• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾರಾಯಣ ಹೆಲ್ತ್- ಮಜೂಂದರ್ ಶಾ ಪ್ರತಿಷ್ಠಾನದಿಂದ ಸ್ಟಾರ್ಟ್‍ಅಪ್‍ಗಳಿಗೆ ನೆರವು

|

ಬೆಂಗಳೂರು, ಜೂನ್ 12: ನಾರಾಯಣ ಹೆಲ್ತ್, ಮಜೂಂದರ್ ಶಾ ವೈದ್ಯಕೀಯ ಪ್ರತಿಷ್ಠಾನದೊಂದಿಗೆ ಜತೆ ಸೇರಿ ಜಾಗತಿಕ ವೇಗವರ್ಧಕ ಸಂಸ್ಥೆಯಾದ ದ ಗೈನ್ ಮತ್ತು ದಕ್ಷಿಣ ಕೊರಿಯಾದ ಸ್ಟಾರ್ಟ್ ಅಪ್ ಪಿಕ್ಸೆಲ್ ಡಿಸ್‍ಪ್ಲೇ ಜತೆಗೆ ಒಡಂಬಡಿಕೆಗೆ ಸಹಿ ಮಾಡಿವೆ.

ಈ ಪಾಲುದಾರಿಕೆಯಿಂದಾಗಿ ನಾರಾಯಣ ಹೆಲ್ತ್ ಮತ್ತು ಮಜೂಂದರ್ ಶಾ ವೈದ್ಯಕೀಯ ಪ್ರತಿಷ್ಠಾನ ಮಾರ್ಗಸೂಚಿಯನ್ನು ಒದಗಿಸಲಿದ್ದು, ಜತೆಗೆ ಆರೋಗ್ಯಸೇವಾ ತಂತ್ರಜ್ಞಾನ ಕ್ಷೇತ್ರದ ಸ್ಟಾರ್ಟ್‍ಅಪ್ ಕಂಪನಿಗಳು ತಮ್ಮ ಅನುಶೋಧನೆಯನ್ನು ದೃಢೀಕರಿಸಲು ಅನುಕೂಲಕರವಾದ ವಾತಾವರಣವನ್ನು ಕಲ್ಪಿಸಿಕೊಡಲಿವೆ.

ನಾರಾಯಣ ಆಸ್ಪತ್ರೆ ಉಳಿಸಿದ ಬೇಬಿ ಪ್ಯಾಪಿಲಾನ್ ವಿಶ್ವದ ಪವಾಡ ಶಿಶು

ಈ ಪಾಲುದಾರಿಕೆಯ ಅಂಗವಾಗಿ, ಪಿಕ್ಸೆಲ್ ಡಿಸ್‍ಪ್ಲೇ ಉತ್ಪನ್ನಗಳು ನಾರಾಯಣ ಹೆಲ್ತ್ ಸಿಟಿಯಲ್ಲಿ ಮಾರುಕಟ್ಟೆ ದೃಢೀಕರಣಗೊಳ್ಳುವ ಕಠಿಣ ಪ್ರಕ್ರಿಯೆಗೆ ಒಳಗೊಳ್ಳಲಿವೆ. ಪಿಕ್ಸೆಲ್ ಡಿಸ್‍ಪ್ಲೇ ದಕ್ಷಿಣ ಕೊರಿಯಾದ ಒಂದು ವಿನೂತನ ಕಂಪನಿಯಾಗಿದ್ದು, ಕೃತಕ ಬುದ್ಧಿಮತ್ತೆ ಆಧರಿತ ಮೊಬೈಲ್ ಮಕ್ಕಳ ದೃಷ್ಟಿಶಾಸ್ತ್ರ ಪರೀಕ್ಷಾ ಪರಿಹಾರವನ್ನು ಒದಗಿಸುತ್ತದೆ. ಇದು ಕಿಝೋಪ್ಟರ್ ಎನ್ನುವ ವಿನೂತನ ತಂತ್ರಜ್ಞಾನವನ್ನು ಕಂಡುಹಿಡಿದಿದೆ. ಈ ತಂತ್ರಜ್ಞಾನವು ಮಕ್ಕಳ ನಿಖರ ಹಾಗೂ ಕ್ಷಿಪ್ರ ನೇತ್ರ ಪರೀಕ್ಷೆಗೆ ಅನುವು ಮಾಡಿಕೊಡುತ್ತದೆ ಹಾಗೂ ಇದಕ್ಕೆ ಮೊಬೈಲ್ ಹೊರತುಪಡಿಸಿ ಯಾವುದೇ ಹೆಚ್ಚುವರಿ ಹಾರ್ಡ್‍ವೇರ್ ಗಳು ಬೇಕಿಲ್ಲ.

