ಕಬ್ಬನ್ ಪಾರ್ಕ್ ಜಂಟಿ ಪ್ರವೇಶ ದ್ವಾರ ಸಂಚಾರಕ್ಕೆ ಮುಕ್ತ

ಬೆಂಗಳೂರು, ಜನವರಿ 20 : ರಾಜ್ಯ ತೋಟಗಾರಿಕೆ ಇಲಾಖೆಯು ವಿಧಾನಸೌಧ ಮುಂಭಾಗದಲ್ಲಿನ ಗೋಪಾಲಗೌಡ ವೃತ್ತದ ಬಳಿ ನಿರ್ಮಿಸಲಾಗಿರುವ ಶ್ರೀ ಚಾಮರಾಜೇಂದ್ರ ಉದ್ಯಾನದ ಜಂಟಿ ಪ್ರವೇಶದ್ವಾರವನ್ನು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಶುಕ್ರವಾರ ಉದ್ಘಾಟಿಸಿದ್ದಾರೆ.

ಕಬ್ಬನ್ ಪಾರ್ಕ್ ಗೆ ಶ್ರೀ ಚಾಮರಾಜೇಂದ್ರ ಉದ್ಯಾನ ಎಂದು ಮರು ನಾಮಕರಣ ಮಾಡಿದ 20ವರ್ಷಗಳ ಬಳಿಕ ಅಧಿಕೃತವಾಗಿ ಇದೇ ಮೊದಲ ಬಾರಿಗೆ ಚಾಮರಾಜೇಂದ್ರ ಉದ್ಯಾನ ಎಂದು ದ್ವಾರಗಳ ಮೇಲೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಬರೆಸಲಾಗಿದೆ. ಕರ್ನಾಟಕ ಸರ್ಕಾರದ ಲಾಂಛನವೂ ಇದೆ. ಈ ದ್ವಾರವನ್ನು ಹೈಕೋರ್ಟ್ ಕಟ್ಟಡದ ವಿನ್ಯಾಸಕ್ಕೆ ಪೂರಕವಾಗಿ ನಿರ್ಮಿಸಲಾಗಿದೆ.

New face lift for Cubbon park entrance

ದ್ವಾರಗಳ ವಿಶೇಷ: ದ್ವಾರದ ಹಿಂಬದಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪ್ರಕೃತಿ ದೇವಿಯ ಸೊಬಗು ದೇಗುಲದಿ, ಆನಂದವೇ ಪೂಜೆ ಮೌನವೇ ಮಹಾಸ್ತೋತ್ರ ಹಾಗೂ ಕವಿ ಜಿ.ಎಸ್. ಶಿವರುದ್ರಪ್ಪ ಅವರ ಕವನವೊಂದರ ದಿನದ ಧೂಳಿನ ಕೊಳೆವ ತೊಳೆವುದು ಇಲ್ಲಿನ ಅಮೃತದ ಸೇಚನ- ಪ್ರಕೃತಿ ಮಾತೆಯ ಸ್ತನ್ಯಪಾನದಿ ಪುಷ್ಟೊಕೊಳ್ಳುವುದು ಚೇತನ ಎಂಬ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಸಾಲುಗಳನ್ನು ಬರೆಯಲಾಗಿದೆ.

40 ಲಕ್ಷ ರೂ. ವೆಚ್ಚದಲ್ಲಿ ಈ ದ್ವಾರವನ್ನು ನಿರ್ಮಿಸಲಾಗಿದೆ. ಹಡ್ಸನ್ ವೃತ್ತದ ಪ್ರವೇಶ ದ್ವಾರವನ್ನು 45 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದೂ ಒಂದೆರೆಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+