• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಯ್ದೆಯೊಂದಕ್ಕೆ ಈ ಮಟ್ಟಿನ ವಿರೋಧ ಹಿಂದೆ ನೋಡಿಲ್ಲ: ಮಾಧುಸ್ವಾಮಿ

By ಅನಿಲ್ ಬಾಸೂರ್
|

ಬೆಂಗಳೂರು, ಡಿಸೆಂಬರ್ 21: ಒಂದು ಕಾಯ್ದೆಯ ವಿರುದ್ಧ ಇಷ್ಟು ವಿರುದ್ದ ದಿಕ್ಕಿನ‌ ಪರಿಣಾಮ ಉಂಟು ಮಾಡಿದ್ದನ್ನು ಇತ್ತೀಚಿನ ದಿನಗಳಲ್ಲಿ ನಾವು ನೋಡಿರಲಿಲ್ಲ ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪೌರತ್ವ ಕಾಯ್ದೆ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದವರು ಯಾವುದೇ ತಪ್ಪು ಮಾಡಿಲ್ಲ. ಸಂವಿಧಾನ ಬದ್ದವಾದ ಕೆಲಸವನ್ನೇ ಮಾಡಿದ್ದೇವೆ. ನಾವು ಯಾವುದೇ ಧರ್ಮವನ್ನು ಇಬ್ಬಾಗ ಮಾಡಿಲ್ಲ. ಕಿರುಕುಳ ಅನುಭವಿಸಿ ಬಂದವರಿಗೆ ಸಹಾಯ ಹಸ್ತ ಚಾಚುತ್ತಿದ್ದೇವೆ ಅಷ್ಟೇ ಎಂದು ಸಿಎಎ ಮತ್ತು ಎನ್‌ಆರ್‌ಸಿ ಯನ್ನು ಸಮರ್ಥಿಸಿಕೊಂಡರು.

ಮಂಗಳೂರು ಪೊಲೀಸರ ದೌರ್ಜನ್ಯದ ಭೀಕರ ಅನುಭವ ಹಂಚಿಕೊಂಡ ಕೇರಳ ಪತ್ರಕರ್ತರು

ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ 10 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿದೆ.ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಬದುಕಲೇ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಮುಖವಾಗಿ ಆರು ಧರ್ಮಗಳ ಜನ ಅಲ್ಲಿ ಇರಲು ಸಾಧ್ಯವೇ ಇಲ್ಲ ಎಂದು ತಮ್ಮ ಮೂಲ‌ಮನೆಯನ್ನು ಹುಡುಕಿಕೊಂಡು ಬಂದಾಗ ಅವರಿಗೆ ಸ್ಟೇಟ್ ಲೆಸ್ ಪರಿಸ್ಥಿತಿ ನೀಡಬೇಕಾ. ಸರಿಯಾದ ದಾಖಲೆ ಇಲ್ಲದೆ ಈ ರೀತಿ ಬಂದಿರುವವರು ಸುಮಾರು 30,000 ಜನ ಇದ್ದಾರೆ.ಇವರಿಗೆ ಪೌರತ್ವ ಕೊಡಬೇಕು ಎಂಬುದಷ್ಟೇ ನಮ್ಮ ಇಚ್ಚೆ ಎಂದರು.

ಮೂರು ರಾಷ್ಟ್ರಗಳಿಂದ ಬಂದವರಿಗೆ ಸಹಜ ಪೌರತ್ವ ಸಿಗುತ್ತದೆ

ಮೂರು ರಾಷ್ಟ್ರಗಳಿಂದ ಬಂದವರಿಗೆ ಸಹಜ ಪೌರತ್ವ ಸಿಗುತ್ತದೆ

ಸಾಮಾನ್ಯವಾದ ಪರಿಸ್ಥಿತಿಯಲ್ಲಿ ಕಾನೂನು ಬದ್ದವಾಗಿ ಆ ಮೂರು ರಾಷ್ಟ್ರಗಳಿಂದ ಬಂದು ನೆಲೆಸಿರುವ ಜನರಿಗೆ ಸಹಜ ರೀತಿಯಲ್ಲೇ ಪೌರತ್ವ ಸಿಗುತ್ತದೆ. ಈಗ ಈಶಾನ್ಯ ರಾಜ್ಯಗಳಿಗೆ ಪೌರತ್ವ ಕಾಯ್ದೆ ಅನ್ವಯಿಸುವುದಿಲ್ಲ. ಸಾಮಾನ್ಯವಾದ ಪರಿಸ್ಥಿತಿಯಲ್ಲಿ ಕಾನೂನು ಬದ್ದವಾಗಿ ಆ ಮೂರು ರಾಷ್ಟ್ರಗಳಿಂದ ಬಂದು ನೆಲೆಸಿರುವ ಜನರಿಗೆ ಸಹಜ ರೀತಿಯಲ್ಲೇ ಪೌರತ್ವ ಸಿಗುತ್ತದೆ ಎಂದು ಮಾಧುಸ್ವಾಮಿ ಮಾಹಿತಿ ನೀಡಿದರು.

