Get Updates
Get notified of breaking news, exclusive insights, and must-see stories!

ಬಿಬಿಎಂಪಿ ಕಂದಾಯ ಇಲಾಖೆ ಸಿಬ್ಬಂದಿಗೆ ಮಾರ್ಚ್ 31ರಂದು ರಜೆ ರದ್ದು: ಕಾರಣ ತಿಳಿಯಿರಿ

ಬೆಂಗಳೂರು, ಮಾರ್ಚ್‌ 30: ಮಾರ್ಚ್‌ ತಿಂಗಳಲ್ಲಿ ಸಾಲು ರಜೆಗಳೇ ಬಂದಿವೆ. ಮಾರ್ಚ್‌ 30 ಭಾನುವಾರ ಹಾಗೂ 31ರಂದು ಸೋಮವಾರ ರಂಜಾನ್‌ ಹಿನ್ನೆಲೆ ಸರ್ಕಾರಿ ಶಾಲೆಗಳು, ಕಚೇರಿಗಳಿಗೆ ರಜೆಯಿದೆ. ಆದರೆ ಈ ಎರಡು ದಿನವೂ ಕಾರ್ಯನಿರ್ವಹಿಸುವಂತೆ ಬೆಂಗಳೂರಿನ ಕಚೇರಿಯೊಂದರ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಹಾಗಾದ್ರೆ ಯಾರಿಗೆ ಹಾಗೂ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಪ್ರಸ್ತುತ 2024-25ನೇ ಸಾಲಿನ ಆರ್ಥಿಕ ವರ್ಷ ಎರಡು ದಿನಗಳಲ್ಲಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಮಾರ್ಚ್‌ 30 ಹಾಗೂ 31ರಂದು ಸರ್ಕಾರಿ ರಜೆ ಇದ್ದರೂ, ಆ ದಿನಗಳಲ್ಲಿ ಬಿಬಿಎಂಪಿ ಕಂದಾಯ ವಿಭಾಗದ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿ ಕಾರ್ಯನಿರ್ವಹಿಸಲು ಆದೇಶ ಹೊರಡಿಸಲಾಗಿದೆ.

No Holiday to BBMP Revenue Department Staff on March 30 and 31 Know reason

ಸರ್ಕಾರದ ಅಧಿಸೂಚನೆಯಂತೆ ಏಪ್ರಿಲ್‌ 1ರಿಂದ ಬಾಕಿ ತೆರಿಗೆ ಮೇಲೆ ದಂಡ ವಿಧಿಸಲಾಗುತ್ತಿದೆ. ತೆರಿಗೆ ಸುಸ್ತಿದಾರರು ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸಬೇಕಾದ ಆಸ್ತಿ ತೆರಿಗೆ ಹಾಗೂ ಸೇವಾ ಶುಲ್ಕವನ್ನು ಮಾರ್ಚ್‌ 31ರ ಒಳಗೆ ಪಾವತಿಸಿದರೆ ಅದರ ಬಡ್ಡಿ ಮೊತ್ತವನ್ನು ಮನ್ನಾ ಮಾಡುವ ಒಂದು ಬಾರಿ ಪರಿಹಾರ ಯೋಜನೆ ಜಾರಿಯಲ್ಲಿದೆ. ಬಾಕಿ ಇರುವ ಆಸ್ತಿ ತೆರಿಗೆ ಹಾಗೂ ಶುಲ್ಕವನ್ನು ವಸೂಲಾತಿ ಮಾಡಬೇಕಾಗಿದೆ.

