• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪಾರ್ಟಮೆಂಟ್‌ಗಳಲ್ಲಿ ಇವಿ ಚಾರ್ಜಿಂಗ್ ಪಾಯಿಂಟ್ ಕಡ್ಡಾಯವಲ್ಲ

|
Google Oneindia Kannada News

ಬೆಂಗಳೂರು ಜು.5: ದೇಶ, ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ (ಇವಿ) ಬಳಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅವುಗಳಿಗೆ ಚಾರ್ಜಿಂಗ್ ಪಾಯಿಂಟ್ ಒದಗಿಸುವುದೇ ಮುಂದೆ ಸವಾಲಾಗಬಹುದು. ಬೆಂಗಳೂರಿನಲ್ಲಿ ಇವಿ ಮಾಲೀಕರು ಮತ್ತು ಅಪಾರ್ಟಮೆಂಟ್‌ಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನಡುವೆ ಚಾರ್ಜಿಂಗ್ ಪಾಯಿಂಟ್ ಸ್ಥಾಪಿಸುವಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಹೀಗಾಗಿಯೇ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸುವ ವಿಚಾರದಲ್ಲಿ ಬೆಸ್ಕಾಂ ಸಹಾಯಕ್ಕೆ ಬರಬೇಕು ಎಂದು ಅಪಾರ್ಟ್‌ಮೆಂಟ್‌ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ. ಜೊತೆಗೆ ಇವಿ ಮಾಲೀಕರು ಚಾರ್ಜಿಂಗ್ ಪಾಯಿಂಟ್ ಸ್ಥಾಪಿಸಲು ನಿವಾಸಿಗಳು/ ಸಂಘದಿಂದ ವಿರೋಧ ವ್ಯಕ್ತಪಡಿಸಲಾಗುತ್ತಿದೆ.

ಇತ್ತೀಚೆಗೆ ಬೆಸ್ಕಾಂ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿದ ಬೆಸ್ಕಾಂ ನಿರ್ದೇಶಕ (ತಾಂತ್ರಿಕ) ಡಿ. ನಾಗಾರ್ಜುನ, "ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ನಿಯಮಗಳ ಪ್ರಕಾರ, 5,000 ಚದರ ಮೀಟರ್‌ನಲ್ಲಿ ಹರಡಿರುವ ಯಾವುದೇ ಹೊಸ ಅಪಾರ್ಟ್‌ಮೆಂಟ್ ಸಂಕೀರ್ಣ, ಮಾಲ್, 250 ಕಿಲೋವ್ಯಾಟ್‌ಗಿಂತ ಹೆಚ್ಚು ವಿದ್ಯುತ್ ಬಳಸುತ್ತಿದ್ದರೆ ಅವರು ಇವಿ ಮಾಲೀಕರಿಗೆ ಪಾರ್ಕಿಂಗ್ ಸ್ಥಳ ಸಹಿತ ಎರಡು ಚಾರ್ಜಿಂಗ್ ಪಾಯಿಂಟ್‌ಗಳನ್ನು ಒದಗಿಸುವುದ ಕಡ್ಡಾಯವಾಗಿರುತ್ತದೆ" ಎಂದರು.

