ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿದ್ದ 'No Cycling' ಫಲಕ ತೆರವು

|
Google Oneindia Kannada News

ಬೆಂಗಳೂರು, ಜುಲೈ 19: ಸಾಕಷ್ಟು ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಬ್ರಿಗೇಡ್ ರಸ್ತೆಯಲ್ಲಿರುವ ನೋ ಸೈಕ್ಲಿಂಗ್ ಫಲಕವನ್ನು ತೆರವುಗೊಳಿಸಲಾಗಿದೆ.

ಬ್ರಿಗೆಡ್ ರಸ್ತೆಯಲ್ಲಿ ಸೈಕಲ್ ಸವಾರರು ಸಂಚರಿಸುವಂತಿಲ್ಲ ಎನ್ನುವ ಫಲಕದ ಕುರಿತು ನಿಹಾರ್ ಥಕ್ಕರ್ ಎಂಬುವವರು ಸಾಮಾಜಿಕ ಜಾಲತಾಣಗಲ್ಲಿ ಅಭಿಯಾನ ನಡೆಸಿದ್ದರು.

ಅವರ ಅಭಿಯಾನಕ್ಕೆ ಸಾಕಷ್ಟು ಮಂದಿಯಿಂದ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿತ್ತು. ಕೂಡಲೇ ಇದಕ್ಕೆ ಸ್ಪಂದಿಸಿರುವ ಸಂಸದ ಪಿಸಿ ಮೋಹನ್ ಕೂಡಲೇ ಫಲಕವನ್ನು ತೆರವುಗೊಳಿಸುವಂತೆ ಸೂಚಿಸಿದ್ದರು.

 ‘No Cycling’ Sign Crops Up On Bengaluru’s Brigade Road

ಆದರೆ ಬ್ರಿಗೇಡ್ ರಸ್ತೆಯಲ್ಲಿ ಈ ಫಲಕವನ್ನು ಯಾರು ಹಾಕಿದ್ದಾರೆ ಎನ್ನುವ ಕುರಿತು ಮಾಹಿತಿ ಇಲ್ಲ, ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗಿತ್ತು.

ಭಾನುವಾರ ಬೆಳಗ್ಗೆ 11.30ರ ವೇಳೆಗೆ ನಿಹಾರ್ ಅವರು ಈ ಬೋರ್ಡ್ ನೋಡಿದ್ದರು. ಟ್ವಿಟ್ಟರ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದರು. "ನನಗೆ ಆ ಬೋರ್ಡ್ ನೋಡಿ ಆಶ್ಚರ್ಯವಾಗಿತ್ತು, ಪರಿಸರ ಮಾಲಿನ್ಯ ನಿಯಂತ್ರಿಸುವ ದೃಷ್ಟಿಯಿಂದ ಹೆಚ್ಚೆಚ್ಚು ಸೈಕಲ್‌ಗಳನ್ನು ಬಳಕೆ ಮಾಡಿ ಎಂದು ಹೇಳುವ ಬದಲು ಸೈಕಲ್‌ಗೆ ನಿಷೇಧ ಹೇರಿದ್ದು ವಿಚಿತ್ರ ಎನಿಸಿತ್ತು'' ಎಂದು ಹೇಳಿದ್ದಾರೆ.

ಈ ಕುರಿತು ಸಂಸದ ಪಿಸಿ ಮೋಹನ್ ಅವರು ವಿಚಾರಿಸಿದಾಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈ ಬೋರ್ಡ್‌ನ್ನು ಹಾಕಲಾಗಿಲ್ಲ ಯಾರು ಹಾಕಿದ್ದಾರೆ ಎನ್ನುವ ಕುರಿತು ಮಾಹಿತಿ ಇಲ್ಲ ಎಂದುಬಿಎಸ್‌ಸಿಎಲ್ ಎಂಡಿ ಪಿ ರಾಜೇಂದ್ರ ಚೋಳನ್ ಸ್ಪಷ್ಟಪಡಿಸಿದ್ದರು.

Recommended Video

Nalin Kumar audio leak ! ಹೊರಬಿತ್ತು ಸ್ಫೋಟಕ ಸತ್ಯ | Oneindia Kannada

ಬಳಿಕ ಟ್ವಿಟ್ಟರ್ ಮೂಲಕವೇ, ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸಂಸದರು ಸೂಚಿಸಿದ್ದರು. ಭಾನುವಾರ ಸಂಜೆಯಷ್ಟೊತ್ತಿಗೆ ನೋ ಸೈಕ್ಲಿಂಗ್ ಬೋರ್ಡ್ ತೆರವುಗೊಳಿಸಲಾಗಿದೆ.

English summary
‘No cycling’ sign crops up on Bengaluru’s Brigade Road, removed after criticism, The cycling community in Bengaluru had an unpleasant surprise on Sunday, July 18, when a sign conveying that bicycles are prohibited was spotted on Brigade Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X