Darshan Thoogudeepa: ದರ್ಶನ್ ತೂಗುದೀಪ್‌ಗೆ ದೊಡ್ಡ ಸಂಕಷ್ಟ: ಈ ತಪ್ಪು ಮಾಡಿದರೆ ಜಾಮೀನು ರದ್ದು!
ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ ಹಾಗೂ ನಟ ದರ್ಶನ್ ತೂಗುದೀಪ್‌ಗೆ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಲ್ಲೇ ಇದೆ. ಇದೀಗ ನಟ ದರ್ಶನ್‌ಗೆ ಯಾವ ರೀತಿಯ ಆರೋಗ್ಯ ಪರೀಕ್ಷೆ ನಡೆಸಲಾಗುತ್ತಿದೆ ಎನ್ನುವುದಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನೇ ನೀಡಿದೆ ಇರುವುದಕ್ಕೆ ಪ್ರಾಸಿಕ್ಯೂಷನ್ ಅಸಮಾಧಾನ ಹೊರ ಹಾಕಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ನಟ ದರ್ಶನ್‌ಗೆ ಇನ್ನಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆಯೇ ಎನ್ನಲಾಗುತ್ತಿದೆ. ದರ್ಶನ್‌ಗೆ ತೀವ್ರ ಬೆನ್ನು ನೋವು ಇದ್ದು, ಅವರಿಗೆ ಆಪರೇಷನ್ ಆಗಬೇಕು ಹೀಗಾಗಿ, ಜಾಮೀನು ನೀಡುವಂತೆ ಮನವಿ ಮಾಡಲಾಗಿತ್ತು. ಚಿಕಿತ್ಸೆಗಾಗಿ ಹೈಕೋರ್ಟ್ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ. ಆದರೆ ಇದೀಗ...
ನಟ ದರ್ಶನ್‌ಗೆ ಒಂದಿಲ್ಲೊಂದು ಸಂಕಷ್ಟಗಳು ಎದುರಾಗುತ್ತಲ್ಲೇ ಇವೆ. ಈಚೆಗಷ್ಟೇ ದರ್ಶನ್‌ಗೆ ನೀಡಿರುವ ಮಧ್ಯಂತರ ಜಾಮೀನು ರದ್ದುಪಡಿಸುವಂತೆ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿತ್ತು. ಇದಕ್ಕೆ ರಾಜ್ಯ ಗೃಹ ಇಲಾಖೆಯೂ ಸಮ್ಮತಿ ನೀಡಿತ್ತು. ಇನ್ನು ದರ್ಶನ್‌ಗೆ ಮಧ್ಯಂತ ಜಾಮೀನು ನೀಡುವಾಗಲೇ ಹೈಕೋರ್ಟ್ ಹಲವು ಮಹತ್ವದ ಷರತ್ತುಗಳನ್ನು ವಿಧಿಸಿತ್ತು. ಅದರಲ್ಲಿ ಬಳ್ಳಾರಿ ಜೈಲಿನಿಂದ ದರ್ಶನ್ ಬಿಡುಗಡೆಯಾದ ಮೇಲೆ ಆರೋಗ್ಯ (ಯಾವ ಚಿಕಿತ್ಸೆಗೆ ದರ್ಶನ್ ಒಳಗಾಗಲಿದ್ದಾರೆ) ವರದಿಯನ್ನು ಸಲ್ಲಿಸಬೇಕು ಎನ್ನುವ ಅಂಶವೂ ಪ್ರಮುಖವಾಗಿತ್ತು.

ಯಾವ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿಯೇ ಇಲ್ಲ!
ಇನ್ನು ಬೆನ್ನುಹುರಿ ನೋವಿಗೆ ಚಿಕಿತ್ಸೆ ಪಡೆದುಕೊಳ್ಳುವ ಉದ್ದೇಶದಿಂದ ನಟ ದರ್ಶನ್ ಹಾಗೂ ಅವರ ಪರ ವಕೀಲರು ಜಾಮೀನು ಕೋರಿದ್ದರು. ಅಗತ್ಯ ಹಾಗೂ ತುರ್ತು ಚಿಕಿತ್ಸೆಯ ಉದ್ದೇಶದಿಂದ ನಟ ದರ್ಶನ್‌ಗೆ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಲಾಗಿದೆ. ಆದರೆ, ಜಾಮೀನಿನ ಮೇಲೆ ಬಂದು ಇಷ್ಟು ದಿನವಾದರೂ, ಇಲ್ಲಿಯ ವರೆಗೆ ಅವರಿಗೆ ಯಾವ ಚಿಕಿತ್ಸೆ ಕೊಡಲಾಗ್ತಿದೆ ಎನ್ನುವ ಮಾಹಿತಿಯನ್ನೇ ನಮಗೆ ಕೊಟ್ಟಿಲ್ಲ ಎಂದು ಪ್ರಾಸಿಕ್ಯೂಷನ್ ಆಕ್ಷೇಪಣೆ ವ್ಯಕ್ತಪಡಿಸಿದೆ.
ದರ್ಶನ್‌ಗೆ ಮಧ್ಯಂತರ ಜಾಮೀನು ನೀಡುವಾಗಲೇ ಅವರಿಗೆ ಯಾವ ಮಾದರಿಯ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕಾಗಿ ಅವರು ಎಷ್ಟು ದಿನಗಳ ವರೆಗೆ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಯಾವಾಗ ಆಪರೇಷನ್ ಮಾಡಿಸಿಕೊಳ್ಳಬೇಕು ಹಾಗೂ ಇದಾದ ಮೇಲೆ ಏನಾದರೂ ಚಿಕಿತ್ಸೆ ಬೇಕಾ ಎನ್ನುವ ಮಾಹಿತಿಗಳನ್ನು ಬಳ್ಳಾರಿ ಜೈಲಿನಿಂದ ಬಿಡುಗಡೆಯಾದ ಒಂದು ವಾರದ ಒಳಗಾಗಿ ಸಲ್ಲಿಸುವಂತೆ ಹೇಳಲಾಗಿತ್ತು. ಆದರೆ, ಈ ಮಾಹಿತಿಯನ್ನು ಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಕೊಟ್ಟಿದ್ದಾರೆ. ಆದರೆ, ಪ್ರಾಸಿಕ್ಯೂಷನ್‌ಗೆ ಯಾವುದೇ ಮಾಹಿತಿಯನ್ನೂ ಇಲ್ಲಿಯವರೆಗೆ ಹಂಚಿಕೊಂಡಿಲ್ಲ ಎಂದು ಆಕ್ಷೇಪಣೆ ಪ್ರಾಸಿಕ್ಯೂಷನ್ ಆಕ್ಷೇಪವನ್ನು ವ್ಯಕ್ತಪಡಿಸಿದೆ.

ಪ್ರಾಸಿಕ್ಯೂಷನ್‌ಗೆ ಮಾಹಿತಿ ನೀಡಲು ಸೂಚನೆ
ಇನ್ನು ನಟ ದರ್ಶನ್‌ಗೆ ಯಾವ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ವಿವರವನ್ನು ಪ್ರಾಸಿಕ್ಯೂಷನ್‌ಗೆ ನೀಡುವಂತೆ ರಿಜಿಸ್ಟ್ರಿಗೆ ಆದೇಶ ನೀಡಲಾಗಿದೆ. ಹೀಗಾಗಿ, ದರ್ಶನ್ ಅವರು ಪಡೆಯುತ್ತಿರುವ ಚಿಕಿತ್ಸೆಯ ವಿವರವನ್ನು ಪ್ರಾಸಿಕ್ಯೂಷನ್‌ಗೆ ಸಲ್ಲಿಸಬೇಕಾಗುತ್ತದೆ. ಅಲ್ಲದೇ ಇದೇ ಸಂದರ್ಭದಲ್ಲಿ ಒಂದೊಮ್ಮೆ ಷರತ್ತುಗಳ ಉಲ್ಲಂಘನೆಯಾದರೆ, ಮಧ್ಯಂತರ ಜಾಮೀನು ಹಿಂದಕ್ಕೆ ಪಡೆಯುವುದಾಗಿಯೂ ಎಚ್ಚರಿಸಲಾಗಿದೆ ಎಂದು ವರದಿಯಾಗಿದೆ.
ದರ್ಶನ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು. ಯಾವ ಮಾದರಿಯ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ವಿಷಯವನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಅವರಿಗೆ ತುರ್ತಾಗಿ ಆಪರೇಷನ್ ಮಾಡಿಸುವ ಅವಶ್ಯಕತೆ ಇದೆ. ಕೂಡಲೇ ಅವರಿಗೆ ಚಿಕಿತ್ಸೆ ನೀಡಬೇಕು ಎಂದು ಮಧ್ಯಂತರ ಜಾಮೀನಿಗೂ ಮುಂಚೆ ದರ್ಶನ್ ಪರ ವಕೀಲರು ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.












Click it and Unblock the Notifications