ಫೆ.17ರಂದು ಎನ್‌ಜಿಟಿ ತಂಡದಿಂದ ಬೆಳ್ಳಂದೂರು, ವರ್ತೂರು ಕೆರೆ ಪರಿಶೀಲನೆ
ಬೆಂಗಳೂರು, ಜನವರಿ 31: ಬೆಳ್ಳಂದೂರು ಹಾಗೂ ವರ್ತೂರು ಕೆರೆಯಲ್ಲಿ ಪದೇ ಪದೇ ನೊರೆ ಹಾಗೂ ಬೆಂಕಿ ಕಾಣಿಸಿಕೊಳ್ಳುತ್ತಿರುವ ಪರಿಣಾಮ ಹಸಿರು ನ್ಯಾಯಾಧೀಕರಣದ ಅಧಿಕಾರಿಗಳು ಫೆ.17ರಂದು ಕೆರೆ ಪರಿಶೀಲನೆ ಮಾಡಲಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನೇಮಿಸಿರುವ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮತ್ತು ತಂಡ ಪರಿಶೀಲನೆ ನಡೆಸಲಿದ್ದಾರೆ. ಎರಡನು ನೀರಿನ ಮೂಲಗಳಾದ ಬೆಳ್ಳಂದೂರು, ವರ್ತೂರು ಕೆರೆಯ ಪರಿಶೀಲನೆಗೆ ಡಿಸೆಂಬರ್ 5 ರಂದು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ.
ಫೆಬ್ರವರಿ 17ಕ್ಕೆ ಕೆರೆಗಳ ಪರಿಶೀಲನೆ ಮುಗಿದ ಬಳಿಕ ಫೆಬ್ರವರಿ 20ರಂದು ಸಭೆ ನಡೆಸಲಿದ್ದಾರೆ. ಈಗಾಗಲೇ ಬೆಳ್ಳಂದೂರು ಕೆರೆ ಅಭಿವೃದ್ಧಿ ಖಾಸಗಿ ಸಂಸ್ಥೆಗಳು ಮುಂದೆ ಬಂದಿದ್ದು 665 ಕೋಟಿ ರೂ ಅಭಿವೃದ್ಧಿಗೆ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ.

ಬೆಳ್ಳಂದೂರು ಕೆರೆಯನ್ನು 2021ರ ಹೊತ್ತಿಗೆ ಪುನರುಜ್ಜೀವನಗೊಳಿಸಲಾಗುವುದು ಅದಕ್ಕೆ 665 ಕೋಟಿ ರೂ ವೆಚ್ಚವಾಗುತ್ತದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
ಕಳೆದ ಎರಡು ವರ್ಷದಿಂದೀಚೆಗೆ ಪದೇ ಪದೇ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲದೆ ನೊರೆ ವಿಪರೀತವಾಗಿದೆ ಇದಕ್ಕೆ ಪರಿಹಾರ ಕಂಡು ಹಿಡಿಯಬೇಕಿದ್ದರ ಮೊದಲು ನೊರೆಯನ್ನು ಕಡಿಮೆ ಮಾಡಬೇಕಾಗಿದೆ. ನೊರೆ ಕಡಿಮೆ ಮಾಡಬೇಕಾದರೆ ಸುತ್ತಮುತ್ತಲಿನ ಕಾರ್ಖಾನೆಗಳಿಂದ ಬರುವ ಮಲಿನ ನೀರನ್ನು ತಡೆಯಬೇಕಿದೆ. ಇದಕ್ಕೆ ಕೆರೆಯ ಹೂಳು ತೆಗೆದು ಅದರ ಪುನರುಜ್ಜೀವನ ಮಾಡಲೇ ಬೇಕಾಗಿದೆ.
ಕೆರೆಯನ್ನು ಸ್ವಚ್ಛಗೊಳಿಸಲು ಬಿಡಿಎ 2020ರ ಗುರಿ ಇಟ್ಟುಕೊಂಡಿದೆ. ಒಳಚರಂಡಿ ಪೈಪ್ ಗಳ ನಿರ್ಮಾಣವಾದ ಬಳಿಕ ಕಾರ್ಯ ಮುಗಿಯಲಿದೆ. ಈ ಮೊದಲು ಬಿಡಿಎ ಅಧಿಕಾರಿಗಳು ಬೆಳ್ಳಂದೂರು ಕೆರೆಯನ್ನು ಸ್ವಚ್ಛಗೊಳಿಸಲು 800-1000 ಕೋಟಿ ವೆಚ್ಚ ತಗುಲಬಹುದು ಎಂದು ಹೇಳಿದ್ದರು ಆದರೆ ಏಜೆನ್ಸಿ ಹೇಳುವ ಪ್ರಕಾರ 665 ಕೋಟಿ ರೂ ವೆಚ್ಚವಾಗಲಿದೆ. 42.3 ಕೋಟಿ ವೆಚ್ಚದಲ್ಲಿ ಬೇಲಿ ಹಾಕುವುದು, ಸ್ಪ್ರಿಂಕ್ಲರ್ ಅವಡಿಸಲಾಗುತ್ತದೆ.












Click it and Unblock the Notifications