ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಅನುಮತಿ ಇಲ್ಲ

ಬೆಂಗಳೂರು, ಡಿಸೆಂಬರ್ 25 : ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಹೊಸ ವರ್ಷಾಚರಣೆಗೆ ಅರಣ್ಯ ಇಲಾಖೆ ನಿಯಮಗಳನ್ನು ರೂಪಿಸಿದೆ. ಮೋಜು-ಮಸ್ತಿ, ಪುಂಡಾಟಗಳನ್ನು ಮಾಡದಂತೆ ಸೂಚನೆ ನೀಡಿದೆ.

ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ರೆಸಾರ್ಟ್, ಹೊಟೇಲ್, ಫಾರಂ ಹೌಸ್‌ಗಳಲ್ಲಿ ಹೊಸ ವರ್ಷಾಚರಣೆ ಮಾಡುವವರು ಅಬ್ಬರದ ಸಂಗೀತ ಹಾಕುವಂತಿಲ್ಲ. ಸದ್ದು ಗದ್ದಲವಿಲ್ಲದೇ ವರ್ಷಾಚರಣೆ ಮಾಡಬೇಕು ಎಂದು ಹೇಳಿದೆ.

ಬಂಡೀಪುರ ಅರಣ್ಯದೊಳಗಿರುವ ಡಾರ್ಮೆಟರಿ ಮತ್ತು ವಸತಿಗೃಹಗಳಲ್ಲಿ ಪ್ರವಾಸಿಗರಿಗೆ ತಂಗಲು ಡಿಸೆಂಬರ್ 31ರಂದು ಅವಕಾಶ ನೀಡಬಾರದು ಎಂದು ಅರಣ್ಯ ಇಲಾಖೆ ಹೇಳಿದೆ. ಬುಕ್ಕಿಂಗ್ ಮಾಡಿಕೊಳ್ಳಬಾರದು ಎಂದು ನಿರ್ದೇಶನ ನೀಡಿದೆ.

No new year celebration in Bandipur forest

ಬಂಡೀಪುರ ಅರಣ್ಯ ವ್ಯಾಪ್ತಿಯ ಹಲವಾರು ಗ್ರಾಮಗಳು ಪರಿಸರ ಸೂಕ್ಷ್ಮ ವಲಯಕ್ಕೆ ಸೇರುತ್ತವೆ. ಇಲ್ಲಿ ಹಲವು ರೆಸಾರ್ಟ್ ಮತ್ತು ಹೋಂ ಸ್ಟೇಗಳಿವೆ, ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಿಂದ ಇಲ್ಲಿಗೆ ಹಲವು ಜನರ ಹೊಸ ವರ್ಷಾಚರಣೆ ಮಾಡಲು ಆಗಮಿಸುತ್ತಾರೆ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪಟಾಕಿ ಸಿಡಿಸುವುದು, ಧ್ವನಿವರ್ಧಕ ಬಳಕೆ ಸೇರಿದಂತೆ ಇತರ ಚಟುವಟಿಕೆ ನಡೆಸುವುದರಿಂದ ಕಾಡಿನಲ್ಲಿರುವ ಪ್ರಾಣಿಗಳಿಗೆ ತೊಂದರೆ ಆಗಲಿದೆ. ಆದ್ದರಿಂದ, ಅಬ್ಬರದ ಸಂಗೀತ ಸೇರಿದಂತೆ ಗದ್ದಲ ಮಾಡಬಾರದು ಎಂದು ಸೂಚಿಸಲಾಗಿದೆ.

'ಯಾರಿಗೂ ತೊಂದರೆ ಆಗದಂತೆ ಹೊಸ ವರ್ಷಾಚರಣೆ ಮಾಡಲಿ. ಹೆಚ್ಚು ಶಬ್ದ, ಧ್ವನಿ ವರ್ಧಕ ಬಳಕೆ ಮಾಡುವುದರಿಂದ ಪ್ರಾಣಿ ಪಕ್ಷಿಗಳು ಗಾಬರಿಗೊಂಡು ಬೇರೆಡೆ ಹೋಗುವ ಸಾಧ್ಯತೆ ಇದೆ' ಎಂದು ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+