ಈ ಬಾರಿಯ ಅಕ್ಷಯ ತೃತೀಯ ಡಲ್‌

ಬೆಂಗಳೂರು, ಮೇ 2: ಪ್ರತಿ ವರ್ಷ‌ ಅಕ್ಷಯ ತೃತೀಯದಂದು ಜುವೆಲ್ಲರಿ ಅಂಗಡಿಗಳು ಗ್ರಾಹಕರಿಂದ ತುಂಬಿರುತ್ತವೆ. ಆದರೆ ಈ ಬಾರಿ ಜುವೆಲ್ಲರಿ ಅಂಗಡಿಗಳಲ್ಲಿ ಚಿನ್ನ ಖರೀದಿಸಲು ಅಷ್ಟೇನು ಜನ ಭೇಟಿ ನೀಡಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ‌ದ ಮಾರಾಟ ಸಪ್ಪೆಯಾಗಿದೆ.

ಈ ಬಾರಿ ಚಿನ್ನದ ಬೆಲೆ ಏರಿಕೆಯಾಗಿದ್ದೇ ಜನ ಕಡಿಮೆಯಾಗಲು ಕಾರಣ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಾಗಿ ಯಾವಾಗಲೂ ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನ ಖರೀದಿಸಲು ಮುಂದಿರುತ್ತಿದ್ದ ಮಹಿಳೆಯರು ಈ ಬಾರಿ ಜುವೆಲ್ಲರಿ ಅಂಗಡಿಯ ಕಡೆ ತಲೆ ಹಾಕಿಲ್ಲ.[ಅಕ್ಷಯ ತೃತೀಯದಂದು ಚಿನ್ನ ಖರೀದಿ ಯಾಕೆ]

ಹೀಗಾಗಿ ಈ ಹಿಂದಿನ ವರ್ಷ‌ಗಳಲ್ಲಿ ಅಕ್ಷಯ ತೃತೀಯದಂದು 10 ಗ್ರಾಂ ಚಿನ್ನಕ್ಕೆ ಎಷ್ಟು ರೂಪಾಯಿ ನಿಗದಿಯಾಗಿತ್ತು? ಈ ವರ್ಷ ಎಷ್ಟು ರೂಪಾಯಿ ಏರಿಕೆಯಾಗಿದೆ? ಈ ವರ್ಷದ ವ್ಯಾಪಾರಗಳ ಬಗ್ಗೆ ಜುವೆಲ್ಲರಿ ಅಂಗಡಿಯವರು ಏನಂತಾರೆ? ಎಂಬಿತ್ಯಾದಿ ಮಾಹಿತಿಗಳ ವಿವರವನ್ನು ಮುಂದಿನ ಪುಟಗಳಲ್ಲಿ ನೀಡಲಾಗಿದೆ.

 ಚಿನ್ನದ ಬೆಲೆ ಏರಿಕೆಯಾಗಿದ್ದು ಮುಖ್ಯ ಕಾರಣ:

ಚಿನ್ನದ ಬೆಲೆ ಏರಿಕೆಯಾಗಿದ್ದು ಮುಖ್ಯ ಕಾರಣ:


ಚಿನ್ನದ ಬೆಲೆ ಪ್ರತಿ ವರ್ಷ ಕೆಲ ದಿನಗಳಲ್ಲಿಏರಿದ್ದರೂ ಕೆಲವೊಮ್ಮೆ ಅಕ್ಷಯ ತೃತೀಯದಂದು ಇಳಿಕೆಯಾದ ಉದಾಹರಣೆ ಇದೆ. 2011ರಲ್ಲಿ ಮೇ 6 ರಂದು ಅಕ್ಷಯ ತೃತೀಯ ಬಂದಿತ್ತು. ಆಗ 10 ಗ್ರಾಂ ಚಿನ್ನಕ್ಕೆ 22 ಸಾವಿರ ನಿಗದಿಯಾಗಿತ್ತು. 2012 ರಲ್ಲಿ ಅಕ್ಷಯ ತೃತೀಯ ಏಪ್ರಿಲ್‌ 24ಕ್ಕೆ ಬಂದಿತ್ತು.ಆಗ ಚಿನ್ನದ ಬೆಲೆ ದಿಢೀರ್‌ ಏರಿಕೆಯಾಗಿ 29,200 ರೂಪಾಯಿ ತಲುಪಿತ್ತು. 2013 ರಂದು ಮೇ 13ಕ್ಕೆ ಅಕ್ಷಯ ತೃತೀಯ ಬಂದಾಗ ಚಿನ್ನದ ಬೆಲೆ ಇಳಿಕೆಯಾಗಿ 27,220 ರೂಪಾಯಿಗೆ ಬಂದಿತ್ತು. ಆದರೆ ಈ ವರ್ಷ10 ಗ್ರಾಂ ಚಿನ್ನಕ್ಕೆ ಅಸುಪಾಸು 28,750 ರೂಪಾಯಿ ನಿಗದಿಯಾಗಿದೆ.

