ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

3 ವರ್ಷದಲ್ಲಿ ಐಟಿ ಕಂಪನಿ ನೇಮಕಾತಿ ಕುಂಠಿತ..?

By Kiran B Hegde
|
Google Oneindia Kannada News

ಬೆಂಗಳೂರು, ನ. 11: ಐಟಿ ಉದ್ಯೋಗಿಗಳಿಗೊಂದು ಆತಂಕದ ಸುದ್ದಿ ಕಾದಿದೆ. ಕ್ರಿಸಿಲ್ ಕಂಪನಿ ವರದಿ ಪ್ರಕಾರ ಐಟಿ ಕಂಪನಿಗಳು ಇನ್ನು ಮುಂದೆ ಉದ್ಯೋಗ ನೀಡಿಕೆಯನ್ನು ಅತ್ಯಂತ ಕಡಿಮೆಗೊಳಿಸಲಿವೆ. ಅಲ್ಲದೆ, ಮುಂದಿನ ಮೂರು ವರ್ಷಗಳಲ್ಲಿ ನೇಮಕಾತಿ ಪ್ರಮಾಣ ಅತ್ಯಂತ ಕುಂಠಿತಗೊಳ್ಳಲಿದೆ.

ವರದಿಯ ಪ್ರಕಾರ, ಐಟಿ ಕಂಪನಿಗಳ ಆದಾಯದಲ್ಲೇನೂ ಭಾರೀ ಪ್ರಮಾಣದ ಏರುಪೇರು ಉಂಟಾಗುವುದಿಲ್ಲ. ಶೇ. 13ರಷ್ಟು ಉತ್ತಮ ಗಳಿಕೆಯನ್ನೇ ದಾಖಲಿಸುತ್ತವೆ. ಆದರೆ, ಉದ್ಯೋಗ ನೇಮಕಾತಿಗೆ ಮಾತ್ರ ಮುಂದಾಗುವುದಿಲ್ಲ ಎಂದು ಕ್ರಿಸಿಲ್ ಕಂಪನಿ ಹೇಳಿಕೆ ನೀಡಿದೆ.

ITnew

ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿರುವ ಕಾರಣ ಗ್ರಾಹಕರು ಖರೀದಿಯಿಂದ ವಿಮುಖರಾಗುತ್ತಿದ್ದಾರೆ. ಮಾರುಕಟ್ಟೆ ಕುಸಿಯುತ್ತಿದ್ದು, ಕಂಪನಿಗಳು ಖರ್ಚನ್ನು ಕಡಿಮೆಗೊಳಿಸಿ ಲಾಭ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿವೆ. ಆದ್ದರಿಂದ ನೇಮಕಾತಿಗಳ ಮೇಲೆ ಹೊಡೆತ ಬೀಳಲಿವೆ. ಇದು ಈಗಷ್ಟೇ ಶಿಕ್ಷಣ ಮುಗಿಸಿ ಹೊರಬಂದಿರುವ ಹಾಗೂ ಭವಿಷ್ಯದಲ್ಲಿ ಬರಲಿರುವ ಐಟಿ ಪದವೀಧರರಿಗೆ ಇದೊಂದು ಆಘಾತಕರ ಸುದ್ದಿಯಾಗಲಿದೆ ಎಂದು ಕ್ರಿಸಿಲ್ ತಿಳಿಸಿದೆ.

ಐಟಿ ವಲಯವು 118 ಬಿಲಿಯನ್ ಡಾಲರ್ ಆದಾಯ ಗಳಿಸಿ, 3.1 ಮಿಲಿಯನ್ ಉದ್ಯೋಗಿಗಳನ್ನು ಹೊಂದಿದೆ. ಈ ಮೂಲಕ 2014ನೇ ಆರ್ಥಿಕ ವರ್ಷದಲ್ಲಿ ಸಂಘಟಿತ ವಲಯದ ಉದ್ಯೋಗಿಗಳಲ್ಲಿ ನಾಲ್ಕನೇ ಸ್ಥಾನ ಹೊಂದಿತ್ತು.

English summary
Rating agency Crisil says, IT companies will decrease job recruitment for next 3 years. Despite healthy revenue growth of 3 percent, recruitment will shrink for 3 years. This is a very bad news for technology graduates who comes out from campus during this period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X