ಬೆಂಗಳೂರು ಲಾಕ್‌ಡೌನ್‌? ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸ್ಪಷ್ಟನೆ

ಬೆಂಗಳೂರು, ಜೂನ್ 25: ರಾಜ್ಯದಲ್ಲಿ ಕೊರೊನಾ ವೈರಸ್ ಕೇಸ್‌ಗಳ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಮತ್ತೊಮ್ಮೆ ಲಾಕ್‌ಡೌನ್‌ ಜಾರಿ ಮಾಡಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ.

ವಿಶೇಷವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲಾಕ್‌ಡೌನ್‌ ಮಾಡಲೇಬೇಕು ಎಂದು ವಿಪಕ್ಷಗಳು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ. ಇದನ್ನ ಗಮನಿಸಿರುವ ಬೆಂಗಳೂರು ಸಾರ್ವಜನಿಕರು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದಾರೆ.

ಈ ಕುರಿತು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. '' ಆತ್ಮೀಯ ನಾಗರಿಕರೇ, ಪರಿಸ್ಥಿತಿಯನ್ನು ನಿರಂತರವಾಗಿ ಸರ್ಕಾರವು ಅವಲೋಕಿಸುತ್ತಿರುವುದರಿಂದ ಭಯಪಡುವ ಅಗತ್ಯವಿಲ್ಲ. ಲಾಕ್‌ಡೌನ್ ಜಾರಿಗೊಳಿಸುವ ಅಥವಾ ಸೀಲ್‌ಡೌನ್‌ ಮಾಡುವ ಯೋಜನೆ ಇದ್ದರೆ ಅಧಿಕೃತವಾಗಿ ತಿಳಿಸಲಾಗುತ್ತದೆ'' ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಷಯ ಬಗ್ಗೆ ಅಧಿಕೃತವಲ್ಲದ ಯಾವುದೇ ಸುದ್ದಿ ವರದಿಗಳನ್ನು ದಯವಿಟ್ಟು ನಂಬಬೇಡಿ. ವದಂತಿಗಳನ್ನು ಹರಡದಂತೆ ಜಾಗೃತಿ ವಹಿಸಿ ಎಂದು ಎಲ್ಲರಿಗೂ ವಿನಂತಿಸಿಕೊಂಡಿದ್ದಾರೆ.

No need to panic about Lockdown said BBMP Commissioner Anil Kumar

ಇನ್ನು ಬೆಂಗಳೂರಿನಲ್ಲಿ ಲಾಕ್‌ಡೌನ್‌ಮಾಡುವ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು. ''ಇಂದು ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಲಾಗುತ್ತೆ. ನಾಳೆ ಬೆಂಗಳೂರಿನ ಸರ್ವಪಕ್ಷ ಶಾಸಕ, ಸಂಸದರ ಸಭೆ ಕರೆದು ನಿರ್ಧಾರ ಮಾಡಲಾಗುತ್ತೆ'' ಎಂದಿದ್ದಾರೆ.

ಪ್ರಸ್ತುತ ಬೆಂಗಳೂರಿನ ಕೆಲವು ಪ್ರದೇಶಗಳನ್ನ ಸೀಲ್‌ಡೌನ್‌ ಮಾಡಲಾಗಿದೆ. ಹೊಸದಾಗಿ ಕೊರೊನಾ ವೈರಸ್ ಕೇಸ್ ಪತ್ತೆಯಾದ ಕಾರಣ ವಾರ್ಡ್‌ಗಳನ್ನು ಲಾಕ್‌ಡೌನ್‌ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+