ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂರು ತಿಂಗಳಾದರೂ ಗುತ್ತಿಗೆ ಪೌರ ಕಾರ್ಮಿಕರಿಗೆ ಸಂಬಳ ಇಲ್ಲ

|
Google Oneindia Kannada News

ಬೆಂಗಳೂರು, ಮಾರ್ಚ್ 12: ಹಲವು ವಾರ್ಡ್ ಗಳಲ್ಲಿನ ಪೌರ ಕಾರ್ಮಿಕರಿಗೆ ಕಳೆದ ಮೂರು ತಿಂಗಳಿನಿಂದ ವೇತನ ದೊರೆತಿಲ್ಲ. ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ಆರ್ ಟಿ ಜಿಎಸ್ ಮೂಲಕ ಸಂಬಳವನ್ನು ವರ್ಗಾವಣೆ ಮಾಡುವ ವ್ಯವಸ್ಥೆ ಜಾರಿಗೆ ಬಂದಿದ್ದು, ಕೆಲವರು ಬ್ಯಾಂಕ್ ಖಾತೆ ವಿವರ ಇನ್ನೂ ಪಾಲಿಕೆ ಅಧಿಕಾರಿಗಳಿಗೆ ತಲುಪಿಲ್ಲ. ಇದರಿಂದಾಗಿ ಕಾರ್ಮಿಕರ ಖಾತೆಗೆ ಹಣ ಜಮೆಯಾಗುವುದು ವಿಳಂಬವಾಗಿದೆ.

ಗುತ್ತಿಗೆ ಪೌರಕಾರ್ಮಿಕರಿಗೆ ಜನವರಿ ತಿಂಗಳ ವೇತನವನ್ನು ಎರಡು ತಿಂಗಳು ಕಳೆದ ಬಳಿಕ ಪಾವತಿ ಮಾಡಲಾಗಿದೆ. ಕೆಲವೊಂದು ವಾರ್ಡ್ ಗಳಲ್ಲಿ ಕಾರ್ಮಿಕರಿಗೆ ವೇತನ ಬಿಡುಗಡೆಯಾಗಿದೆ. ಆದರೆ, ಬಹುತೇಕ ಕಾರ್ಮಿಕರಿಗೆ ಮೂರು ತಿಂಗಳು ಮುಗಿದರೂ ಸಂಬಳ ಸಿಕ್ಕಿಲ್ಲ. ಹೀಗಾಗಿ, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಪೌರಕಾರ್ಮಿಕರ ಖಾತೆಗೆ ವೇತನ: ಹೈಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಕೆ ಪೌರಕಾರ್ಮಿಕರ ಖಾತೆಗೆ ವೇತನ: ಹೈಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಕೆ

ಕೆಲ ಗುತ್ತಿಗೆದಾರರು ಪೌರ ಕಾರ್ಮಿಕರಿಗೆ ಸಕಾಲಕ್ಕೆ ಸಂಬಳ ನೀಡುತ್ತಿರಲಿಲ್ಲ. ಹೀಗಾಗಿ, ಸರ್ಕಾರದ ಆದೇಶದಂತೆ ಪಾಲಿಕೆಯಿಂದಲೇ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ವೇತನವನ್ನು ವರ್ಗಾಯಿಸಲಾಗುತ್ತಿದೆ.

No salary since three months for Pourakarmikas

ಇದರಿಂದ ಗುತ್ತಿಗೆದಾರರಿಂದ ಶೋಷಣೆಗೆ ಒಳಗಾಗುವುದು ತಪ್ಪಲಿದೆ. ಈಗಾಗಲೇ ವೇತನ ಪಾವತಿಗೆ 27ಕೋಟಿ ರೂ ಗಳನ್ನು ವಲಗಳಿಗೆ ಬಿಡುಗಡೆ ಮಾಡಲಾಗಿದೆ. ಜನವರಿ ತಿಂಗಳ ಸಂಬಳವನ್ನು ನೀಡುತ್ತಿದ್ದು, ಶೀಘ್ರದಲ್ಲೇ ಫೆಬ್ರವರಿಯ ವೇತನವನ್ನೂ ನೀಡಲಾಗುವುದು ಎಂದು ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ತಿಳಿಸಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಪೌರ ಕಾರ್ಮಿಕರು ಬಯೋಮೆಟ್ರಿಕ್ ಬಯೋ ಮೆಟ್ರಿಕ್, ಇಎಸ್ ಐ, ಪಿಎಫ್ ಮಾಹಿತಿ, ಬ್ಯಾಂಕ್ ಖಾತೆಯ ವಿವರಗಳನ್ನು ನೀಡುವಲ್ಲಿ ತಡ ಮಾಡಿದರು. ಈವರೆಗೆ ಸುಮಾರು 16 ಸಾವಿರ ಮಂದಿ ಮಾತ್ರ ಬಯೋಮೆಟ್ರಿಕ್ ನೀಡಿದ್ದಾರೆ. ಸಂಪೂರ್ಣ ವಿವರಗಳನ್ನು ಒದಗಿಸುವವರ ಬ್ಯಾಂಕ್ ಖಾತೆಗಳಿಗೆ ವೇತನವನ್ನು ಜಮೆ ಮಾಡಲಾಗುತ್ತಿದೆ ಎಂದರು.

ಕೆಲವೊಂದು ವಾರ್ಡ್ ಗಳಲ್ಲಿ ಮಾತ್ರ ಪೌರ ಕಾರ್ಮಿಕರಿಗೆ ನೇರವಾಗಿ ಪಾಲಿಕೆಯಿಂದ ವೇತನ ನೀಡಲಾಗಿದೆ. ಹಲವು ಕಡೆ ಇನ್ನೂ ನೀಡಿಲ್ಲ. ಎರಡು ತಿಂಗಳ ಬಳಿಕ ಜನವರಿಯ ಸಂಬಳ ನೀಡಲಾಗಿದೆ. ಇದರಿಂದ ಪೌರಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಕಾರ್ಮಿಕರ ಸಂಘದ ಸದಸ್ಯರು ತಿಳಿಸಿದ್ದಾರೆ.

English summary
Hundreds of Poura Karmikas have not get their salary as the BBMP was unable to open savings accounts in banks ensuring necessary documents. The officials have said the process of disbursing salary of month of January has taken place and remaining will be sorted out soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X