ಮದುವೆ ಮರುದಿನ ಬೆಂಗಳೂರಲ್ಲಿ ವಧು ನೇಣಿಗೆ

suicide
ಬೆಂಗಳೂರು, ಅ.10 : ವಿವಾಹವಾದ ಮರುದಿನವೇ ನವವಧು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಮಾರಸ್ವಾಮಿ ಲೇಔಟ್ ಸಮೀಪದ ಬೇಂದ್ರೆ ನಗರದಲ್ಲಿ ನಡೆದಿದೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಬೇಂದ್ರೆ ಲೇಜೌಟ್ 1 ನೇ ಮುಖ್ಯರಸ್ತೆ ನಿವಾಸಿ ಪುಷ್ಪಾ (21) ಆತ್ಮಹತ್ಯೆಗೆ ಶರಣಾದ ನವವಧು. ಗುರುವಾರ ಬೆಳಗ್ಗೆ ಅವರು ತಾಯಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬುಧವಾರ ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿನ ಎಸ್ ಬಿಎನ್ ಹಾಲ್ ನಲ್ಲಿ ಕೇಂಪೇಗೌಡ ನಗರದ ನಿವಾಸಿಯಾದ ಹನುಮಂತರಾಯ ಎಂಬುವವರ ಜೊತೆ ಪುಷ್ಪಾ ವಿವಾಹ ನಡೆದಿತ್ತು. ಗಂಡನ ಮನೆಯ ಶಾಸ್ತ್ರ ಮುಗಿಸಿ ದಂಪತಿಗಳು ಪುಷ್ಪಾ ತವರಿಗೆ ಆಗಮಿಸಿದ್ದರು.

ಗುರುವಾರ ಬೆಳಗ್ಗೆ 6 ಗಂಟೆಗೆ ಸ್ನಾನಕ್ಕೆ ತೆರಳಿದ್ದ ಪುಷ್ಪಾ, ನಂತರ ಕೊಠಡಿಗೆ ತೆರಳಿದ್ದರು. ಎಷ್ಟು ಹೊತ್ತಾದರೂ ಅವರು ಹೊರ ಬರದದ್ದನ್ನು ಕಂಡ ತಾಯಿ ಬಾಗಿಲು ಬಡಿದಿದ್ದಾರೆ. ಕಿಟಕಿ ಮೂಲಕ ನೋಡಿದಾಗ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಪುಷ್ಪಾ ಅವರಿಗೆ ಮದುವೆ ಇಷ್ಟವಿರಲಿಲ್ಲ ಆದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕುಮಾರಸ್ವಾಮಿ ಲೇಜೌಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಶವವನ್ನು ಹಸ್ತಾಂತರಿಸಲಾಗಿದೆ. ಬುಧವಾರ ಮದುವೆ ಸಂಭ್ರಮ ತುಂಬಿದ್ದ ಮನೆಯಲ್ಲಿ ಗುರುವಾರ ಮುಂಜಾನೆಯಿಂದ ಸೂತಕದ ಛಾಯೆ ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+