ಆದ್ದರಿಂದ ಪಾಲಿಕೆಯ ವಿಭಾಗದಲ್ಲಿ ಎಲ್ಲಾ ಸಿಬ್ಬಂದಿ ಉಪವಿಭಾಗ ಮತ್ತು ವಾರ್ಡ್‌ ಕಚೇರಿಗಳಲ್ಲಿ ಈ ಎರಡು ದಿನ ಸರ್ಕಾರಿ ರಜೆ ಇದ್ದರೂ ಕರ್ತವ್ಯ ನಿರ್ವಹಿಸಬೇಕು. ಬಾಕಿ ಆಸ್ತಿ ತೆರಿಗೆ ವಸೂಲಾತಿ ಕ್ರಮ ವಹಿಸಬೇಕು ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಅಧಿಕಾರಿ ಮುನೀಶ್ ಮೌದ್ಗಿಲ್‌ ಹೊರಡಿಸಿರುವ ಕಚೇರಿ ಆದೇಶದಲ್ಲಿ ತಿಳಿಸಿದ್ದಾರೆ.

ಸಾರ್ವತ್ರಿಕ ರಜಾ ದಿನಗಳ ಪಟ್ಟಿ

* 2025ರ ಜನವರಿ 14ರ: ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
* 2025ರ ಜನವರಿ 26: ಗಣರಾಜ್ಯೋತ್ಸವ
* 2025ರ ಫೆಬ್ರವರಿ 26 ಬುಧವಾರ - ಮಹಾ ಶಿವರಾತ್ರಿ
* 2025ರ ಮಾರ್ಚ್‌ 31 ಸೋಮವಾರ: ಖುತುಬ್ ಎ ರಂಜಾನ್
* 2025ರ ಏಪ್ರಿಲ್‌ 10 ಗುರುವಾರ: ಮಹಾವೀರ ಜಯಂತಿ
* 2025ರ ಏಪ್ರಿಲ್‌ 14 ಸೋಮವಾರ: ಡಾ.ಬಿಆರ್ ಅಂಬೇಡ್ಕರ್ ಜಯಂತಿ
* 2025ರ ಏಪ್ರಿಲ್‌ 18 ಶುಕ್ರವಾರ: ಗುಡ್ ಫ್ರೈಡೆ
* 2025ರ ಏಪ್ರಿಲ್‌ 30 ಬುಧವಾರ: ಬಸವ ಜಯಂತಿ, ಅಕ್ಷಯ ತೃತೀಯ
* 2025ರ ಮೇ 01 ಗುರುವಾರ: ಕಾರ್ಮಿಕ ದಿನಾಚರಣೆ
* 2025ರ ಜೂನ್‌ 07 ಶನಿವಾರ: ಬಕ್ರೀದ್
* 2025ರ ಆಗಸ್ಟ್‌ 15 ಶುಕ್ರವಾರ: ಸ್ವಾತಂತ್ರ್ಯ ದಿನಾಚರಣೆ
* 2025ರ ಆಗಸ್ಟ್‌ 27 ಬುಧವಾರ: ಗಣೇಶ ಚತುರ್ಥಿ
* 2025ರ ಸೆಪ್ಟೆಂಬರ್ 05 ಶುಕ್ರವಾರ: ಈದ್ ಮಿಲಾದ್
* 2025ರ ಅಕ್ಟೋಬರ್ 1 ಬುಧವಾರ: ಮಹಾನವಮಿ, ಆಯುಧಪೂಜೆ, ವಿಜಯದಶಮಿ
* 2025ರ ಅಕ್ಟೋಬರ್ 2 ಗುರುವಾರ: ಗಾಂಧಿ ಜಯಂತಿ
* 2025ರ ಅಕ್ಟೋಬರ್ 7 ಮಂಗಳವಾರ: ಮಹರ್ಷಿ ವಾಲ್ಮೀಕಿ ಜಯಂತಿ
* 2025ರ ಅಕ್ಟೋಬರ್ 20 ಸೋಮವಾರ: ನರಕ ಚತುರ್ದಶಿ
* 2025ರ ಅಕ್ಟೋಬರ್ 22 ಬುಧವಾರ: ಬಲಿಪಾಡ್ಯಮಿ, ದೀಪಾವಳಿ
* 2025ರ ನವೆಂಬರ್ 01 ಶನಿವಾರ -ಕನ್ನಡ ರಾಜ್ಯೋತ್ಸವ
* 2025ರ ಡಿಸೆಂಬರ್ 25 ಗುರುವಾರ: ಕ್ರಿಸ್ ಮಸ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+