New Link Road: ನಾಯಂಡಹಳ್ಳಿ ಮತ್ತು ಕೆಂಗೇರಿ ನಡುವೆ 9 ಕಿ.ಮೀ ನೈಸ್ ರಸ್ತೆ
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಕಂಟ್ರೋಲ್‌ಗೆ ಸಂಬಂಧಿಸಿದಂತೆ ಮಹತ್ವದ ಅಪ್‌ಡೇಟ್ ಆಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಮಿತಿ ಮೀರುತ್ತಿದೆ. ಇದೀಗ ಟ್ರಾಫಿಕ್ ಜಾಮ್ ಕಂಟ್ರೋಲ್ ಮಾಡುವುದಕ್ಕೆ ನೈಸ್ ಲಿಂಕ್ (ಸಂಪರ್ಕ) ರಸ್ತೆಗಳನ್ನು ಅಭಿವೃದ್ಧಿಪಡಿಸುವ ಪ್ಲಾನ್ ಹಾಕಿಕೊಳ್ಳಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್‌ಗೆ ಕಡಿವಾಣ ಬೀಳಲಿದೆ. ಅದರಲ್ಲೂ ಮುಖ್ಯವಾಗಿ ನಾಯಂಡಹಳ್ಳಿ ಹಾಗೂ ಕೆಂಗೇರಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್‌ಗೆ ಕಡಿವಾಣ ಬೀಳಲಿದೆ. ಇಲ್ಲಿನ ದೀಪಾಂಜಲಿ ನಗರ ಹಾಗೂ ಕೆಂಗೇರಿ ಮಾರ್ಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಅದನ್ನು ತಪ್ಪಿಸುವ ಉದ್ದೇಶದಿಂದ 9 ಕಿ.ಮೀ ಉದ್ದದ ಲಿಂಕ್ ರಸ್ತೆ ಅಭಿವೃದ್ಧಿಪಡಿಸುವುದಕ್ಕೆ ಭರ್ಜರಿ ಪ್ಲಾನ್ ಮಾಡಿಕೊಳ್ಳಲಾಗಿದೆ. ಏನಿದು ಹೊಸ ಯೋಜನೆ, ಇದರಿಂದ ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಕಂಟ್ರೋಲ್ ಆಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನ ಬಿಎಚ್‌ಇಎಲ್ ಹಾಗೂ ದೀಪಾಂಜಲಿ ನಗರ ಜಂಕ್ಷನ್ ಮಾರ್ಗದಲ್ಲಿ 9 ಕಿಲೋಮೀಟರ್ ಲಿಂಕ್ ರಸ್ತೆಯನ್ನು ನಿರ್ಮಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಇಲ್ಲಿ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಾಗಿ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್) ಹೇಳಿರುವುದು ವರದಿಯಾಗಿದೆ. ಈ ಹೊಸ ಪ್ಲಾನ್‌ನಿಂದಾಗಿ ನಾಯಂಡಹಳ್ಳಿ ಮತ್ತು ಕೆಂಗೇರಿ ನಡುವಿನ ಮುಂದಿನ ದಿನಗಳಲ್ಲಿ ಟ್ರಾಫಿಕ್ ಜಾಮ್‌ಗೆ ಬ್ರೇಕ್ ಬೀಳಲಿದೆ. ಇಲ್ಲಿ ಪಿಇಎಸ್ ಕಾಲೇಜ, ಹೊಸಕೆರೆಹಳ್ಳಿ ಹಾಗೂ ದೀಪಾಂಜಲಿ ನಗರದ ಮುಖ್ಯರಸ್ತೆಗಳಲ್ಲಿ ಸದಾ ಟ್ರಾಫಿಕ್ ಜಾಮ್ ಇರುತ್ತದೆ. ಹೊಸ ಯೋಜನೆಯಿಂದ ಇದು ತಪ್ಪಲಿದೆ. ಅಲ್ಲದೆ ಈ ಕಾಮಗಾರಿಗಳು ಮುಗಿದ ಮೇಲೆ ದೀಪಾಂಜಲಿ ನಗರದಲ್ಲಿ ವಾಹನ ಸಂಚಾರ ಸುಗಮವಾಗಲಿದೆ ಎಂದು ಹೇಳಲಾಗಿದೆ.