ನಿನ್ನೆ ಖರೀದಿ ಜೋರಾಗಿತ್ತು:

ನಿನ್ನೆ ಖರೀದಿ ಜೋರಾಗಿತ್ತು:


"ಮೇ.1ರಂದು ರಜೆ ಇದ್ದರಿಂದ ನಿನ್ನೆ ಸಂಜೆಯಿಂದ ಅಕ್ಷಯ ತೃತೀಯ ಆರಂಭಗೊಂಡಿದ್ದರಿಂದ ಬಹುತೇಕ ಜನ ನಿನ್ನೆಯೇ ಚಿನ್ನ ಖರೀದಿಸಿದ್ದಾರೆ. ಈ ಕಾರಣಕ್ಕೆ ಇಂದು ಯಾವಾಗಲೂ ಬರುವಷ್ಟು ಜನ ಬಂದಿಲ್ಲ ಅಷ್ಟೇ. ನಮ್ಮ ವ್ಯಾಪಾರ ಚೆನ್ನಾಗಿ ನಡೆದಿದೆ" -
ಬಿನು, ಶೋರೂಂ ಮ್ಯಾನೇಜರ್‌ ಆರ್‌.ಆರ್‌. ಗೋಲ್ಡ್‌ ಪ್ಯಾಲೇಸ್‌ ಜಯನಗರ

ಮಾರಾಟ ಶೇ.20 ಇಳಿಕೆ:

ಮಾರಾಟ ಶೇ.20 ಇಳಿಕೆ:


ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾರುಕಟ್ಟೆ ಶೇ.20 ರಷ್ಟು ಇಳಿಕೆಯಾಗಿದೆ.

 ವೀಕೆಂಡ್‌ ರಜೆ:

ವೀಕೆಂಡ್‌ ರಜೆ:


ಶುಕ್ರವಾರ ಒಂದು ದಿನ ರಜೆ ಹಾಕಿದ್ದರೆ, ನಾಲ್ಕು ರಜೆ ಸಿಗುವುದರಿಂದ ಬಹುತೇಕ ನಗರ ಪ್ರದೇಶದ ಜನ ಹೊರಗಡೆ ಹೋಗಿರುವುದು ಚಿನ್ನ ಖರೀದಿ ಸಪ್ಪೆಯಾಗಲು ಕಾರಣವಾಗಿದೆ.

 ಪ್ರತಿ ವರ್ಷವೂ ಖರೀದಿ:

ಪ್ರತಿ ವರ್ಷವೂ ಖರೀದಿ:


"ಪ್ರತಿ ವರ್ಷವೂ ನಾವು ಚಿನ್ನ ಖರೀದಿಸುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದೇವೆ. ಇಂದು ಖರೀದಿಸುವ ಚಿನ್ನ ಅಕ್ಷಯವಾಗಲಿರುವುದಿಂದ ಈ ವರ್ಷವು ಸಣ್ಣ ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಿದ್ದೇವೆ"
-ಪ್ರಸಾದ್‌‌, ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ, ಸಿಂಡಿಕೇಟ್‌ ಬ್ಯಾಂಕ್‌

 ಪೊಲೀಸ್‌ ಕಾವಲು:

ಪೊಲೀಸ್‌ ಕಾವಲು:


ಆಭರಣ ಅಂಗಡಿಗಳಿಗೆ ಮತ್ತು ಗ್ರಾಹಕರಿಗೆ ರಕ್ಷಣೆ ನೀಡಲು, ಪ್ರತಿ ವರ್ಷದಂತೆ ಎಲ್ಲಾ ಜುವೆಲ್ಲರಿ ಅಂಗಡಿಗಳ ಮುಂದೆ ಪೊಲೀಸ್‌ರನ್ನು ನಿಯೋಜಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+