ಬೆಂಗಳೂರಲ್ಲಿ ಹೊಸ ವಾಹನ ನೋಂದಣಿ ಶೇ 20ರಷ್ಟು ಕುಸಿತ!

ಬೆಂಗಳೂರು, ಜೂನ್ 03 : ಟ್ರಾಫಿಕ್ ಸಮಸ್ಯೆ, ಸಂಚಾರ ದಟ್ಟಣೆ ವಿಚಾರ ಎಂದೂ ಬೆಂಗಳೂರು ನಗರದ ಜನರಿಗೆ ಸಂತಸ ತುರುವುದಿಲ್ಲ. ಆದರೆ, ಈ ಸುದ್ದಿ ನಗರದ ಜನರಿಗೆ ಸ್ಪಲ್ಪ ನೆಮ್ಮದಿ ತರಬಹುದು. ಉದ್ಯಾನ ನಗರಿಯಲ್ಲಿ ಹೊಸ ವಾಹನಗಳ ನೋಂದಣಿ ಕುಸಿತ ಕಂಡಿದೆ.

217-18ನೇ ಸಾಲಿನಲ್ಲಿ ನಗರದಲ್ಲಿ ಹೊಸ ವಾಹನಗಳ ನೋಂದಣಿ ಶೇ 20ರಷ್ಟು ಕಡಿಮೆಯಾಗಿದೆ. ಕಳೆದ ನಾಲ್ಕು ವರ್ಷಗಳಿಗೆ ಹೋಲಿಕೆ ಮಾಡಿದಲ್ಲಿ ಇದು ಶೇ 8ರಷ್ಟು ಕಡಿತಗೊಂಡಿದೆ.

ಸಾರಿಗೆ ಇಲಾಖೆಯ ಮಾಹಿತಿ ಪ್ರಕಾರ 2017-18ನೇ ಸಾಲಿನಲ್ಲಿ 5.69ಲಕ್ಷ ಹೊಸ ವಾಹನಗಳು ನಗರದ ರಸ್ತೆಗೆ ಬಂದಿವೆ. 2016-17ನೇ ಸಾಲಿನಲ್ಲಿ 7.20 ಲಕ್ಷ ವಾಹನಗಳು ನೋಂದಣಿಯಾಗಿದ್ದವು.

New vehicle registration rate in Bengaluru slows down

ನಮ್ಮ ಮೆಟ್ರೋ ಸೇವೆ, ಪೆಟ್ರೋಲ್/ಡೀಸೆಲ್ ದರ ಹೆಚ್ಚಳ, ಹದಗೆಟ್ಟ ರಸ್ತೆ, ಪಾರ್ಕಿಂಗ್ ಸಮಸ್ಯೆ ಮುಂತಾದ ಕಾರಣಗಳಿಂದಾಗಿ ನಗರದ ಹೊಸ ವಾಹನಗಳ ನೋಂದಣಿ ಕಡಿಮೆಯಾಗಿದೆ. ಮೊಬೈಲ್ ಅಪ್ಲಿಕೇಶನ್ ಆಧಾರಿತ ಕ್ಯಾಬ್‌, ಬೈಕ್ ಸೇವೆಗಳಿಂದಲೂ ಜನರು ವಾಹನ ಖರೀದಿ ಕಡಿಮೆ ಮಾಡಿದ್ದಾರೆ.

ಪ್ರತಿದಿನ ನಗರದಲ್ಲಿ ಸುಮಾರು 1600 ವಾಹನಗಳು ನೋಂದಣಿಯಾಗುತ್ತದೆ ಎಂದು ಅಂದಾಜಿಸಲಾಗಿದೆ. 2022ರ ವೇಳೆಗೆ ಬೆಂಗಳೂರು ನಗರದಲ್ಲಿ 1.80 ಕೋಟಿ ವಾಹನಗಳು ರಸ್ತೆಯಲ್ಲಿರಲಿವೆ.

ನೋಟುಗಳ ನಿಷೇಧ, ಜಿಎಸ್‌ಟಿ ಪ್ರಭಾವದಿಂದಾಗಿ ವಾಹನಗಳ ನೋಂದಣಿ ಕುಂಠಿತವಾಗಿದೆ ಎಂಬ ಮಾತುಗಳು ಇವೆ. ನಗರದಲ್ಲಿ 70 ಲಕ್ಷ ವಾಹನಗಳಿದ್ದು, 3,400 ಸಂಚಾರಿ ಪೊಲೀಸರಿದ್ದಾರೆ.

ಬೈಕುಗಳ ನೋಂದಣಿ : 2015-16ನೇ ಸಾಲಿನಲ್ಲಿ ಬೆಂಗಳೂರು ನಗರದಲ್ಲಿ ಶೇ 10ರಷ್ಟು ಬೈಕ್ ನೋಂದಣಿ ಆಗಿತ್ತು. 2016-17ರಲ್ಲಿ ಅದು ಶೇ 12ಕ್ಕೆ ಏರಿಕೆಯಾಗಿತ್ತು. 2017-18ನೇ ಸಾಲಿನಲ್ಲಿ ಶೇ 8ಕ್ಕೆ ಕುಸಿದಿದೆ.

ಕಾರುಗಳು : 2015-16ನೇ ಸಾಲಿನಲ್ಲಿ ನಗರದಲ್ಲಿ ಶೇ 9ರಷ್ಟು ಕಾರುಗಳ ನೋಂದಣಿಯಾಗಿತ್ತು. 2016-17ನೇ ಸಾಲಿನಲ್ಲಿ ಶೇ 11ಕ್ಕೆ ಏರಿಕೆಯಾಗಿತ್ತು. 2017-18ನೇ ಸಾಲಿನಲ್ಲಿ ಶೇ 8ರಷ್ಟು ಕಡಿಮೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+