ಮೋದಿ ಸುಳ್ಳಿನ ಕಂತೆಯನ್ನು ಬಿಚ್ಚಿಟ್ಟು ಹೋಗಿದ್ದಾರೆ: ಕುಮಾರಸ್ವಾಮಿ
ಬೆಂಗಳೂರು, ಏಪ್ರಿಲ್ 09: ನರೇಂದ್ರ ಮೋದಿ ಅವರು ಇಂದಿನ ತಮ್ಮ ಭಾಷಣದಲ್ಲಿ ಸುಳ್ಳಿನ ಕಂತೆಯನ್ನು ಬಿಚ್ಚಿಟ್ಟಿಹೋಗಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಗೋವಿಂದರಾಜನಗರದಲ್ಲಿ ಜಂಟಿ ಪ್ರಚಾರ ಸಭೆಯ ಬಳಿಕ ಮಾತನಾಡಿದ ಕುಮಾರಸ್ವಾಮಿ, ಮೋದಿ ಅವರು ರಾಜ್ಯಕ್ಕೆ ಕೊಟ್ಟ ಅಭಿವೃದ್ಧಿಗೆ ಮತ ಕೇಳಿಲ್ಲ. ಬದಲಿಗೆ ಯೋಧರ, ರೈತರ ಹೆಸರು ಹೇಳಿ ಮತ ಕೊಡಿ ಅಂತ ಹೇಳಿದ್ದಾರೆ ಎಂದರು.
ನಾವು ರೈತರ ಸಾಲಮನ್ನಾ ಮಾಡಿದ್ದೇವೆ, ಸಿದ್ದರಾಮಯ್ಯ ಅವಧಿಯಲ್ಲೂ ಸಹ ರೈತರ ಸಾಲಮನ್ನಾ ಮಾಡಲಾಗಿದೆ, ಆದರೆ ಮೋದಿ ಅವರು ಸಾಲಮನ್ನಾ ಆಗಿಲ್ಲ ಎನ್ನುತ್ತಿದ್ದಾರೆ, ಮೋದಿ ಅವರಿಗೆ ಮಾಹಿತಿ ಕೊರತೆ ಇದ್ದಹಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಇದೇ ವೇಳೆ, ಪ್ರಧಾನಿ ಒಬ್ಬ ಮಹಾನ್ ಸುಳ್ಳುಗಾರ. ಅನ್ನಭಾಗ್ಯ ಯೋಜನೆಗೆ ಕೇಂದ್ರ ಹಣ ನೀಡ್ತಿಲ್ಲ. ಆದ್ರೆ ಆ ಯೋಜನೆಗೆ ನಾವು ಅನ್ನಭಾಗ್ಯ ಯೋಜನೆಗೆ ₹3500 ಕೋಟಿ ಹಾಗೂ ಹಾಲಿಗೆ ₹2500 ಕೋಟಿ ಪ್ರೋತ್ಸಾಹ ಧನ ನೀಡ್ತಿದ್ದೇವೆ. ಅಲ್ಲದೇ, ರೈತರ ಪಂಪ್ ಸೆಟ್ಗೆ ಉಚಿತ ವಿದ್ಯುತ್ ನೀಡ್ತಿದ್ದೇವೆ. ಇದಕ್ಕೆಲ್ಲಾ ಕೇಂದ್ರ ಸರ್ಕಾರ ಸಹಾಯ ಮಾಡುತ್ತಿಲ್ಲ ಎಂದು ಹೇಳಿದರು.
ನರೇಂದ್ರ ಮೋದಿ ಅವರು ಇಂದು ಚಿತ್ರದುರ್ಗ ಮತ್ತು ಮೈಸೂರುಗಳಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಈ ಸಮಯ ಮೈತ್ರಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.












Click it and Unblock the Notifications