ಮುಂದುವರಿದು ರಾಜರಾಜೇಶ್ವರಿ ನಗರ ಜಂಕ್ಷನ್, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಪಟ್ಟಣಗೆರೆ ಮಾರ್ಗದಲ್ಲಿ ಸಂಚಾರ ದಟ್ಟಣೆ ತಪ್ಪಲಿದೆ. ದೀಪಾಂಜಲಿ ನಗರದಿಂದ ಸುಗಮ ಮಾರ್ಗ ನಿರ್ಮಾಣ ಆಗಲಿದೆ. ಅಲ್ಲದೆ ಈ ಬದಲಾವಣೆಗಳಿಂದಾಗಿ ಮಾರ್ಗಗಳಲ್ಲಿ ಸಂಚರಿಸುವ ವಾಹನ ಸವಾರರು ಕೇವಲ 20 ನಿಮಿಷಗಳಲ್ಲಿ ಕೆಂಗೇರಿಗೆ ತಲುಪಬಹುದಾಗಿದೆ. ಪೀಕ್ ಅವರ್‌ಗಳಲ್ಲಿ 50ರಿಂದ 60 ನಿಮಿಷಗಳಲ್ಲಿ ತಲುಪಲು ಸಾಧ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಟೋಲ್ ಮುಕ್ತ: ಇನ್ನು ಹೊಸ ಸಂಪರ್ಕ ರಸ್ತೆಗಳಲ್ಲಿ ಮೊದಲ 1.5 ಕಿ.ಮೀ ಮಾರ್ಗವು ಟೋಲ್ ಮುಕ್ತವಾಗಿ ಇರಲಿದೆ. ಪಿಇಎಸ್ ಕಾಲೇಜು ಜಂಕ್ಷನ್ ಹಾಗೂ ಬನಶಂಕರಿ ಮಾರ್ಗವಾಗಿ ವಾಹನ ಚಲಾಯಿಸುವವರಿಗೆ ಇದರ ಲಾಭ ಸಿಗಲಿದೆ. ಹೊಸ ಮಾರ್ಗದಿಂದ ಪಿಇಎಸ್ ಕಾಲೇಜು, ಬನಶಂಕರಿ,ಚಾಮರಾಜಪೇಟೆ ಹಾಗೂ ವಿಜಯನಗರ ಪ್ರದೇಶದ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಮುಂದುವರಿದು ಮೈಸೂರು ಕಡೆಗೆ ಹೋಗುವ ಪ್ರಯಾಣಿಕರು ಸಹ ಟ್ರಾಫಿಕ್ ಜಾಮ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲಿದ್ದಾರೆ.

ಟ್ರಾಫಿಕ್ ಸಿಗ್ನಲ್‌ಗಳಿಂದ ಮುಕ್ತಿ: ಮುಖ್ಯವಾಗಿ ಹೊಸ ಪ್ಲಾನ್‌ನಿಂದಾಗಿ ವಾಹನ ಸವಾರರಿಗೆ ಟ್ರಾಫಿಕ್ ಜಾಮ್‌ನ ಜೊತೆ ಜೊತೆಗೆ ಟ್ರಾಫಿಕ್ ಸಿಗ್ನಲ್‌ನಿಂದಲೂ ಮುಕ್ತಿ ಸಿಗಲಿದೆ. ಇಲ್ಲಿನ ದೀಪಾಂಜಲಿ ನಗರ ಹಾಗೂ ಕೆಂಗೇರಿ ನಡುವಿನ ಮಾರ್ಗದಲ್ಲಿ ಕನಿಷ್ಠ ನಾಲ್ಕು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕಾಯುವುದನ್ನು ತಪ್ಪಿಸಬಹುದಾಗಿದೆ. ಹೊಸ ಸಂಪರ್ಕ ರಸ್ತೆ ನಿರ್ಮಾಣದಿಂದಾಗಿ ಮೈಸೂರು ರಸ್ತೆಯಲ್ಲಿ ಅಂದಾಜು 30ರಿಂದ 35ರಷ್ಟು ಟ್ರಾಫಿಕ್ ಜಾಮ್ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications