ಬೆಂಗಳೂರಲ್ಲಿ ದಾಳಿಗೆ ಸಂಚು ರೂಪಿಸಿದ್ದ ಇನ್ನೊಬ್ಬ ಉಗ್ರನ ಬಂಧನ

Recommended Video

      ಬೆಂಗಳೂರಲ್ಲಿ ದಾಳಿಗೆ ಸಂಚು ರೂಪಿಸಿದ್ದ ಇನ್ನೊಬ್ಬ ಉಗ್ರನ ಬಂಧನ | Oneindia Kannada

      ಬೆಂಗಳೂರು, ಆಗಸ್ಟ್ 29:ಬೆಂಗಳೂರಿನಲ್ಲಿ ದಾಳಿಗೆ ಸಂಚು ರೂಪಿಸಿದ್ದ ಇನ್ನೊಬ್ಬ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

      ತ್ರಿಪುರದ ಅಗರ್ತಲದಲ್ಲಿ ತಲೆ ಮರೆಸಿಕೊಂಡಿದ್ದ ಉಗ್ರ ನಜೀರ್ ಶೇಖ್ ಎಂಬಾತನನ್ನು ಬಂಧಿಸಲಾಗಿದ್ದು ಬುಧವಾರ ಕೋರ್ಟಿಗೆ ಹಾಜರುಪಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

      ಈ ಹಿಂದೆ ಜಮತ್ ಉಲ್ ಮುಜಾಹಿದ್ದೀನ್ ಸಂಘಟನೆ ಸದಸ್ಯ ಹಬೀಬುಲ್ಲಾ ರೆಹಮಾನ್‍ನನ್ನು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದರು. ಹಬೀಬುಲ್ಲಾ ರೆಹಮಾನ್ ರಾಮನಗರದಲ್ಲಿ ಜೀವಂತ ಗ್ರೆನೇಡ್ ಇಟ್ಟಿದ್ದ.

      NIA Arrests Terror Suspect In Agartala

      ಬೆಂಗಳೂರಲ್ಲಿ ಒಟ್ಟು ಐವರು ಉಗ್ರರು ಸೇರಿ ದಾಳಿಗೆ ಸಂಚು ರೂಪಿಸಿದ್ದರು, ಹಬೀಬುಲ್ಲಾ ರೆಹಮಾನ್ ಬಂಧನದ ಬಳಿಕ ಉಳಿದವರು ರಾಜ್ಯ ಬಿಟ್ಟು ತಲೆಮರೆಸಿಕೊಂಡು ಹೋಗಿದ್ದರು ಎಂಬ ಮಾಹಿತಿಯನ್ನು ನಜೀರ್ ಹೊರ ಹಾಕಿದ್ದಾನೆ.

      ನಜೀರ್ ಶೇಖ್ ಬಂಧಿತ ಉಗ್ರ. ಎನ್‍ಐಎ ಅಧಿಕಾರಿಗಳು ಆಗಸ್ಟ್ 26ರಂದು ಅಗರ್ತಲಾದಲ್ಲಿ ಉಗ್ರ ನಜೀರ್ ಶೇಖ್‍ನನ್ನ ಬಂಧಿಸಿದ್ದರು. ಬಳಿಕ ವಿಚಾರಣೆಗೆ ಒಳಪಡಿಸಿದಾಗ ನಜೀರ್ ಶೇಖ್ ಜಮತ್ ಉಲ್ ಮುಜಾಹಿದ್ದೀನ್ ಸಂಘಟನೆ ಸದಸ್ಯ ಎಂದು ತಿಳಿದು ಬಂದಿದೆ.

      ಬೆಂಗಳೂರಿನ ಚಿಕ್ಕಬಾಣವಾರದಲ್ಲಿ ವಾಸಿಸುತ್ತಿದ್ದ ನಜೀರ್ ಶೇಖ್ ಸ್ಥಳೀಯರಿಂದ ಹಣ ಸಂಗ್ರಹಿಸಿ ಜಮತ್ ಉಲ್ ಮುಜಾಹಿದ್ದೀನ್ ಸಂಘಟನೆ ನೀಡುತ್ತಿದ್ದ. ಅಷ್ಟೇ ಅಲ್ಲದೆ ಸ್ಫೋಟಕ ವಸ್ತು ಸಂಗ್ರಹಣೆ ಹಾಗೂ ಉಗ್ರ ಸಂಘಟನೆ ಮಾಡುತ್ತಿದ್ದ. ಈ ಕುರಿತು ಮಾಹಿತಿ ಕಲೆಹಾಕಿದ್ದ ಎನ್‍ಐಎ ಅಧಿಕಾರಿಗಳು ನಜೀರ್ ನನ್ನು ಬಂಧಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+