ದೀಪಾವಳಿಗೆ ಹೊಸ ವಾಹನ ಖರೀದಿಗೆ ಬ್ರೇಕ್ ಹಾಕುತ್ತಾ ಸರ್ಕಾರ?
Recommended Video

ಬೆಂಗಳೂರು, ನವೆಂಬರ್ 2: ದೀಪಾವಳಿಗೆ ಹೊಸ ವಾಹನಗಳ ಖರೀದಿಗೆ ಸರ್ಕಾರ ಬ್ರೇಕ್ ಹಾಕುವ ಸಾಧ್ಯತೆ ಇದೆ, ಈ ಕುರಿತು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಬಳಿ ಚರ್ಚಿಸುತ್ತೇನೆ ಎಂದಿದ್ದಾರೆ.
ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಳವಾಗುತ್ತಿದೆ ಜತೆಗೆ ವಾಯು ಮಾಲಿನ್ಯ ಪ್ರಮಾಣವೂ ಏರಿಕೆಯಾಗಿದ್ದು ಸಮೂಹ ಸಾರಿಗೆಯನ್ನು ಬಳಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತಿದೆ. ಬೆಂಗಳೂರಲ್ಲಿ 75 ಲಕ್ಷ ವಾಹನಗಳಿವೆ. ಇನ್ನೂ ಹೆಚ್ಚಿನ ವಾಹನಗಳ ನೋಂದಣಿ ಮಾಡಿದರೆ ಟ್ರಾಫಿಕ್ ಸಮಸ್ಯೆ ಇನ್ನೂ ಹೆಚ್ಚಳವಾಗಲಿದೆ ಎನ್ನುವುದು ಉಪಮುಖ್ಯಮಂತ್ರಿಯವರ ವಾದವಾಗಿದೆ.

ಈ ಹಿಂದೆ ಕಳೆದ ವಾರವಷ್ಟೇ ಶೀಘ್ರ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದರು ಆದರೆ ಸಾರಿ ಸಚಿವ ಡಿಸಿ ತಮ್ಮಣ್ಣ ಈ ವಿಚಾರವೇ ನನಗೆ ಗೊತ್ತಿಲ್ಲ ಎಂದಿದ್ದರು ಇದೀಗ ಮುಖ್ಯಮಂತ್ರಿ ಜತೆಗೆ ಸಭೆಗೆ ತಮ್ಮಣ್ಣ ಅವರನ್ನೂ ಕರೆದೊಯ್ಯುತ್ತಾರೋ ಅಥವಾ ಪರಮೇಶ್ವರ್ ಅವರೇ ನೇರವಾಗಿ ಸಭೆ ನಡೆಸುತ್ತಾರೋ ಎನ್ನುವುದು ಪ್ರಶ್ನೆಯಾಗಿದೆ. ವಾರಗಳ ಬಳಿಕ ಮತ್ತೆ ಈ ಸುದ್ದಿ ಹರಿದಾಡುತ್ತಿದೆ. ಹೊಸ ವಾಹನಗಳ ತಡೆಗೆ ಸರ್ಕಾರ ತಾತ್ಕಾಲಿಕ ತಡೆಯೊಡ್ಡಲಿದೆ.












Click it and Unblock the Notifications