ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎನ್‌ಐಎ ಕೋರ್ಟ್ ಐಸಿಪಿ ಕೇಸುಗಳ ವಿಚಾರಣೆ ನಡೆಸಬಹುದು: ಹೈಕೋರ್ಟ್

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಸೆ.9: ''ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಪ್ರಕರಣಗಳ ವಿಚಾರಣೆಗೆ ಸ್ಥಾಪಿಸಲಾದ ವಿಶೇಷ ಕೋರ್ಟ್‌ಗಳು ಭಾರತೀಯ ದಂಡ ಸಂಹಿತೆಯ (ಐಪಿಸಿ) ಅಡಿಯಲ್ಲಿ ಮಾತ್ರ ಆರೋಪ ಎದುರಿಸುತ್ತಿರುವ ಆರೋಪಿಗಳ ವಿರುದ್ಧ ಪ್ರಕರಣಗಳನ್ನೂ ಸಹ ವಿಚಾರಣೆ ನಡೆಸಬಹುದು'' ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಅಂತಹ ಆರೋಪಿಗಳು ಅದೇ ಘಟನೆ/ವ್ಯವಹಾರದ ಪ್ರಕರಣಕ್ಕೆ ಸಂಬಂಧಿಸಿದ್ದಾಗ ನಿರ್ದಿಷ್ಟ ಕ್ರಿಮಿನಲ್ ಕಾನೂನುಗಳನ್ನು ಎನ್ಐಎ ಪ್ರಕರಣಗಳಿಗೆ ವಿಶೇಷ ನ್ಯಾಯಾಲಯವು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸುತ್ತದೆ ಎಂದು ಹೈಕೋರ್ಟ್ ಹೇಳಿದೆ.

ಡಿ.ಜೆ.ಹಳ್ಳಿ ಗಲಭೆ ಪ್ರಕರಣದ ಆರೋಪಿ ಬೆಂಗಳೂರಿನ 28 ವರ್ಷದ ಸಯ್ಯದ್ ಸೊಹೆಲ್ ತೊರ್ವಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಇದರಿಂದಾಗಿ ಆರೋಪಿಗೆ ಕಾನೂನು ಹೋರಾಟದಲ್ಲಿ ಹಿನ್ನೆಡೆಯಾಗಿದ್ದು, ಆತ ಎನ್ ಐಎ ಕೋರ್ಟ್‌ನಿಂದ ವಿಚಾರಣೆಯನ್ನು ಎದುರಿಸಲೇಬೇಕಾಗಿದೆ.

2008ರ ಎನ್‌ಐಎ ಕಾಯಿದೆ, ಕ್ರಿಮಿನಲ್ ದಂಡ ಪ್ರಕ್ರಿಯಾ ಸಂಹಿತೆ ಮತ್ತು ಸುಪ್ರೀಂಕೋರ್ಟ್‌ನ ತೀರ್ಪುಗಳನ್ನು ವಿಶ್ಲೇಷಿಸಿದ ನಂತರ ಹೈಕೋರ್ಟ್, ಎನ್‌ಐಎ ಕಾಯಿದೆಯ ಸೆಕ್ಷನ್ 14 ವಿಶೇಷ ನ್ಯಾಯಾಲಯಕ್ಕೆ ಆರೋಪಿಯು ಯಾವುದೇ ಇತರ ಅಪರಾಧವನ್ನು ವಿಚಾರಣೆ ನಡೆಸಲು ಅಧಿಕಾರ ನೀಡುತ್ತದೆ. ಅಪರಾಧವು ಅಂತಹ ಇತರ ಅಪರಾಧದೊಂದಿಗೆ ಸಂಬಂಧ ಹೊಂದಿದ್ದರೆ ಅದೇ ವಿಚಾರಣೆಯನ್ನು ಐಪಿಸಿಯಡಿಯಲ್ಲಿ ನಡೆಸಬಹುದು ಎಂದು ಆದೇಶ ನೀಡಿದೆ.

NIA Special court can also conduct trial offences under IPC also: Ruled HC

ಅರ್ಜಿದಾರರ ವಿರುದ್ಧದ ಪ್ರಕರಣವನ್ನು ಸಾಮಾನ್ಯ ಕೋರ್ಟ್ ವ್ಯಾಪ್ತಿಯ ನ್ಯಾಯಾಲಯಕ್ಕೆ ವರ್ಗಾಯಿಸಲು ನಿರಾಕರಿಸಿದ ಎನ್‌ಐಎ ನ್ಯಾಯಾಲಯವು ನೀಡಿದ ಆದೇಶವನ್ನು ಎತ್ತಿಹಿಡಿದಿದೆ.

NIA ಹೆಸರು ಕೇಳಿದರೆ ಅಪರಾಧಿಗಳು ಪತರಗುಟ್ಟುವುದೇಕೆ?NIA ಹೆಸರು ಕೇಳಿದರೆ ಅಪರಾಧಿಗಳು ಪತರಗುಟ್ಟುವುದೇಕೆ?

ಅರ್ಜಿದಾರರ ವಿರುದ್ಧ ಆರೋಪ ಮಾಡಿರುವ ಅಪರಾಧಗಳ ಹೊರತಾಗಿಯೂ ಅರ್ಜಿದಾರರನ್ನು ಎನ್‌ಐಎ ಪ್ರಕರಣಗಳಿಗೆ ವಿಶೇಷ ನ್ಯಾಯಾಲಯವೂ ವಿಚಾರಣೆ ನಡೆಸಬಹುದು ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರು, 2022ರ ಆಗಸ್ಟ್ 11 ರಂದು ನಗರದ ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿ ಪ್ರದೇಶಗಳಲ್ಲಿ ನಡೆದ ಹಿಂಸಾಚಾರದ ಕುರಿತು ಎನ್‌ಐಎ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಆರೋಪಿಯಾಗಿದ್ದಾರೆ.

ಅರ್ಜಿದಾರರು ತಮ್ಮ ವಿರುದ್ಧದ ವಿಚಾರಣೆಯನ್ನು ಎನ್ಐಎ ಕೋರ್ಟ್‌ನಿಂದ ಬೇರ್ಪಡಿಸಿ ಸಾಮಾನ್ಯ ಕೋರ್ಟ್ ವ್ಯಾಪ್ತಿಯ ನ್ಯಾಯಾಲಯಕ್ಕೆ ವರ್ಗಾಯಿಸಲು ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದರು. ಆದರೆ ಎನ್‌ಐಎ ನ್ಯಾಯಾಲಯವು, ಅವರ ವಿರುದ್ಧ ಐಪಿಸಿ ಅಡಿಯಲ್ಲಿ ಅಪರಾಧಗಳಿಗೆ ಮಾತ್ರ ಆರೋಪ ಮಾಡಲಾಗಿದ್ದು, ಕಾನೂನು ಬಾಹಿರ ಚಟುವಟಿಕೆಗಳ (ಯುಎಪಿಎ)ಅಡಿಯಲ್ಲಿ ಅಲ್ಲ, ಹಾಗಾಗಿ ಯುಎಪಿಎ ಅಡಿ ನಿರ್ದಿಷ್ಟಪಡಿಸಿದ ಕ್ರಿಮಿನಲ್ ಕಾನೂನುಗಳಲ್ಲಿ ಒಂದಾಗಿದ್ದು, ಎನ್‌ಐಎ ಪ್ರಕರಣಗಳಿಗೆ ವಿಶೇಷ ನ್ಯಾಯಾಲಯದಿಂದ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡುತ್ತವೆ.

English summary
NIA special court can try cases against accused charged only under IPC when linked to same incident: Karnataka High Court
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X