ಹಾಲಿ ಅಪಾರ್ಟ್‌ಮೆಂಟ್‌ಗೆ ನಿಯಮ ಕಡ್ಡಾಯವಿಲ್ಲ

ಹಾಲಿ ಅಪಾರ್ಟ್‌ಮೆಂಟ್‌ಗೆ ನಿಯಮ ಕಡ್ಡಾಯವಿಲ್ಲ

ಹಾಲಿ ಅಸ್ತಿತ್ವದಲ್ಲಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಒದಗಿಸುವುದು ಕಡ್ಡಾಯವಲ್ಲ. ಅದರ ನಿರ್ಧಾರವನ್ನು ತೆಗೆದುಕೊಳ್ಳಲು ಆಯಾ ಅಪಾರ್ಟ್‌ಮೆಂಟ್ ಮಾಲೀಕರು ಇಲ್ಲವೇ ನಿವಾಸಿ ಕ್ಷೇಮಾಭಿವೃದ್ಧಿ ಸಂಘಕ್ಕೆ ಬಿಟ್ಟಿರಲಾಗಿರುತ್ತದೆ. ಈ ಕಾರಣಕ್ಕೆಇಂದು ಹಾಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಇವಿ ಮಾಲೀಕರು ಮತ್ತು ಸಂಘದ ನಡುವೆ ಚಾಜಿಂಗ್ ಪಾಯಿಂಟ್ ಸ್ಥಾಪನೆಗೆ ಭಿನ್ನಾಬಿಪ್ರಾಯಗಳು ಉಂಟಾಗಿವೆ. ಆದರೆ ಬೆಸ್ಕಾಂ ಇವರಿಗೆ ನೆರವಾಗಲು ಸಿದ್ಧವಿದೆ ಎಂದು ತಿಳಿಸಿದ್ದಾರೆ.

ಚಾರ್ಜಿಂಗ್ ಪಾಯಿಂಟ್ ಸುರಕ್ಷಿತವಲ್ಲ

ಚಾರ್ಜಿಂಗ್ ಪಾಯಿಂಟ್ ಸುರಕ್ಷಿತವಲ್ಲ

ಸುಮಾರು 200 ಫ್ಯ್ಲಾಟ್ ಗಳ ವಸತಿ ಸಮುಚ್ಚಯದಲ್ಲಿ ಕೆಲವೇ ಕೆಲವರು ಮಾತ್ರ ಇವಿ ಹೊಂದಿದ್ದಾರೆ. ಅವರಿಗಾಗಿ ವಿದ್ಯುತ್ ನೇರ ಸಂಪರ್ಕದ ಮೂಲಕ ಅಪಾರ್ಟ್‌ಮೆಂಟ್‌ಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಒದಗಿಸುವುದು ಅಷ್ಟು ಸುರಕ್ಷಿತವಲ್ಲ. ಕಾರುಗಳಿಗೆ ಮೀಟರ್ ಗಳಿಂದ ನೇರವಾಗಿ ವಿದ್ಯುತ್ ಮೂಲಕ ಚಾರ್ಜಿಂಗ್ ಒದಗಿಸುವುದು ಸುರಕ್ಷಿತವಲ್ಲ ಎಂದು ಬೆಂಗಳೂರು ಅಪಾರ್ಟಮೆಂಟ್ ಒಕ್ಕೂಟದ ಅಧ್ಯಕ್ಷ ನಾಗರಾಜ ತಿಳಿಸಿದ್ದಾರೆ.

ಅಪಾರ್ಟ್‌ಮೆಂಟ್‌ಗಳಲ್ಲಿ ಇರುವ ಕಡಿಮೆ ಇವಿ ಬಳಕೆದಾರರಿಗೆ ವಿದ್ಯುತ್ ಸಂಪರ್ಕ ಅಥವಾ ಚಾರ್ಜಿಂಗ್ ಪಾಯಿಂಟ್ ಒದಗಿಸಲು ಬೆಸ್ಕಾಂ ಮುಂದೆ ಬರಬಹುದು. ಪಾಯಿಂಟ್ ಸ್ಥಾಪನೆ ವೆಚ್ಚ ಹೇಗೋ ಭರಿಸಬಹುದು. ಆದರೆ ಕೇವಲ 6-10 ಇವಿ ಬಳಕೆದಾರರಿಗಾಗಿ ದೊಡ್ಡ ಮೊತ್ತದಲ್ಲಿ ಹಣ ವಿನಿಯೋಗಿಸುವುದು ಕಾರ್ಯ ಸಾಧುವಲ್ಲ ಎಂದು ಅಪಾರ್ಟಮೆಂಟ್ ನಿವಾಸಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇವಿ ಚಾರ್ಜಿಂಗ್ ಪಾಯಿಂಟ್ ಗೆ ವಿರೋಧಿಸುವ ಹಕ್ಕಿಲ್ಲ

ಇವಿ ಚಾರ್ಜಿಂಗ್ ಪಾಯಿಂಟ್ ಗೆ ವಿರೋಧಿಸುವ ಹಕ್ಕಿಲ್ಲ

ಇವಿ ಮಾಲೀಕರೇ ಚಾರ್ಜಿಂಗ್ ಪಾಯಿಂಟ್ ಸ್ಥಾಪಿಸಿಕೊಳ್ಳುವುದಕ್ಕೆ ಅಪಾರ್ಟಮೆಂಟ್ ಮಾಲೀಕರಿಗೆ ತಡೆಯಲು ಹಕ್ಕಿಲ್ಲ. ಬೆಸ್ಕಾಂ ನೆರವಿನಿಂದ ಇವಿ ಬಳಕೆದಾರ ಸ್ಥಾಪಿಸಿಕೊಂಡಿದ್ದ ಚಾರ್ಜಿಂಗ್ ಪಾಯಿಂಟ್‌ಗೆ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ನಿವಾಸಿಗಳು ಇಲ್ಲವೆ ಅಪಾರ್ಟಮೆಂಟ್ ಮಾಲೀಕರಿಗೆ ಭವಷ್ಯದ ಬಗ್ಗೆ, ಇವಿ ಬಗ್ಗೆ ಜಾಗೃತಿ ಇಲ್ಲ. ಈ ಕುರಿತು ಬೆಸ್ಕಾಂ, ಬಿಬಿಎಂಪಿ ಮಧ್ಯಪ್ರವೇಶಿಸಿದರು ಕೆಲವೆಡೆ ಸಮಸ್ಯೆ ಪರಿಹಾರವಾಗಿಲ್ಲ. ಈ ಸಂಬಂಧ ಇವಿ ಮಾಲೀಕರು ಸಂಘ/ ಅಪಾರ್ಟಮೆಂಟ್ ನಿವಾಸಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು ಇದೆ ಎಂದು ಇವಿ ಬಳಕೆದಾರರು ಆರೋಪಿಸಿದ್ದಾರೆ.

ಚಾರ್ಜಿಂಗ್ ಪಾಯಿಂಟ್ ಗೆ ಬೇಡಿಕೆ

ಚಾರ್ಜಿಂಗ್ ಪಾಯಿಂಟ್ ಗೆ ಬೇಡಿಕೆ

ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಅದಕ್ಕಾಗಿ ನಗರದಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳ ಸ್ಥಾಪನೆ, ಅವುಗಳಿಗೆ ಜಾಗ ಸೇರಿದಂತೆ ಸೂಕ್ತ ಮೂಲಸೌಲಭ್ಯ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಬೆಸ್ಕಾಂ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ)ದಡಿ ಖಾಸಗಿ, ಸ್ವಂತ ಕಚೇರಿ, ಅಪಾರ್ಟ್‌ಮೆಂಟ್ ನಿವಾಸಿಗಳನ್ನು ಪ್ರೇರೆಪಿಸಬೇಕು. ಚಾರ್ಜಿಂಗ್ ಪಾಯಿಂಟ್ ಗಳಿಗೆ ಹೆಚ್ಚು ಬೇಡಿಕೆ ಬರಲಿದೆ ಎಂದು ತಿಳಿದು ಕಾರ್ಯ ನಿರ್ವಹಿಸಬೇಕಿದೆ.

Recommended Video

   ಬಸವರಾಜ್ ಬೊಮ್ಮಾಯಿ ಅವರು ಪಿಎಸ್‌ಐ ನೇಮಕಾತಿ ಬಗ್ಗೆ ಮಾತನಾಡಿದ್ದಾರೆ | Oneindia
   English summary
   No provision to make charging points mandatory existing apartments, electric vehicle users are saying charging points should be installed in aprartments, the differnces have arisen between Ev owners and apartment oweners
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X