ಪ್ರಧಾನಿ ಪಟ್ಟಕ್ಕೆ ರಾಹುಲ್ ಗಿಂತ ಮೋದಿ ಸೂಕ್ತ: ಭೈರಪ್ಪ
ಬೆಂಗಳೂರು, ಏ.7: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಬ್ಬರ ಹಿನ್ನೆಲೆ ಗಮನಿಸಿದರೆ ಪ್ರಧಾನಿಯಾಗಲು ಮೋದಿ ಅವರೇ ಸೂಕ್ತ ಎಂದು ಖ್ಯಾತ ಸಾಹಿತಿ ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್.ಎಲ್ ಭೈರಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.
ಲೇಖಕ ಮಹಾಬಲ ಕೊಡ್ಲಿಕೆರೆ ಅವರು ಬರೆದಿರುವ 'ಮೋದಿ ಹಾದಿ' ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಭೈರಪ್ಪ, ರಾಹುಲ್ ಗಾಂಧಿ ಅವರು ಶ್ರೀಮಂತ ಕುಟುಂಬದಲ್ಲಿ ಜನಿಸಿದವರು ಅವರಿಗೆ ರಾಜಕೀಯವಾಗಿ, ಸಾಮಾಜಿಕ ಬದುಕಿನ ಬಗ್ಗೆ ಯಾಗಲಿ ಯಾವುದೇ ಅನುಭವವಿಲ್ಲ. ಅವರು ಪ್ರಧಾನಿಯಾಗಲು ಸಮರ್ಥ ಅಭ್ಯರ್ಥಿಯಾಗಲಾರರು ಎಂದಿದ್ದಾರೆ.
ಬೆಂಗಳೂರಿನ ನರಸಿಂಹರಾಜ ಕಾಲನಿಯ ಗೋಖಲೆ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಲೇಖಕ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ‘ಮೋದಿ ಹಾದಿ' ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ‘ಮತದಾನ' ಕಾದಂಬರಿಯ ಶಿವಪ್ಪನಿಗಾದ ಗತಿಯೇ ನಂದನ್ ನಿಲೇಕಣಿ ಅವರಿಗೂ ಆಗಲಿದೆ ಎಂದು ಭವಿಷ್ಯ ನುಡಿದರು.

ನಂದನ್ ನಿಲೇಕಣಿಗೆ ಭೈರಪ್ಪ ಸಲಹೆ
ನಂದನ್ ನಿಲೇಕಣಿ ಇನ್ಫೋಸಿಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರಲ್ಲಿ ಪ್ರಮುಖರು. 7,700 ಕೋಟಿ ರೂ. ಹೊಂದಿರುವ ಅವರಿಗೆ ಮತ್ತೊಂದು ಉದ್ಯಮ ಬೆಳೆಸುವ ಶಕ್ತಿ ಇದೆ ಎಂದ ಭೈರಪ್ಪ, ಇನ್ಫೋಸಿಸ್ ಬದಲಿಗೆ ಅವರು ಎಕ್ಸ್ ಪೋಸಿಸ್ ಕಟ್ಟಿ ಬಿಲ್ ಗೇಟ್ಸ್ ಮಟ್ಟಕ್ಕೆ ಬೆಳೆಯಬಹುದಿತ್ತು ಎಂದು ಸಲಹೆ ನೀಡಿದರು.

ನಂದನ್ ರಾಜಕೀಯ ಪ್ರವೇಶ ಬಗ್ಗೆ
ನಂದನ್ ನಿಲೇಕಣಿ ಅವರು ಯಶಸ್ವಿ ಉದ್ಯಮಿಯಾಗಿದ್ದರು. ಅವರನ್ನು ಕಂಡರೆ ನನಗೆ ಅತೀವ ಪ್ರೀತಿ. ಆದರೆ, ಅವರು ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿರುವುದನ್ನು ಕಂಡರೆ ಅಯ್ಯೋ ಅನಿಸುತ್ತಿದೆ. ಕಾಂಗ್ರೆಸ್ ಪಕ್ಷ ಅವರ ಪ್ರತಿಭೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ನಾಡೋಜ ಎಸ್.ಎಲ್.ಭೈರಪ್ಪ ಮರುಕ ವ್ಯಕ್ತಪಡಿಸಿದ್ದಾರೆ.

