ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯಿಂದ ಹೊಸದಾಗಿ ಮನೆ ಮನೆ ಮತದಾರರ ಸಮೀಕ್ಷೆ

|
Google Oneindia Kannada News

ಬೆಂಗಳೂರು, ಡಿಸೆಂಬರ್‌ 7: ಮತದಾರರ ದತ್ತಾಂಶ ಕಳ್ಳತನದ ಹಗರಣದಲ್ಲಿ ಅಪಖ್ಯಾತಿಗೆ ಒಳಗಾಗಿರುವ ಬಿಬಿಎಂಪಿ ಇದೀಗ ಎಲ್ಲಾ ಅರ್ಹ ಮತದಾರರನ್ನು ಸೇರ್ಪಡೆಗೊಳಿಸಲು ಹೊಸದಾಗಿ ಮನೆ ಮನೆ ಸಮೀಕ್ಷೆಯನ್ನು ಪ್ರಾರಂಭಿಸಿದೆ.

ಬಿಬಿಎಂಪಿಯ ಈ ಕ್ರಮ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ಒಟ್ಟು ಮನೆಗಳ 59.62 ಪ್ರತಿಶತವನ್ನು ಒಳಗೊಂಡಿದೆ. ಆದಾಗ್ಯೂ, ಕೆಲವು ಕಂದಾಯ ಅಧಿಕಾರಿಗಳು, ನಿವಾಸಿಗಳಿಂದ ಉತ್ತಮ ಬೆಂಬಲವನ್ನು ಪಡೆಯುತ್ತಿಲ್ಲ ಎಂದು ದೂರಿದರು. ಅದರಲ್ಲೂ ವಿಶೇಷವಾಗಿ ಬಿಬಿಎಂಪಿಗೆ ಉಚಿತ ಚುನಾವಣಾ ಸಂಬಂಧಿತ ಸೇವೆಗಳನ್ನು ಒದಗಿಸುವ ನೆಪದಲ್ಲಿ ರಾಜಕೀಯ ಮುಖಂಡರಿಗೆ ಎನ್‌ಜಿಒ ಚಿಲುಮೆ ಕೆಲಸ ಮಾಡುತ್ತಿರುವುದು ಕಂಡುಬಂದಿದೆ.

ಆರ್ ಆರ್ ನಗರದಲ್ಲಿ ಮತದಾರರ ಪಟ್ಟಿ ಅಕ್ರಮದ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರುಆರ್ ಆರ್ ನಗರದಲ್ಲಿ ಮತದಾರರ ಪಟ್ಟಿ ಅಕ್ರಮದ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ಏತನ್ಮಧ್ಯೆ, ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಜನವರಿ 2022ರಿಂದ ಮತದಾರರ ಪಟ್ಟಿಗೆ ಮಾಡಲಾದ ಸೇರ್ಪಡೆ ಮತ್ತು ಅಳಿಸುವಿಕೆಗೆ ಆಕ್ಷೇಪಣೆಗಳನ್ನು ಎತ್ತಲು ಐಎಎಸ್ ಅಧಿಕಾರಿ ಅಜಯ್ ನಾಗಭೂಷಣ್ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಮತ್ತು ಅವುಗಳ ಪದಾಧಿಕಾರಿಗಳ ಸಭೆ ಕರೆದಿದ್ದಾರೆ. ಡಿ. 7ರಂದು ಮಧ್ಯಾಹ್ನ 12 ಗಂಟೆಗೆ ವೈಟ್‌ಫೀಲ್ಡ್ ಮುಖ್ಯರಸ್ತೆಯ ಆರ್‌ಎಚ್‌ಬಿ ಕಾಲೋನಿಯಲ್ಲಿರುವ ಜಂಟಿ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಯಲಿದೆ. ಶ್ರೀನಿವಾಸ್, ಕಂದಾಯ ಅಧಿಕಾರಿ, ಮಹದೇವಪುರ, ವಿವರಗಳಿಗೆ ದೂ.9480684998 ಸಂಪರ್ಕಿಸಬಹುದು.