ಮಜೂಂದರ್ ಶಾ ವೈದ್ಯಕೀಯ ಕೇಂದ್ರವು ನಾರಾಯಣ ಹೆಲ್ತ್ ನ ಒಂದು ಘಟಕವಾಗಿದ್ದು, ಮಜೂಂದರ್ ಶಾ ಸೆಂಟರ್ ಫಾರ್ ಟ್ರಾನ್ಸಿಷನಲ್ ರೀಸರ್ಚ್ (ಎಂಎಸ್‍ಸಿಟಿಆರ್), ಮಜೂಂದರ್ ಶಾ ಕ್ಯಾನ್ಸರ್ ಔಟ್‍ರೀಚ್ ಪ್ರೋಗ್ರಾಂ (ಎಂಎಸ್‍ಸಿಓಪಿ) ಮತ್ತು ಅಂತರರಾಷ್ಟ್ರೀಯ ತಂತ್ರಜ್ಞಾನ ವರ್ಗಾವಣೆ ಉದ್ಯಮಶೀಲತೆ ಮತ್ತು ಅನುಶೋಧನಾ ಸಂಸ್ಥೆ,, ತಂತ್ರಜ್ಞಾನ ವ್ಯವಹಾರ ಪಾಲನಾ ಕೇಂದ್ರ (ಟಿಬಿಐ ಘಟಕ)ಗಳು ಪ್ರಸ್ತುತ ಮಜೂಂದರ್ ಶಾ ವೈದ್ಯಕೀಯ ಪ್ರತಿಷ್ಠಾನ ಪರಿಸರದ ನಾಲ್ಕು ಪ್ರಮುಖ ಆಧಾರಸ್ತಂಭಗಳಾಗಿವೆ.

ನಾರಾಯಣ ಹೆಲ್ತ್ ಸಿಟಿ ಟ್ರೆಡ್ ಮಿಲ್ ಮೇಲೆ ಮಾಜಿ ಕ್ರಿಕೆಟರ್ ವಾಕಿಂಗ್

ದ ಗೈನ್ ಎನ್ನುವುದು ಜಾಗತಿಕ ವೇಗರ್ವಧಕ ಸಂಸ್ಥೆಯಾಗಿದ್ದು, ತಂತ್ರಜ್ಞಾನ ಸ್ಟಾರ್ಟ್‍ಅಪ್‍ಗಳ ಆರಂಭಿಕ ಹಂತದಲ್ಲಿ ಹೂಡಿಕೆ ಮಾಡುತ್ತದೆ. ಈ ಮೂಲಕ ಅವುಗಳು ಜಾಗತಿಕ ಮಾರುಕಟ್ಟೆಗೆ ತೆರೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ದ ಗೈನ್ ಇದೀಗ ಆಕ್ಸೆಸ್ ಟೂ ಇಂಡಿಯಾ (ಎ21) ಯೋಜನೆಯನ್ನು ಜಾರಿಗೊಳಿಸಿದ್ದು, ಇದು ಜಾಗತಿಕ ಸ್ಟಾರ್ಟ್‍ಅಪ್‍ಗಳು ಭಾರತೀಯ ಮಾರುಕಟ್ಟೆಗೆ ಸ್ಟಾರ್ಟ್‍ಅಪ್‍ಗಳು ತೆರೆದುಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತದೆ. ಇದಕ್ಕೆ ಅನುಕೂಲಕರವಾಗುವಂತೆ ಪ್ರಬಲವಾದ ಮಾರ್ಗದರ್ಶಕರು, ಕಾರ್ಪೊರೇಟ್ ಸಂಸ್ಥೆಗಳು, ಹೂಡಿಕೆದಾರರು ಮತ್ತು ಪಾಲುದಾರರ ಜಾಲವನ್ನು ರೂಪಿಸಲು ನೆರವು ನೀಡುತ್ತದೆ.

English summary
Narayana Health along with Mazumdar Shaw Medical Foundation today signed a memorandum of understanding (MoU) with THE GAIN, a Global accelerator and Pixel Display, a startup company based out of South Korea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X