ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಾತಂತ್ರ್ಯ ಉದ್ಯಾನದಲ್ಲಿ NDRF ಕಾರ್ಯಾಚರಣೆಯ ಕಲ್ಪಿತ ಪ್ರದರ್ಶನ

|
Google Oneindia Kannada News

ಬೆಂಗಳೂರು, ಡಿಸೆಂಬರ್ 22: ಸ್ವಾತಂತ್ರ್ಯ ಉದ್ಯಾನದಲ್ಲಿ ಎನ್‌ಡಿಆರ್‌ಎಫ್ ನಡೆಸುವ ಅಪಾಯಕಾರಿ ಸನ್ನಿವೇಶಗಳ ಅಣಕು ಪ್ರದರ್ಶನ ನಡೆಯಿತು. ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಬೆಳಗ್ಗೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು, 11 ಗಂಟೆ ಸುಮಾರಿಗೆ ಸ್ವಚ್ಛತಾ ಕಾರ್ಮಿಕರಿಗೆ ಅನುಮಾನಾಸ್ಪದ ಪೊಟ್ಟಣವೊಂದು ಸಿಕ್ಕಿ ಅವರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ಈ ಕುರಿತು ಪರಿಶೀಲನೆಗೆ ಬಂದಿದ್ದ ಇಬ್ಬರಲ್ಲಿ ಒಬ್ಬರು ಪೊಟ್ಟಣದಿಂದ ಹೊರಸೂಸುತ್ತಿದ್ದ ವಿಷಾನಿಲದಿಂದ ಮೂರ್ಛೆ ತಪ್ಪಿದ್ದರು. ಸುದ್ದಿ ತಿಳಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಆಗಮಿಸಿ ರೇಡಿಯೋ ಆಕ್ಟೀವ್ ಪೊಟ್ಟಣ ತೆರವುಗೊಳಿಸಿ ಸಂಭವಿಸಬಹುದಾಗಿದ್ದ ಅಪಾಯವನ್ನು ತಪ್ಪಿಸಿದರು.

ಬೆಂಗಳೂರು ಜಿಲ್ಲಾಡಳಿತ ಆಯೋಜಿಸಿದ್ದ ಅಣಕು ಕಾರ್ಯಾಚರಣೆಯ ಮೂಲಕ ಎನ್‌ಡಿಆರ್‌ಎಫ್ 10ನೇ ಬೆಟಾಲಿಯನ್ ಇನ್ಸ್‌ಪೆಕ್ಟರ್ ಬಬ್ಲೂ ವಿಶ್ವಾಸ್ ನೇತೃತ್ವದ ತಂಡ ಇಡೀ ಸನ್ನಿವೇಶವನ್ನು ಮನೋಜ್ಞವಾಗಿ ತೋರಿಸಿಕೊಟ್ಟಿತು.

NDRF Team Conducts Mock Drill At Freedom Park in Bengaluru

ಇದಿಷ್ಟೂ ಸ್ವಾತಂತ್ರ್ಯ ಉದ್ಯಾನದಲ್ಲಿ ನಿಜವಾಗಿ ನಡೆದ ಘಟನೆಯಲ್ಲ, ಬದಲಿಗೆ, ಇಂತಹ ಸನ್ನಿವೇಶ ಎದುರಾದರೆ ಸಾರ್ವಜನಿಕರು, ಕಾರ್ಮಿಕರು ವಹಿಸಬೇಕಾದ ಹೊಣೆಗಾರಿಕೆ ಹಾಗೂ ಎನ್‌ಡಿಆರ್‌ಎಫ್ ನಡೆಸುವ ಕಾರ್ಯಾಚರಣೆಯ ಕಲ್ಪಿತ ಪ್ರದರ್ಶನವಾಗಿತ್ತು.

ದಾಳಿ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು?:
ಬೇರೆ ಬೇರೆ ದೇಶಗಳ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಬಾಂಬ್ ದಾಳಿ, ಗುಂಡಿನ ದಾಳಿ ನಡೆಸುವುದು ಸಾಮಾನ್ಯ. ಆದರೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಪಾಯಕಾರಿ ರಾಸಾಯನಿಕ, ಜೈವಿಕ, ರೇಡಿಯೋಲಾಜಿಕಲ್ ಹಾಗೂ ಅಣ್ವಸ್ತ್ರ ಮೂಲಕ ಮೌನವಾಗಿ ಸಾವಿರಾರು ಜನರ ಮೇಲೆ ದಾಳಿ ಮಾಡುವ ಸಾಧ್ಯತೆಯೂ ಇರುತ್ತದೆ. ಇಂತಹ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಎನ್ನುವುದರ ಕುರಿತು ಕಲ್ಪಿತ ಕಾರ್ಯಾಚರಣೆ ನಡೆಸಲಾಯಿತು.

ದೆಹಲಿಯಲ್ಲಿ ಚಿಂದಿ ಆಯುವ ವ್ಯಕ್ತಿಯೊಬ್ಬನಿಗೆ ಇಂತಹ ಹೊಳೆಯುವ ಪೊಟ್ಟಣ ಸಿಕ್ಕಿ ಆತ ಅದನ್ನು ಜೇಬಿನಲ್ಲಿಟ್ಟುಕೊಂಡು ಅನೇಕ ದಿನ ಕಳೆದಿದ್ದ. ಆ ಸ್ಥಳದಲ್ಲಿ ವಿಕಿರಣದಿಂದ ಹಾನಿಯಾಗಿ, ವೈದ್ಯರ ತೋರಿಸಿದಾಗ ವಿಷಯ ತಿಳಿದುಬಂದಿತ್ತು.ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಅನುಮಾನಾಸ್ಪದ ವಸ್ತುಗಳು ದೊರಕಿದಾಗ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು.

Recommended Video

ಮೋದಿ‌ ಮಾತಿಗೆ ಬೆಲೆ‌ ಕೊಡದ ಸಂಸದರ ಮುಂದಿನ‌ ಭವಿಷ್ಯ?? | Oneindia Kannada

English summary
The NDRF conducted a mock drill at Freedom Park here on Tuesday to create awareness about emergency rescue operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X