 New Door to Door Voter Survey by BBMP

ಇದೇ ರೀತಿಯ ಸಮೀಕ್ಷೆಯನ್ನು ನವೆಂಬರ್ ಮಧ್ಯದಲ್ಲಿ ಚಿಲುಮೆ ಎನ್‌ಜಿಒ ನಡೆಸಿದ ನಂತರ ಬಿಬಿಎಂಪಿ ನೂತನ ಮತದಾರರ ಸೇರ್ಪಡೆ ಕ್ರಮ ಕೈಗೊಳ್ಳಲಾಗಿದೆ. ಬಿಬಿಎಂಪಿ ಅಧಿಕಾರಿಗಳನ್ನು ಯಾಮಾರಿಸಿ ಜಾಗೃತಿ ಮೂಡಿಸುವ ನೆಪದಲ್ಲಿ ಸಾರ್ವಜನಿಕರಿಂದ ವೈಯಕ್ತಿಕ ಮಾಹಿತಿ ಸಂಗ್ರಹಿಸುತ್ತಿದೆ ಎಂಬ ಆರೋಪ ಎನ್‌ಜಿಒ ಮೇಲಿದೆ. ಆಡಳಿತಾರೂಢ ಬಿಜೆಪಿ ಸರ್ಕಾರದ ಜೊತೆ ಶಾಮೀಲಾಗಿ ಈ ಕೃತ್ಯ ಎಸಗಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಈ ಆರೋಪವನ್ನು ಬಿಜೆಪಿ ನಿರಾಕರಿಸಿದೆ.

ಬಿಬಿಎಂಪಿ ನಡೆಸಲಿರುವ ತಾಜಾ ಸಮೀಕ್ಷೆಯು ಗರಿಷ್ಠ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಎಲ್ಲಾ 28 ಕ್ಷೇತ್ರಗಳಲ್ಲಿ ಸುಮಾರು 60 ಪ್ರತಿಶತ ಮನೆಗಳನ್ನು ಇದುವರೆಗೆ ಸಮೀಕ್ಷೆ ಮಾಡಲಾಗಿದೆ ಎಂದು ಅದು ಹೇಳಿದೆ. ಹಿಂದಿನ ಸಮೀಕ್ಷೆಯನ್ನು ಬಿಬಿಎಂಪಿ ಆದೇಶದಿಂದ ಸುಗಮಗೊಳಿಸಲಾಯಿತು. ಇದು ಎನ್‌ಜಿಒ ಚಿಲುಮೆಗೆ ಮನೆ ಮನೆಗೆ ಹೋಗಲು ಮತ್ತು ಆನ್‌ಲೈನ್‌ನಲ್ಲಿ ಮತದಾರರ ಐಡಿಗಾಗಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ಜಾಗೃತಿ ಮೂಡಿಸಲು ಅನುಮತಿ ನೀಡಿತ್ತು. ಆದಾಗ್ಯೂ, ಎನ್‌ಜಿಒ ಸದಸ್ಯರು ಸರ್ಕಾರಿ ಅಧಿಕಾರಿಗಳಂತೆ ಪೋಸುಕೊಟ್ಟು ಬೆಂಗಳೂರಿನ ಸಾವಿರಾರು ಮತದಾರರ ಖಾಸಗಿ ಮಾಹಿತಿಯನ್ನು ಜಾತಿಯಿಂದ ವೈವಾಹಿಕ ಸ್ಥಿತಿಯವರೆಗೆ ಪಡೆದುಕೊಂಡಿದ್ದಾರೆ ಎಂದು ನಂತರ ತಿಳಿದುಬಂದಿದೆ.

ವೋಟರ್ ಐಡಿ ಮಿಸ್ಸಿಂಗ್ ಕೇಸ್: ಎಸ್‌ಐಟಿ ರಚನೆಗೆ ಹೈಕೋರ್ಟ್ ಸಿಜೆಗೆ ಮೊರೆವೋಟರ್ ಐಡಿ ಮಿಸ್ಸಿಂಗ್ ಕೇಸ್: ಎಸ್‌ಐಟಿ ರಚನೆಗೆ ಹೈಕೋರ್ಟ್ ಸಿಜೆಗೆ ಮೊರೆ

English summary
The BBMP, which has been in disrepute in the voter data theft scandal, has now launched a new door-to-door survey to enroll all eligible voters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X