ಹೊಸ ವರ್ಷದ ಎಣ್ಣೆ ಕಿಕ್; ಮಂಗಳಮುಖಿಯರ ರಂಪಾಟ
ಬೆಂಗಳೂರು, ಜನವರಿ 1: ಬೆಂಗಳೂರಿನಲ್ಲಿ ಡಿಸೆಂಬರ್ 31 ರಾತ್ರಿ ಹೊಸ ವರ್ಷಾಚರಣೆ ಮಾಡುತ್ತಿದ್ದ ವೇಳೆ ಮಂಗಳಮುಖಿಯರು ಅಸಭ್ಯವಾಗಿ ವರ್ತನೆ ಮಾಡಿ ಪಾರ್ಟಿ ಮೂಡ್‌ನಲ್ಲಿದ್ದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಕಾಮುಕರ ಕೀಟಲೆ
ಬ್ರೀಗೇಡ್ ರಸ್ತೆಯಲ್ಲಿ ಹೊಸ ವರ್ಷ ಸ್ವಾಗತಿಸಲು ಕಿಕ್ಕರಿದು ಜನ ಸೇರಿದ್ದರು. ಈ ವೇಳೆ ಅಲ್ಲಿಗೆ ಬಂದ ಮುಂಗಳಮುಖಿಯರ ಹಿಂಡು ಡ್ಯಾನ್ಸ್ ಮಾಡುವ ಬರದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೇ ಪರಸ್ಪರ ಬಟ್ಟೆ ಹರಿದುಕೊಂಡು ನೋಡುಗರಿಗೆ ಮುಜುಗರ ತರಿಸಿದ್ದಾರೆ. ಸಾರ್ವಜನಿಕರೊಂದಿಗೆ ಕಿರಿಕ್ ಕೂಡ ಮಾಡಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮಂಗಳಮುಖಿಯರನ್ನು ವಶಕ್ಕೆ ತೆಗೆದುಕೊಂಡು, ಬುದ್ದಿ ಹೇಳಿ ಕಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿಲ್ಲ.
ಅಷ್ಟೇ ಅಲ್ಲದೆ, ಬೆಂಗಳೂರಿನಲ್ಲಿ ಡಿಸೆಂಬರ್ 31 ರಾತ್ರಿ ಹೊಸ ವರ್ಷಾಚರಣೆ ಮಾಡುತ್ತಿದ್ದ ಯುವತಿಯರ ಮೇಲೆ ಕೆಲ ಕಾಮುಕರು ಕೀಟಲೆ ಮಾಡಿರುವುದು ಬೆಳಕಿಗೆ ಬಂದಿದೆ. ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಕೋರಮಂಗಲದಲ್ಲಿ ಕಾಮುಕರು ಯುವತಿಯರನ್ನು ಚುಡಾಯಿಸುತ್ತಿರುವುದು ಹಾಗೂ ಯುವತಿಯರಿಂದ ಒದೆ ತಿಂದಿರುವುದು ಸಿಸಿಟಿವಿಗಳಲ್ಲಿ ಸೆರೆ ಸಿಕ್ಕಿದೆ. ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರೂ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ. ಇದರಿಂದ ಮುಂದಿನ ವರ್ಷ ಹೊಸ ವರ್ಷಾಚರಣೆಯನ್ನು ಎಂಜಿ ರಸ್ತೆ ಸುತ್ತಮುತ್ತ ಕೈ ಬಿಡಬೇಕು ಎಂಬ ಕೂಗು ಸರ್ಕಾರದ ಕಡೆಯಿಂದ ಕೇಳಿ ಬರುತ್ತಿದೆ.