ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ದೇಶದ ಇತಿಹಾಸವನ್ನು ಬದಲಿಸಲು ಯಾರಿಗೂ ಸಾಧ್ಯವಿಲ್ಲ: ಡಿ.ಕೆ ಶಿವಕುಮಾರ್

|
Google Oneindia Kannada News

ಬೆಂಗಳೂರು, ಆಗಸ್ಟ್ 15: ದೇಶದ ಜನ ನೋವಿನಿಂದ ನರಳುತ್ತಿದ್ದಾರೆ. ಜನರ ಆದಾಯ ದ್ವಿಗುಣವಾಗಿಲ್ಲ. ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಕೆಲವರು ದೇಶದ ಚರಿತ್ರೆಯನ್ನೇ ಬದಲಿಸಲು ಹೊರಟಿದ್ದಾರೆ. ಆದರೆ ಈ ದೇಶದ ಇತಿಹಾಸವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ಯ್ರ ದಿನಾಚರಣೆ ಅಂಗವಾಗಿ ಬಿಜೆಪಿ ಸರ್ಕಾರ ನೀಡಿದ್ದ ಜಾಹಿರಾತಿನಲ್ಲಿ ಜವಾಹರಲಾಲ್ ನೆಹರೂ ಅವರ ಹೆಸರನ್ನು ಕೈ ಬಿಟ್ಟಿದ್ದಕ್ಕೆ ಕಿಡಿ ಕಾರಿದರು.

ಕರ್ನಾಟಕದಲ್ಲಿ ಮತ್ತೊಂದು ಹೊಸ ಜಿಲ್ಲೆ ಉದಯ: ಸುಧಾಕರ್ಕರ್ನಾಟಕದಲ್ಲಿ ಮತ್ತೊಂದು ಹೊಸ ಜಿಲ್ಲೆ ಉದಯ: ಸುಧಾಕರ್

ಇತಿಹಾಸದಿಂದ ನೆಹರೂ ಅವರ ಹೆಸರು ತೆಗೆದುಹಾಕುವ ಪ್ರಯತ್ನ ಮಾಡಿದ್ದಾರೆ. ಮುಖ್ಯಮಂತ್ರಿಗಳಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ನೆಹರೂ ಅವರ ಹೆಸರು ಸ್ಮರಿಸಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಜವಾಹರಲಾಲ್ ನೆಹರು ಕುಟುಂಬ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದೆ. ದೇಶಕ್ಕಾಗಿ ತಮ್ಮ ಆಸ್ತಿಗಳನ್ನು ತ್ಯಾಗ ಮಾಡಿದ್ದಾರೆ. ಇಂದಿರಾ ಗಾಂಧಿ ಕೂಡ ಜೈಲುವಾಸ ಅನುಭವಿಸಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ದೇಶಕ್ಕಾಗಿ ಅಧಿಕಾರ ತ್ಯಾಗ ಮಾಡಿದ್ದಾರೆ. ಇಂತಹ ಕುಟುಂಬದ ಬಗ್ಗೆ ಟೀಕೆ ಮಾಡಲಾಗುತ್ತಿದೆ ಎಂದರು.

just in: ಇತ್ತ ನೆಹರು ವಿರುದ್ಧ ಬಿಜೆಪಿ ಕಿಡಿ;ಅತ್ತ ಮೋದಿಯಿಂದ ಪ್ರಶಂಸೆjust in: ಇತ್ತ ನೆಹರು ವಿರುದ್ಧ ಬಿಜೆಪಿ ಕಿಡಿ;ಅತ್ತ ಮೋದಿಯಿಂದ ಪ್ರಶಂಸೆ

 ದೇಶಕ್ಕಾಗಿ ಜೀವ ತೆತ್ತಿದ್ದಾರೆ

ದೇಶಕ್ಕಾಗಿ ಜೀವ ತೆತ್ತಿದ್ದಾರೆ

33 ಗುಂಡೇಟುಗಳನ್ನು ತಿಂದ ಇಂದಿರಾಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ರಾಜೀವ್ ಗಾಂಧಿ ಬಾಂಬ್ ಸ್ಫೋಟದಲ್ಲಿ ದೇಶಕ್ಕಾಗಿ ಪ್ರಾಣಬಿಟ್ಟರು. ಇಂತಹ ತ್ಯಾಗ ಮಾಡಿದ ಕುಟುಂಬವನ್ನು ಅವಹೇಳನ ಮಾಡುವ ಕೆಲಸ ನಡೆಯುತ್ತಿದೆ. ಈ ಪ್ರವೃತ್ತಿ ಕೊನೆಯಾಗಬೇಕು ಎಂದರು.

"ನಾನು ಬೇರೆ ರಾಜಕಾರಣ ಮಾತನಾಡುವುದಿಲ್ಲ, ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇರಬೇಕು. ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡುತ್ತೇವೆ ನಿಮ್ಮ ಸೇವೆ ಮಾಡುತ್ತೇವೆ. ನೀವು ಕಾಂಗ್ರೆಸ್ ಪಕ್ಷದ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ. " ಎಂದು ಸಭೆಯಲ್ಲಿ ಸೇರಿದ್ದ ಜನತೆಯಲ್ಲಿ ಡಿ.ಕೆ ಶಿವಕುಮಾರ್ ಮನವಿ ಮಾಡಿದರು.

ತ್ರಿವರ್ಣ ಧ್ವಜ, ಸಂವಿಧಾನ, ಸಮಾನತೆ, ಯುವಕರ ಭವಿಷ್ಯ, ಮಹಿಳೆಯರ ರಕ್ಷಣೆ, ಎಲ್ಲ ಜಾತಿ ಧರ್ಮಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಹೇಳಿದರು.

 ಇಂದು ಹೊಸ ಚರಿತ್ರೆ ಸೃಷ್ಟಿಯಾಗಿದೆ

ಇಂದು ಹೊಸ ಚರಿತ್ರೆ ಸೃಷ್ಟಿಯಾಗಿದೆ

ಮನುಷ್ಯನ ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ, ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಅದೇ ರೀತಿ ಹುಟ್ಟು ಸಾವಿನ ಮಧ್ಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿ ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕಿರುವುದು ಒಂದು ಸಾಧನೆ ಎಂದರು.

"ನೀವಿಂದು ಚರಿತ್ರೆ ಸೃಷ್ಟಿಸಿದ್ದು, ದೇಶಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ, ಶಕ್ತಿ ತುಂಬಿದ್ದೀರಿ. ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜ ರಾಷ್ಟ್ರಗೀತೆ ತಂದುಕೊಟ್ಟ ನಮ್ಮ ಪೂರ್ವಜರುಗಳಿಗೆ ಗೌರವ ಸಲ್ಲಿಸಿದ್ದೀರಿ. ಇದು ನಿಮ್ಮ ಜೀವನದ ಸಾರ್ಥಕ ಕ್ಷಣಗಳಲ್ಲಿ ಒಂದಾಗಲಿದೆ." ಎಂದು ನೆರೆದಿದ್ದ ಜನತೆಯನ್ನು ಉದ್ದೇಶಿಸಿ ಡಿ.ಕೆ. ಶಿವಕುಮಾರ್ ಹೇಳಿದರು.

 ಜನರ ಜೊತೆ ಹೆಜ್ಜೆ ಹಾಕಲು ಸುರ್ಜೇವಾಲ ಬಂದಿದ್ದಾರೆ

ಜನರ ಜೊತೆ ಹೆಜ್ಜೆ ಹಾಕಲು ಸುರ್ಜೇವಾಲ ಬಂದಿದ್ದಾರೆ

ರಣದೀಪ್ ಸಿಂಗ್ ಸುರ್ಜೇವಾಲ ಅವರು ಅನಾರೋಗ್ಯದ ಕಾರಣ ವಿದೇಶಕ್ಕೆ ತೆರಳಿದ್ದರು. ಅವರು ಆಗಸ್ಟ್ 18 ರಂದು ರಾಜ್ಯಕ್ಕೆ ಭೇಟಿ ನೀಡಲು ನಿರ್ಧಾರ ಮಾಡಿದ್ದರು. ಆದರೆ ಈ ಸ್ವಾತಂತ್ರ ನಡಿಗೆ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಜೊತೆ ತಾವು ಹೆಜ್ಜೆ ಹಾಕಬೇಕು ಎಂದು ಇಂದು ಬೆಂಗಳೂರಿಗೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.


ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲಾ ಮುಖಂಡರು, ಪಕ್ಷದ ಕಾರ್ಯಕರ್ತರು, ಶಾಸಕರಿಗೆ ಧನ್ಯವಾದ ಅರ್ಪಿಸಿದರು.

 ಜನರ ಮನಸ್ಸನ್ನು ಗೆಲ್ಲಿ ಎಂದ ಡಿ.ಕೆ ಶಿವಕುಮಾರ್

ಜನರ ಮನಸ್ಸನ್ನು ಗೆಲ್ಲಿ ಎಂದ ಡಿ.ಕೆ ಶಿವಕುಮಾರ್

ಬೇರೆಯವರನ್ನು ಗೆಲ್ಲಬೇಕಾದರೆ ನಿನ್ನ ಹೃದಯವನ್ನುಉಪಯೋಗಿಸು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಅದರಂತೆ ನೀವು ಜನರ ಮಧ್ಯೆ ಹೋಗಿ ಅವರ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಅವರ ಭಾವನೆಗೆ ಸ್ಪಂದಿಸಿ ಕೆಲಸ ಮಾಡುವ ಅವಕಾಶ ನಿಮಗಿದೆ, ಅದನ್ನು ಬಳಸಿಕೊಳ್ಳಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ನಾಯಕಾರಗಬಯಸುವವರಿಗೆ ಆಗಸ್ಟ್ 30ರವರೆಗೆ ಸಮಯ ಇದ್ದು ನೀವು ಜನರ ಬಳಿ ಹೋಗಿ ಕೆಲಸ ಮಾಡಿ ನಿಮ್ಮ ಸಾಮರ್ಥ್ಯ ತೋರಿಸಿ ಎಂದರು.

ಸ್ವಾತಂತ್ರ ನಡಿಗೆ ಕಾರ್ಯಕ್ರಮಕ್ಕೆ ಶ್ರಮಿಸಿದ ಸಾವಿರಾರು ಜನ ಇದ್ದಾರೆ. ಪಕ್ಷಭೇದ ಮರೆತು ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಸೇರಿ ಎಲ್ಲ ವರ್ಗದ ಜನ ಹೆಜ್ಜೆ ಹಾಕಿದ್ದಾರೆ ಎಂದ ಅವರು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

English summary
Speaking at the Independence program held at the National College Grounds, DK Shivakumar criticized the omission of Jawaharlal Nehru's name in the advertisement issued by the BJP government as part of the Independence Day celebrations. They have tried to remove Nehru's name from history. I did not expect this from the Chief Minister. Today, Prime Minister Narendra Modi mentioned Nehru's name in his speech and said that he congratulated him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X