ಬೆಂಗಳೂರಲ್ಲಿ ಎರಡು ದಿನ ಈ ಬಡಾವಣೆಗಳಲ್ಲಿ ನೀರು ಸರಬರಾಜು ಸ್ಥಗಿತ
Recommended Video

ಬೆಂಗಳೂರಲ್ಲಿ ಎರಡು ದಿನ ಹಲವು ಬಡಾವಣೆಗಳಲ್ಲಿ ನೀರು ಸರಬರಾಜು ಸ್ಥಗಿತ | Oneindia Kannada
ಬೆಂಗಳೂರು, ಸೆ.27: ಬೆಂಗಳೂರಲ್ಲಿ ಎರಡು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸೆ.28ರ ರಾತ್ರಿ 10ರಿಂದ ಮತ್ತು 29ರ ಸಂಜೆ 4 ಗಂಟೆಯವರೆಗೆ ನಗರದ ಹಲವು ಪ್ರದೇಶಗಳಲ್ಲಿ ನೀರಿನ ವ್ಯತ್ಯಯ ಉಂಟಾಗಲಿದೆ.
ಕಾವೇರಿ ನೀರು ಯೋಜನೆಯ 1 ಮತ್ತು 3ನೇ ಪಂಪಿಂಗ್ ಸ್ಟೇಷನ್ ಗಳಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿರುವ ಕಾರಣ ನೀರಿನ ವ್ಯತ್ಯಯ ಉಂಟಾಗಲಿದೆ.

ಜಯನಗರ, ಜೆಪಿನಗರ, ಬಸವನಗುಡಿ, ಬನಶಂಕರಿ ಎರಡನೇ ಹಂತ, ಕುಮಾರಸ್ವಾಮಿ ಲೇಔಟ್, ಚಾಮರಾಜಪೇಟೆ, ಹೊಸಕೆರೆಹಳ್ಳಿ, ಪದ್ಮನಾಭನಗರ, ದೊಮ್ಮಲೂರು, ಆಡುಗೋಡಿ, ಬಾಪೂಜಿನಗರ, ವಿಜಯನಗರ, ಶ್ರೀರಾಮಪುರ, ಇಂದಿರಾನಗರ, ಶಾಂತಿನಗರ, ಶ್ರೀನಗರ, ಮತ್ತಿಕೆರೆ, ವಿಲ್ಸನ್ ಗಾರ್ಡನ್, ಮಲ್ಲೇಶ್ವರ, ಬ್ಯಾಟರಾಯನಪುರ, ಕೋನೇನ ಅಗ್ರಹಾರ, ಮಹದೇವಪುರ, ಕೆಆರ್ ಪುರ, ಮಡಿವಾಳ, ಗವಿಪುರ, ಆರ್ ಟಿನಗರ ಸೇರಿ ಹಲವು ಕಡೆಗಳಲ್ಲಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications