ಬೆಂಗಳೂರಿಗರ ನೈಟ್ ಲೈಫ್‌ಗೆ ಇನ್ನೊಂದು ವರ್ಷ ಲೈಫ್
ಬೆಂಗಳೂರು, ನ. 19: ವಾರಾಂತ್ಯದ 'ನೈಟ್ ಲೈಫ್' ಇನ್ನೊಂದು ವರ್ಷ ಮುಂದುವರಿಯುವ ಸಾಧ್ಯತೆ ಇದೆ. ನೈಟ್ ಲೈಫ್‌ಗೆ ಸರ್ಕಾರ ಅನುಮತಿ ನೀಡಿದ್ದ ಒಂದು ವರ್ಷದ ಅವಧಿ ಮುಗಿಯುತ್ತಿದ್ದು, ಮತ್ತೊಂದು ವರ್ಷದವರೆಗೆ ಮುಂದುವರಿಸಲು ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಗೃಹ ಸಚಿವ ಕೆ.ಜೆ. ಜಾರ್ಜ್, ಬೆಂಗಳೂರಿನಲ್ಲಿ ನೈಟ್ ಲೈಫ್ ಒಂದು ವರ್ಷದಿಂದ ಮುಂದುವರಿಯುತ್ತಿದೆ. ಆದರೆ, ಇದರಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ. ಜನ ಜೀವನಕ್ಕೆ ಅಡ್ಡಿಯುಂಟಾಗಿಲ್ಲ. ಅಪರಾಧ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿಲ್ಲ. ಆದ್ದರಿಂದ ನೈಟ್ ಲೈಫ್ ಇನ್ನೂ ಒಂದು ವರ್ಷ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ. [ಮದ್ಯ'ರಾತ್ರಿ ಅವಧಿ ವಿಸ್ತರಣೆ ಪೊಲೀಸರಿಗೆ ಸವಾಲು]

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ನೈಟ್ ಲೈಫ್ ಸೇರಿದಂತೆ ಇತರ ತಡ ರಾತ್ರಿ ಮೋಜುಗಳನ್ನು ನಿಷೇಧಿಸಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇದಕ್ಕೆ ಮತ್ತೆ ಅನುಮತಿ ನೀಡಲಾಗಿತ್ತು. ಒಂದು ವರ್ಷ ಈ ಕುರಿತು ಪರಿಶೀಲನೆ ನಡೆಸಲಾಗುವುದು. ಯಾವುದೇ ಸಮಸ್ಯೆ ಉಂಟಾದಲ್ಲಿ ತಕ್ಷಣ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿತ್ತು. [ಬೆಂಗಳೂರಿನಲ್ಲಿ ಬಾರ್ 1 ಗಂಟೆವರಗೆ ಓಪನ್!]
ಬನ್ನೇರುಘಟ್ಟ ಉದ್ಯಾನಕ್ಕೆ ಹೊಸ ಪ್ರಾಣಿ
ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಒಂದು ಗಂಡು ಹಾಗೂ ಒಂದು ಹೆಣ್ಣು ಹೈನಾ ಪ್ರಾಣಿಗಳನ್ನು ತರಲಾಗಿದೆ. ಜಾರ್ಖಂಡ್‌ನ ರಾಂಚಿಯಲ್ಲಿರುವ ಬಿರಾಸಿ ಜೈವಿಕ ಉದ್ಯಾನದಿಂದ ಈ ಪ್ರಾಣಿಗಳನ್ನು ತರಲಾಗಿದೆ. [ಬೆಂಗಳೂರಿನ ರಾತ್ರಿ 'ಬಾರ್' ಅವಧಿ ಹೆಚ್ಚಾಗಲಿದೆ]
ಇದಕ್ಕೆ ಬದಲಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ 2 ಸಿಂಹ ಹಾಗೂ ಹುಲಿಯನ್ನು ಅಲ್ಲಿಗೆ ರವಾನಿಸಲಾಗಿದೆ ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications