ಆಲ್ಪ್ರಾಜೋಲಮ್ ಮಾದಕ ವಸ್ತು ಮಾರಾಟ ಕಿಂಗ್ ಪಿನ್ ಸೆರೆ
ಬೆಂಗಳೂರು, ಜು. 17: ಆಲ್ಪ್ರಾಜೋಲಮ್ ಎಂಬ ಮಾದಕ ವಸ್ತು ತಯಾರಿಕಾ ಘಟಕ ಮೇಲೆ ದಾಳಿ ಮಾಡಿರುವ ಎನ್‌ಸಿಬಿ ಅಧಿಕಾರಿಗಳು ತೆಲಂಗಾಣ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ.
ತೆಲಂಗಾಣ ಮೂಲದ ಬಡ್ಡಿಗಾರಿ ಪಾಂಡುಗೌಡ ಬಂಧಿತ ಆರೋಪಿ. ಈತನ ಬಳಿಯಿದ್ದ 4.38 ಲಕ್ಷ ರೂ. ಮೌಲ್ಯದ 150 ಗ್ರಾಂ ಆಲ್ಪ್ರಾಜೋಲಮ್ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಜೂ. 25 ರಂದು ಕರ್ನಾಟಕ ಮತ್ತು ಆಂಧ್ರ ಬೀದರ್ ನಲ್ಲಿ ಆಲ್ಪಾಜೋಲಮ್ ಮಾದಕ ವಸ್ತು ತಯಾರಿಕಾ ಘಟಕದ ಮೇಲೆ ದಾಳಿ ಮಾಡಿದ್ದ ಎನ್‌ಸಿಬಿ ಅಧಿಕಾರಿಗಳು ಐವರು ಆರೋಪಿಗಳನ್ನು ಬಂಧಿಸಿದ್ದರು. 91 ಕೆ.ಜಿ ಆಲ್ಪ್ರಾಜೋಲಮ್ ಮಾದಕ ವಸ್ತು ವಶಪಡಿಸಿಕೊಂಡಿದ್ದರು. ಪ್ರಮುಖ ಆರೊಪಿ ಭಾಸ್ಕರ್ ಎಂಬಾತ ಬಂಧನಕ್ಕೆ ಒಳಗಾಗಿದ್ದ.

ಆಲ್ಪ್ರಾಜೋಲಮ್ ಮಾರಾಟ ಕುರಿತು ತನಿಖೆ ನಡೆಸಿದ್ದ ಎನ್‌ಸಿಬಿ ಅಧಿಕಾರಿಗಳಿಗೆ, ಬಡ್ಡಿಗಾರಿ ಪಾಂಡು ಈ ಮಾದಕ ವಸ್ತು ಮಾರಾಟ ಮಾಲದಲ್ಲಿ ಕಳೆದ ಎಂಟು ವರ್ಷದಿಂಧ ತೊಡಗಿಸಿಕೊಂಡಿದ್ದ. ಕರ್ನಾಟಕ ಮತ್ತು ಆಂಧ್ರದಲ್ಲಿ ಈ ರೀತಿಯ ಆಲ್‌ಪ್ರಾಜೋಲಮ್ ಮಾದಕ ವಸ್ತುಗಳನ್ನು ವಿವಿಧ ಅಂಗಡಿಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಸಂಗತಿಯನ್ನು ಬಾಯಿ ಬಿಟ್ಟಿದ್ದಾನೆ. ಅದರ ಮಾಹಿತಿ ಆಧಾರದ ಮೇಲೆ ಬಡ್ಡಿಗಾರಿ ಪಾಂಡುನನ್ನು ಬಂಧಿಸಲಾಗಿದೆ. ಬೀದರ್ ನಲ್ಲಿ ಆಲ್ಫ್ರಾಜೋಲಮ್ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿದ ಬಳಿಕ ಪಾಂಡು ತಲೆ ಮರೆಸಿಕೊಂಡಿದ್ದ. ಈತನ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ ಬೆಂಗಳೂರು ಎನ್ ಸಿಬಿ ಅಧಿಕಾರಿಗಳು, ಕರ್ನಾಟಕ ಮತ್ತು ಆಂಧ್ರ ಪ್ರದೇಶಕ್ಕೆ ಅಲ್ಪ್ರಾಜೋಲಮ್ ಮಾದಕ ವಸ್ತು ಖರೀದಿಸಿ ಸಾಗಣೆ ಮಾಡುತ್ತಿದ್ದ ಬಡ್ಡಿಗಾರಿ ಪಾಂಡುನನ್ನು ಬಂಧಿಸಿದ್ದಾರೆ. ಬಂಧಿತನಿಂದ 4.38 ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿರುವುದಾಗಿ ಎನ್ ಸಿಬಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications