ರಾಜೀವ್ ಗಾಂಧಿ ಆರೋಗ್ಯ ವಿವಿ ಬೆಳ್ಳಿ ಮಹೋತ್ಸವಕ್ಕೆ ಪ್ರಧಾನಿ ಉದ್ಘಾಟನೆ
ಬೆಂಗಳೂರು, ಜೂನ್ 1: ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟನೆ ಮಾಡಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Recommended Video
ಭಾರತದಲ್ಲಿಯೇ ಅತ್ಯಂತ ದೊಡ್ಡ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಎಂದು ಹೆಸರು ಪಡೆದಿರುವ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಲ್ಲಿ ಬೆಳ್ಳಿ ಹಬ್ಬದ ಜೊತೆಗೆ ಕೊರೊನಾ ಆವಿಷ್ಕಾರ ಕಾರ್ಯಕ್ರಮ ಸಹ ನಡೆಯುತ್ತಿದ್ದು, ಅದು ಪ್ರಧಾನಿಯಿಂದ ಶುಭಾರಂಭವಾಗಿದೆ.
ದೆಹಲಿಯಲ್ಲಿರುವ ಪ್ರಧಾನಿ ಮೋದಿ ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಪಾಲ ವಜುಭಾಯ್ ವಾಲಾ, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸೇರಿದಂತೆ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಸಂಸದ ತೇಜಸ್ವಿ ಸೂರ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಲ್ಲಿ 6 ಬೇರೆ ಬೇರೆ ವಿಭಾಗಗಳಲ್ಲಿ ಆವಿಷ್ಕಾರ ನಡೆಸಲಾಗುತ್ತದೆ. ಕ್ವಾರಂಟೈನ್, ಪರೀಕ್ಷೆ, ಪ್ರಯೋಗಾಲಯ, ಸಾರ್ವಜನಿಕ ಆರೋಗ್ಯ, ಚಿಕಿತ್ಸಾ ಪದ್ಧತಿ ವಿಭಾಗಗಳಲ್ಲಿ ಆವಿಷ್ಕಾರ ನಡೆಯಲಿದೆ. 100 ಯೋಜನೆಗಳನ್ನು ಆಯ್ಕೆ ಮಾಡಿ, ಒಳ್ಳೆಯ ಯೋಜನೆ ಎನಿಸುವ 15-20 ಆವಿಷ್ಕಾರಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.

1996 ಜೂನ್ 1 ರಂದು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಆರಂಭವಾಗಿದ್ದು, ಇಂದಿಗೆ 25 ವರ್ಷ ತುಂಬಿದ ಸಂಭ್ರಮದಲ್ಲಿದೆ.












Click it and Unblock the Notifications