ನಾನು ಬಿಜೆಪಿ ಪರ ಅಲ್ಲ : ಎಸ್ ಎಲ್ ಭೈರಪ್ಪ
ನಾನು ಬಿಜೆಪಿ ಪರ ಅಲ್ಲ: ನಾನು ಬಿಜೆಪಿ ಮನುಷ್ಯ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ, ನಾನು ಬಿಜೆಪಿ ಸರಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ನಾನು ಯಾವುದೇ ಪ್ರಯೋಜನ ಪಡೆದುಕೊಳ್ಳಲಿಲ್ಲ ಎಂದು ಸ್ಪಷ್ಟಣೆ ನೀಡಿದ ಅವರು, ಬಿಎಸ್ ಯಡಿಯೂರಪ್ಪ ಅವರು ನನ್ನನ್ನು ಮೇಲ್ಮನೆಗೆ ಸ್ಪರ್ಧಿಸಲು ಆಹ್ವಾನಿಸಿದ್ದರು. ಆದರೆ, ತಾನು ಅದನ್ನು ನಿರಾಕರಿಸಿದ್ದೆ ಎಂದರು.

ಮೋದಿ ಬಂಡವಾಳಶಾಹಿಗಳ ಪರ ಅಲ್ಲ
ನರೇಂದ್ರ ಮೋದಿ ಅವರನ್ನು ಬಂಡವಾಳಶಾಹಿಗಳ ಪರ ಎಂದು ಬಹುತೇಕರು ಆರೋಪಿಸುತ್ತಾರೆ. ಈ ಮಾತನ್ನು ನಾನು ಒಪ್ಪುವುದಿಲ್ಲ ಎಂದ ಭೈರಪ್ಪ, ಟಾಟಾ ನ್ಯಾನೊ ಘಟಕಕ್ಕೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿ ಉದ್ಯೋಗ ಸೃಷ್ಟಿಗೆ ಕಾರಣರಾದರು ಎಂದು ಹೊಗಳಿದರು.

ಮೋದಿ ಬಂಡವಾಳಶಾಹಿಗಳ ಪರ ಅಲ್ಲ
ನರೇಂದ್ರ ಮೋದಿ ಅವರನ್ನು ಬಂಡವಾಳಶಾಹಿಗಳ ಪರ ಎಂದು ಬಹುತೇಕರು ಆರೋಪಿಸುತ್ತಾರೆ. ಈ ಮಾತನ್ನು ನಾನು ಒಪ್ಪುವುದಿಲ್ಲ ಎಂದ ಭೈರಪ್ಪ, ಟಾಟಾ ನ್ಯಾನೊ ಘಟಕಕ್ಕೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿ ಉದ್ಯೋಗ ಸೃಷ್ಟಿಗೆ ಕಾರಣರಾದರು ಎಂದು ಹೊಗಳಿದರು.

ನರೇಂದ್ರ ಮೋದಿ ಅವರನ್ನು ಚಾಯಿ ವಾಲಾ
ನರೇಂದ್ರ ಮೋದಿ ಅವರನ್ನು ಚಾಯಿ ವಾಲಾ ಎಂದು ಮೂದಲಿಸುತ್ತಾರೆ. ಅವರು ಚಾಯಿ ವಾಲಾ ಆಗಿಯೇ ಜೀವನದಲ್ಲಿ ಅಪಾರ ಅನುಭವ ಪಡೆದುಕೊಂಡಿದ್ದಾರೆ ಎಂದ ಅವರು, ನಾನು ಕೂಡ ರಾಣಿಬೆನ್ನೂರು, ರಾಮಚಂದ್ರಪುರ ಜಾತ್ರೆಯಲ್ಲಿ ಸಪ್ಲೈಯರ್ ಆಗಿದ್ದೆ. ಅದೇ ಅನುಭವಗಳೇ ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿವೆ ಎಂದು ಸ್ಮರಿಸಿಕೊಂಡರು.












Click it and Unblock the Notifications