ಈಗ ಮಾನವ ಹಕ್ಕಿನ ಪ್ರಶ್ನೆ ಏಕೆ ಬಂದಿದೆ: ಮಾಧುಸ್ವಾಮಿ ಪ್ರಶ್ನೆ

ಈಗ ಮಾನವ ಹಕ್ಕಿನ ಪ್ರಶ್ನೆ ಏಕೆ ಬಂದಿದೆ: ಮಾಧುಸ್ವಾಮಿ ಪ್ರಶ್ನೆ

ಇದಾದ ನಂತರ ಎನ್ ಆರ್ ಸಿ ಪ್ರಾರಂಭವಾಗುತ್ತದೆ‌. ಆಗ ತಾವು ರಿಜಿಸ್ಟರ್ ಮಾಡಿಸಲು ಸಾಧ್ಯವಾಗಲ್ಲ. ದಾಖಲೆ ಕೊಡಲು ಆಗಲ್ಲ ಅನ್ನೋದು ಅವರ ಆತಂಕ‌. ಅವರಿಗೆ ಹಲವು ರಾಜಕೀಯ ಪಕ್ಷಗಳವರು ಕುಮ್ಮಕ್ಕು ಕೊಡುವ ಶಡ್ಯಂತ್ರ ಮಾಡುತ್ತಿದ್ದಾರೆ‌. ಈಗ ಮುಸ್ಲೀಮರನ್ನು ಯಾಕೆ ಸೇರಿಸಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಪ್ರಶ್ನಿಸುತ್ತಿರುವವರು ಅಂದು ಆ ಮೂರು ರಾಷ್ಟ್ರಗಳಲ್ಲಿ ಆರು ಧರ್ಮೀಯರು ಕಿರುಕುಳ ಅನುಭವಿಸುತ್ತಿದ್ದಾಗ ಯಾಕೆ ಪ್ರಶ್ನಿಸಲ್ಲ‌.ಆಗಿಲ್ಲದ ಮಾನವಹಕ್ಕುಗಳ ಉಲ್ಲಂಘನೆ ಈಗ ಹೇಗೆ ಆಗುತ್ತದೆ? ಎಂದು ಮಾಧುಸ್ವಾಮಿ ಪ್ರಶ್ನೆ ಮಾಡಿದರು.

ಹಿಂದುತ್ವದ ಅವಹೇಳನೆ: ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು

ನೆರೆಯ ದೇಶಗಳಲ್ಲಿ ಅಲ್ಪಸಂಖ್ಯಾತರಿಗೆ ಕಿರುಕುಳ: ಅಶ್ವತ್ಥನಾರಾಯಣ್

ನೆರೆಯ ದೇಶಗಳಲ್ಲಿ ಅಲ್ಪಸಂಖ್ಯಾತರಿಗೆ ಕಿರುಕುಳ: ಅಶ್ವತ್ಥನಾರಾಯಣ್

ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಮಾತನಾಡಿ, ಅಕ್ಕಪಕ್ಕದ ದೇಶಗಳ ನಾಗರೀಕರು ನಮ್ಮ ದೇಶಕ್ಕೆ ವಲಸೆ ಬಂದಿದಾರೆ, ಆ ದೇಶಗಳು ಧರ್ಮಾಧಾರಿತವಾಗಿವೆ, ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಶೇ.25 ಧಾರ್ಮಿಕ ಅಲ್ಪಸಂಖ್ಯಾತರಿದ್ದರು, ಧಾರ್ಮಿಕ ಅಲ್ಪಸಂಖ್ಯಾತರು ಈಗ ಆ ದೇಶಗಳಲ್ಲಿ ಈಗ ಶೇ.3.06 ರಷ್ಟು ಮಾತ್ರ ಇದಾರೆ, ಅಲ್ಲಿ ಬದುಕುವ ವಾತಾವರಣ ಇರಲಿಲ್ಲ, ನಿತ್ಯ ಕಿರುಕುಳ, ಬಲಾತ್ಕಾರ ನಡೆಯುತ್ತಿತ್ತು, ಹಾಗಾಗಿ ಆ ಧಾರ್ಮಿಕ ಅಲ್ಪಸಂಖ್ಯಾತರು ತವರೂರು ಭಾರತಕ್ಕೆ ನುಸುಳಿಕೊಂಡು ಬರುವಂತಾಯ್ತು ಎಂದರು.

ಸಿಎಎ ಮೂಲಕ ಧಾರ್ಮಿಕ ಅಲ್ಪಸಂಖ್ಯಾತರಿಗೆ ನ್ಯಾಯ

ಸಿಎಎ ಮೂಲಕ ಧಾರ್ಮಿಕ ಅಲ್ಪಸಂಖ್ಯಾತರಿಗೆ ನ್ಯಾಯ

ಅಧಿಕೃತವಾಗಿ ಆ ಜನ ಭಾರತಕ್ಕೆ ಬರುವ ಪರಿಸ್ಥಿತಿ ಇರಲಿಲ್ಲ, ಭಾರತಕ್ಕೆ ಅಕ್ರಮವಾಗಿ ವಲಸೆ ಬಂದವರಿಗೆ ಪೌರತ್ವ ಕೊಡುವುದು ಸಮಸ್ಯೆ ಆಗಿತ್ತು, 2014 ಕ್ಕೂ ಮುಂಚೆ ವಲಸೆ ಬಂದವರಿಗಾಗಿ ಪೌರತ್ವ ಕೊಡಲು ಸಿಎಎ ಕಾಯ್ದೆ ತರಲಾಯಿತು, ಅಮೆರಿಕದ ಕಾಯ್ದೆಯಲ್ಲೂ ವಲಸಿಗ ಕ್ರೈಸ್ತರಿಗೆ ಪೌರತ್ವ ಕೊಡಲು ಆದ್ಯತೆ ಕೊಡಲಾಗಿದೆ, ಆದರೆ ನಮ್ಮಲ್ಲಿ ಆ ರೀತಿ‌ ಮಾಡಿಲ್ಲ, ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನ ಗಳಲ್ಲಿ‌ ನಡೆದ ದೌರ್ಜನ್ಯಕ್ಕೆ ಇಲ್ಲಿ‌ ನ್ಯಾಯ ಕೊಡಲಾಗಿದೆ, ಸಿಎಎ ಮೂಲಕ ಅಲ್ಲಿನ ಧಾರ್ಮಿಕ‌ ಅಲ್ಪಸಂಖ್ಯಾತರಿಗೆ ನ್ಯಾಯ ಕೊಡಲಾಗಿದೆ, ಆದರೆ ಆ ದೇಶಗಳ ಮುಸ್ಲಿಮರಿಗೂ ಪೌರತ್ವ ಕೊಡಿ ಅನ್ನುವ ಆಗ್ರಹ ಕೇಳಿಬರ್ತಿದೆ, ಇದು ಎಷ್ಟರ ಮಟ್ಟಿಗೆ ನ್ಯಾಯ ? ಎಂದು ಅವರು ಪ್ರಶ್ನಿಸಿದರು.

'ಚೀನಾಕ್ಕೆ ಹೋಗದೆ ರೋಹಿಂಗ್ಯಾಗಳು ಭಾರತಕ್ಕೆ ಏಕೆ ಬಂದರು?'

'ಚೀನಾಕ್ಕೆ ಹೋಗದೆ ರೋಹಿಂಗ್ಯಾಗಳು ಭಾರತಕ್ಕೆ ಏಕೆ ಬಂದರು?'

ರೋಹಿಂಗ್ಯ ಮುಸ್ಲಿಮರಿಗೆ ಚೀನಾ ಗಡಿ‌ 400 ಕಿ.ಮೀ‌ ಇತ್ತು, ನಮ್ಮ ದೇಶದ ಗಡಿ 2,700 ಕಿ.ಮೀ‌ ಇತ್ತು, ಅವರು ಚೀನಾಕ್ಕೆ ಹೋಗದೇ ನಮ್ಮ ದೇಶಕ್ಕೆ ಯಾಕ್ ಬಂದ್ರು ?, ಸಿಎಎ ವಿಚಾರದಲ್ಲಿ ಗೊಂದಲ ಮೂಡಿಸುವ ಯತ್ನಗಳು ನಡೆಯುತ್ತಿವೆ, ಗೊಂದಲ ಹುಟ್ಟಿಸೋರಲ್ಲಿ ಕಾಯ್ದೆ ಕುರಿತು ಸ್ಪಷ್ಟತೆ ಮೂಡಿಸಬೇಕಿದೆ ಎಂದು ಅವರು ಹೇಳಿದರು.

English summary
No Recent Acts like CAA and NRC faces protest like this says minister JC Madhu Swamy. He talked in BJP office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X