ಮಡಿವಾಳ: ಬಾಲಾಪರಾಧ ಮಂದಿರದಿಂದ 9 ಮಕ್ಕಳು ಪರಾರಿ
ಬೆಂಗಳೂರು, ಜುಲೈ 31: ಬೆಂಗಳೂರಿನ ಬಾಲಾಪರಾಧ ಮಂದಿರದಿಂದ 9 ಮಕ್ಕಳು ಪರಾರಿಯಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಬೆಂಗಳೂರಿನ ಮಡಿವಾಳದಲ್ಲಿರುವ ಬಾಲಾಪರಾಧ ಮಂದಿರದಿಂದ 9 ಮಕ್ಕಳು ಪರಾರಿಯಾಗಿದ್ದಾರೆ, ಅದರಲ್ಲಿ ಓರ್ವ ಗಸ್ತಿನಲ್ಲಿದ್ದ ಕೋರಮಂಗಲ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ, ಇದೀಗ ಪರಾರಿಯಾಗಿರುವ ಉಳಿದ 8 ಬಾಲಕರಿಗಾಗಿ ಶೋಧ ನಡೆಯುತ್ತಿದೆ. ರಾತ್ರಿ ಸೆಕ್ಯೂರಿಟಿ ಗಾರ್ಡ್ ಕೈಕಾಲು ಕಟ್ಟಿಹಾಕಿ ಮಕ್ಕಳು ಪರಾರಿಯಾಗಿದ್ದಾರೆ.

ರಾತ್ರಿ ಎಲ್ಲರೂ ಮಲಗಿರುವ ಸಂದರ್ಭದಲ್ಲಿ ಬಾಲಕರು ಬಾಲಾಪರಾಧ ಮಂದಿರದಿಂದ ಪರಾರಿಯಾಗಲು ಯತ್ನಿಸಿದ್ದಾರೆ, ಅದು ಸೆಕ್ಯುರಿಟಿಯ ಕಣ್ಣಿಗೆ ಬಿದ್ದೆ, ಮಕ್ಕಳನ್ನು ತಡೆಯಲು ಯತ್ನಿಸಿದ್ದ ಭದ್ರತಾ ಸಿಬ್ಬಂದಿಯನ್ನು ಮಕ್ಕಳು ಕೈಕಾಲುಕಟ್ಟಿ ಯಾರಿಗೂ ಗೊತ್ತಾಗದಂತೆ ಪರಾರಿಯಾಗಿದ್ದಾರೆ.












Click it and Unblock the Notifications