.

ಅಲ್ಲಿ ಕೆಲವರು ನಮ್ಮ ರಾಜ್ಯದವರೇ ಇದ್ದರು ಎಂದೂ ಹೇಳಲಾಗಿದೆ. ಕನ್ನಡದಲ್ಲಿ ನಾಮಫಲಕ ಬರೆಯಲು ಅನುಮತಿ ಪಡೆದಿದ್ದೇವೆ ಎಂದು ಅನುಮತಿ ಪತ್ರವನ್ನೂ ವಿಡಿಯೋದಲ್ಲಿ ಕನ್ನಡಿಗರು ಅಲ್ಲಿನ ನಿವಾಸಿಗಳಿಗೆ ತೋರಿಸಿದ್ದಾರೆ. ಆದರೂ ಅವರು ತಮ್ಮ ಭಾಷೆಗಳಲ್ಲೇ ಇದಕ್ಕೆ ವಿರೋಧ ಮಾಡಿ, ಬರೆಯುತ್ತಿದ್ದ ಬಣ್ಣದ ಡಬ್ಬಿಗಳನ್ನು ಪಕ್ಕಕ್ಕೆ ಎಸೆದಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ರಾಜ್ಯ ಸರ್ಕಾರ ಕೂಡ ಕರ್ನಾಟಕದಲ್ಲಿ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿದೆ. ಆದರೂ ಕನ್ನಡದ ನೆಲದಲ್ಲೇ ಕನ್ನಡಕ್ಕೆ ಜಾಗ ನೀಡುತ್ತಿಲ್ಲ ಎಂದು ನೆಟ್ಟಿಗರು ಕೋಪಗೊಂಡಿದ್ದಾರೆ. ಕನ್ನಡ ರಾಜ್ಯೋತ್ಸವವನ್ನು ವರ್ಷಕ್ಕೊಮ್ಮೆ ಮಾಡಿ, ಬಾವುಟ ಹಾರಿಸಿದರೆ ಸಾಲದು. ನಮ್ಮ ತಾಯ್ನೆಲದಲ್ಲೇ ಕನ್ನಡವನ್ನು ನಮ್ಮಿಂದ ಉಳಿಸಿಕೊಳ್ಳಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಲವರು ಸಂಕಟ ಹೊರಹಾಕಿದ್ದಾರೆ.

ತಿನ್ನಲು ಕನ್ನಡ ನೆಲಕ್ಕೆ ಬಂದಿರೋ ಇವರು ಕನ್ನಡವನ್ನೇ ವಿರೋಧ ಮಾಡುವುದಲ್ಲದೆ, ಕನ್ನಡ ಮಾತಾಡಲ್ಲ ಅಂತ ಗಾಂಚಾಲಿ ತೋರಿಸ್ತಿದ್ರು. ಈಗ ಕನ್ನಡದ ಅಕ್ಷರಗಳೇ ಬರೆಯಂಗಿಲ್ಲ ಎಂದು ಧಮ್ಕಿ ಹಾಕ್ತಾರೆ ಅಂದ್ರೆ ಕನ್ನಡದ ಸ್ಥಿತಿ ಎಲ್ಲಿಗೆ ಬಂದು ತಲುಪಿದೆ ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಅಭಿವೃದ್ಧಿಯ ಹೆಸರಿನಲ್ಲಿ ಕನ್ನಡವನ್ನು ಪರಭಾಷಿಕರ ಕಾಲಡಿಗೆ ಇಟ್ಟಿರುವುದೇ ನಮ್ಮ ಸರ್ಕಾರಗಳು. ಕನ್ನಡವನ್ನು ಇವರೆಲ್ಲ ಉಳಿಸುವುದು ಭಾಷಣಗಳಲ್ಲಿ ಮಾತ್ರವೇ. ಪ್ರತಿದಿನವೂ ಕನ್ನಡಕ್ಕೆ ಕನ್ನಡ ನೆಲದಲ್ಲೇ ಅವಮಾನವಾಗುತ್ತಿದ್ದರೂ ಏನು ಮಾಡಲಾಗದ ಅಸಹಾಯಕರಂತಿರುವುದು ನಮ್ಮೆಲ್ಲರ ದೌರ್ಭಾಗ್ಯ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ ಹೆಸರುಗಳನ್ನು ಬರೆಯುವುದು ರಾಜ್ಯದ ಅಧಿಕೃತ ಮಾರ್ಗಸೂಚಿಗಳಿಗೆ ಅನುಗುಣವಾಗಿದೆ ಮತ್ತು ಸ್ಥಳೀಯ ಸಂಸ್ಕೃತಿ ಮತ್ತು ಗುರುತನ್ನು ಪ್ರತಿಬಿಂಬಿಸುತ್ತದೆ ಎಂದು ಘಟನಾ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೇಳಿದ್ದಾರೆ. ಕನ್ನಡವು ರಾಜ್ಯದ ಪ್ರಾಥಮಿಕ ಭಾಷೆಯಾಗಿದೆ ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ನೆನಪಿಸಿದ್ದಾರೆ.

ಬಳಿಕ ಕೆಲವು ನಿವಾಸಿಗಳು ಕನ್ನಡವನ್ನು ಬಳಸುವ ಗ್ರಾಮ ಪಂಚಾಯಿತಿಯ ಕ್ರಮವನ್ನು ಬೆಂಬಲಿಸಿದರೆ, ಇತರರು ಈ ಪ್ರದೇಶದಲ್ಲಿ ವಾಸಿಸುವ ಅನ್ಯಭಾಷಿಕರಿಗೆ ಸ್ಥಳಾವಕಾಶ ಕಲ್ಪಿಸಲು ಇತರ ಭಾಷೆಗಳನ್ನು ಒಳಗೊಂಡಂತೆ ಫಲಕಗಳು ಹೆಚ್ಚು ಇರಬೇಕು ಎಂದು ಜೋರು ಮಾಡಿದ್ದಾರೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+