ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪತ್ರಕರ್ತರ ಪಾಠ

New academic year at IIJNM, Bangalore inaugurated
ಬೆಂಗಳೂರು, ಜು. 15 : "ನಂಬಿಕಾರ್ಹತೆ ಗಳಿಸಿ, ತೊಡಗಿಸಿಕೊಳ್ಳಿ, ಪ್ರಭಾವಶಾಲಿಯಾಗಿರಿ. ಆಗ ಮಾತ್ರ ನಿಮ್ಮನ್ನು ನೀವು ವಿಭಿನ್ನವಾಗಿ ಬಿಂಬಿಸಿಕೊಳ್ಳಲು ಸಾಧ್ಯ" ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜರ್ನಲಿಸಂ ಮತ್ತು ನ್ಯೂ ಮೀಡಿಯಾ(ಐಐಜೆಎನ್ಎಂ)ದ ಅರಳುತ್ತಿರುವ ಪತ್ರಕರ್ತರಿಗೆ ಹಿಂದೂಸ್ತಾನ್ ಟೈಮ್ಸ್‌ನ ಸಹಾಯಕ ಕಾರ್ಯನಿರ್ವಾಹಕ ಸಂಪಾದಕ ಸೀತಾರಾಮನ್ ಶಂಕರ್ ಅವರು ಕಿವಿಮಾತು ಹೇಳಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿಗಳನ್ನು ಉದ್ಘಾಟಿಸಿದ ನಂತರ ಯುವ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸತ್ಯ ನುಡಿಯುವುದಕ್ಕಾಗಿ ಹಣ ನೀಡುತ್ತಿರುವ ಏಕೈಕ ವೃತ್ತಿ ಪತ್ರಿಕೋದ್ಯಮವಾಗಿದ್ದು, ಬೇಸರಕ್ಕೆ ಮತ್ತು ಸಿನಿಕತನಕ್ಕೆ ಅವಕಾಶವೇ ಇರುವುದಿಲ್ಲ. ನೀವು ಅತ್ಯುತ್ತಮ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಬದಲಾವಣೆಯ ಹರಿಕಾರರು ನೀವೇ ಆಗಿರಿ ಎಂದು ಹುರಿದುಂಬಿಸಿದರು.

ಈ ವೃತ್ತಿಯಲ್ಲಿ ಹಣಕ್ಕಾಗಿ ಸುದ್ದಿ, ಮಾಧ್ಯಮದ ಮೇಲೆ ಕಾರ್ಪೊರೇಟ್ ಪ್ರಭುತ್ವ, ಆನ್‌ಲೈನ್ ಮತ್ತು ಪ್ರಿಂಟ್ ಮೀಡಿಯಾದ ಹಗ್ಗ ಜಗ್ಗಾಟದಂಥ ಹಲವಾರು ಸಮಸ್ಯೆಗಳು ಕಾಡುತ್ತಿದ್ದರೂ, ಇಂಥ ಸಮಸ್ಯೆಗಳೇ ಹೊಸ ಪರಿಹಾರ ಕಂಡುಕೊಳ್ಳುವಲ್ಲಿ ಮತ್ತು ಹೊಸ ಬಗೆಯ ಮಾಹಿತಿ ನೀಡುವಲ್ಲಿ ಸಹಕಾರಿಯಾಗಿವೆ ಎಂದು ಅವರು ಬೆಂಗಳೂರಿನಲ್ಲಿರುವ ಕುಂಬಳಗೋಡಿನಲ್ಲಿರುವ ಐಐಜೆಎನ್ಎಂನ ವಿದ್ಯಾರ್ಥಿಗಳಿಗೆ ವಿವರಿಸಿದರು.

ಇಂದಿನ ಪೀಳಿಗೆಯ ಪತ್ರಕರ್ತರು ಸ್ಥಳೀಯ ಸುದ್ದಿಗಳನ್ನು ಹೆಕ್ಕಿ, ಮೂಲೆಮೂಲೆಗೂ ತಲುಪಿಸಬೇಕು. ಹೊಸ ತಂತ್ರಜ್ಞಾನಗಳ ಆವಿಷ್ಕಾರವಾದಂತೆ ನಿರಂತರವಾಗಿ ತರಬೇತಿ ಪಡೆಯುತ್ತಲೇ ಇರಬೇಕು ಮತ್ತು ಕ್ಷಣಿಕ ಖ್ಯಾತಿಗೆ ಮರುಳಾಗದೆ ಸುದೀರ್ಘವಾಗಿ ಪತ್ರಿಕೋದ್ಯಮದಲ್ಲಿ ತೊಡಗಿಕೊಳ್ಳವತ್ತ ಚಿತ್ತ ಹರಿಸಬೇಕು ಎಂದೂ ಅವರು ಭಾವೀ ಪತ್ರಕರ್ತರಿಗೆ ಮನವರಿಕೆ ಮಾಡಿಕೊಟ್ಟರು.

ಐಐಜೆಎನ್ಎಂನ ಡೀನ್ ಆಗಿರುವ ಡಾ. ಅಬ್ರಹಾಂ ಎಂ. ಜಾರ್ಜ್ ಅವರು ಮಾತನಾಡಿ, ದೇಶದ ಆಡಳಿತ ಸಮತೂಕದಿಂದ ನಡೆಯಲು ಮಾಧ್ಯಮ ಮಹತ್ವದ ಪಾತ್ರ ವಹಿಸುತ್ತದೆ ಎಂದು ನುಡಿದರು. ಅಲ್ಲದೆ, ಪತ್ರಿಕೋದ್ಯಮ ಇಂಟರ್ನೆಟ್ ನಿಂದಾಗಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದು, ಈ ಬದಲಾವಣೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಯುವ ಪತ್ರಕರ್ತರಿಗೆ ಪತ್ರಿಕೋದ್ಯಮದ ಪ್ರಾಥಮಿಕ ಪಾಠ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+