ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೈಕೋರ್ಟ್ ವಿಚಾರಣೆ ಮುನ್ನ ನೌಕರರೊಂದಿಗೆ ಸಭೆ ಇಲ್ಲ: ಮೆಟ್ರೋ ನಿಗಮ

By Nayana
|
Google Oneindia Kannada News

ಬೆಂಗಳೂರು, ಮೇ 08: ಮೆಟ್ರೋ ಅಧಿಕಾರಿಗಳು ಹಾಗೂ ನೌಕರರ ನಡುವಿನ ಸಂಘರ್ಷ ಅಂತ್ಯ ಕಾಣುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.

ಇತ್ತೀಚೆಗೆ ನಡೆದ ಸಭೆಯಲ್ಲಿ ಆಡಳಿತ ಮಂಡಳಿಯು ನೌಕರರಿಗೆ ಸ್ಪಷ್ಟೀಕರಣ ನೀಡಿದೆ. ಜತೆಗೆ ಹೈಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆವರೆಗೆ ಮತ್ತೆ ಸಭೆ ನಡೆಸುವುದಿಲ್ಲವೆಂದು ತಿಳಿಸಿದೆ.

ಫಲಪ್ರದವಾಗದ ಮೆಟ್ರೋ ಅಧಿಕಾರಿಗಳು ಹಾಗೂ ನೌಕರರ ಸಭೆಫಲಪ್ರದವಾಗದ ಮೆಟ್ರೋ ಅಧಿಕಾರಿಗಳು ಹಾಗೂ ನೌಕರರ ಸಭೆ

ಹೈಕೋರ್ಟ್ ಸೂಚನೆಯಂತೆ ಮೇ 28ರವರೆಗೆ ಸಂಧಾನ ಸಭೆ ನಡೆಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕಿದೆ. ಈ ಹಿಂದಿ ನಂತೆಯೇ ವಾರಕ್ಕೆ ಮೂರು ಸಭೆಗಳನ್ನು ಕರೆದು ಅಹವಾಲುಗಳನ್ನು ಆಲಿಸುವ ನಿರೀಕ್ಷೆ ನೌಕರರಿಗಿತ್ತು.

No talks between BMRCL and employees union

ಇತ್ತೀಚೆಗೆ ಒಂದು ಸಭೆ ನಡೆಸಿದ್ದು, ಇದೇ ಕೊನೆ ಸಭೆ ಎಂದು ಅಧಿಕಾರಿಗಳು ನೌಕರರಿಗೆ ತಿಳಿಸಿದ್ದಾರೆ. ನೌಕರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ಮೇ 28 ರ ನಂತರ ನಡೆಯಲಿರುವ ವಿಚಾರಣೆಯಲ್ಲಿ ಹೈಕೋರ್ಟ್ ಗೆ ಮಾಹಿತಿ ನೀಡಲಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರ ಜತೆಗೆ ನೌಕರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೆಲ ಸ್ಪಷ್ಟನೆಗಳನ್ನು ನೀಡಲಾಗಿದೆ.

ನೌಕರರ ಸಂಗವು 2017 ರಡಿಸೆಂಬರ್ ನಲ್ಲಿ ಕನ್ನಡ ಸಂಘ ರಚಿಸಿ, ನೋಂದಣಿ ಮಾಡಿಕೊಂಡಿತ್ತು. ಈ ಸಂಘಕ್ಕೆ ಮಾನ್ಯತೆ ನೀಡದ ಬಿಎಂಆರ್‌ಸಿಎಲ್ , 2018ರ ಜನವರಿಯಲ್ಲಿ ಆಡಳಿತ ಮಂಡಳಿಯಿಂದಲೇ ಎಚಿಸಿರುವ ಕನ್ನಡ ಸಂಘಕ್ಕೆ ಮಾತ್ರ ಮಾನ್ಯತೆ ಇದೆ ಎಂದು ಸ್ಪಷ್ಟನೆ ನೀಡಿತ್ತು.

ಸಿಗ್ನಲಿಂಗ್ ದೋಷದಿಂದಾಗಿ 40 ನಿಮಿಷ ಒಂದೇ ಕಡೆ ನಿಂತ ಮೆಟ್ರೋಸಿಗ್ನಲಿಂಗ್ ದೋಷದಿಂದಾಗಿ 40 ನಿಮಿಷ ಒಂದೇ ಕಡೆ ನಿಂತ ಮೆಟ್ರೋ

ಪಾಳಿ ವ್ಯವಸ್ಥೆಯಲ್ಲಿ ನೌಕರರು ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶವಿಲ್ಲ ಎಂದು ನಿಗಮ ತಿಳಿಸಿದೆ. ಗುತ್ತಿಗೆ ಪದ್ಧತಿ ಪ್ರಕಾರ ಮೂರು ವರ್ಷ ಕೆಲಸ ಮಾಡಿದವರಿಗೆ ಮಾತ್ರ ನಿರಾಪೇಕ್ಷಣಾ ಪತ್ರ ನೀಡಲಾಗುವುದು, ಅರ್ಧದಲ್ಲೇ ರಾಜಿನಾಮೆ ನೀಡುವವರಿಗೆ ಪತ್ರ ನೀಡಲಾಗುವುದಿಲ್ಲ ಎಂದು ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿತ್ತು.

English summary
The management of BMRCL has become more adamant on their employees union as the management has clarified that there was no necessity of talks between and high court will takes it next course of action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X