Bengaluru Metro: ಪ್ರಯಾಣಿಕರಿಗೆ ಡಬಲ್ ಧಮಾಕಾ: ಹಳದಿ ಮಾರ್ಗಕ್ಕೆ 13ನೇ ರೈಲು ಸೇರ್ಪಡೆ, ಸಮಯ ಬದಲಾವಣೆ

ಬೆಂಗಳೂರು: ಬೆಂಗಳೂರು ಪ್ರಯಾಣಿಕರಿಗೆ ಡಬಲ್‌ ಗುಡ್‌ನ್ಯೂಸ್ ಸಿಕ್ಕಿದೆ. ಒಂದೆಡೆ ಪಿಂಕ್ ಲೈನ್ ಲೋಕಾರ್ಪಣೆ ಆದ ಬೆನ್ನಲ್ಲೆ ಇನ್ನೊಂದೆಡೆ ಹಳದಿ ಮಾರ್ಗದ ಪ್ರಯಾಣಿಕರಿಗೂ ಮತ್ತಷ್ಟು ನಿರಾಳತೆ ಲಭಿಸಿದೆ. ಇದೇ ಸೋಮವಾರದಿಂದ ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದ ಪ್ರಯಾಣಿಕರಿಗಾಗಿ ಮತ್ತೊಂದು ಹೊಸ ರೈಲು ಸೇರ್ಪಡೆಯಾಗಲಿದ್ದು, ನಿಲ್ದಾಣದಲ್ಲಿ ಕಾಯುವಿಕೆ ಸಮಯ ಕಡಿಮೆ ಆಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ( BMRLC) ತಿಳಿಸಿದೆ.

ನವೆಂಬರ್ 16 ರಿಂದ ಹಳದಿ ಮಾರ್ಗದಲ್ಲಿರುವ 12 ರೈಲುಗಳಿಗೆ ಇನ್ನೊಂದು 13ನೇ ರೈಲು ಸೇರ್ಪಡೆ ಆಗಲಿದೆ. ಪ್ರಯಾಣಿಕರ ಸೇವೆಗೆ ಹೆಚ್ಚುವರಿ ರೈಲು ಸೇವೆ ಸಿಗಲಿದೆ. ಇದರೊಂದಿಗೆ ಹಳದಿ ಮಾರ್ಗದಲ್ಲಿ ಪ್ರತಿದಿನ ಒಟ್ಟು 13 ರೈಲುಗಳು ಸಂಚಾರದಿಂದ ರೈಲುಗಳ ಸಂಚಾರದ ಆವರ್ತನ ಸಮಯ ಕಡಿಮೆ ಆಗಲಿದೆ. ನಿಲ್ದಾಣಗಳಲ್ಲಿ ಪ್ರಯಾಣಿಕರ ಕಾಯುವ ಸಮಯ ಕಡಿಮೆ ಮಾಡಲಾಗುತ್ತದೆ. ಬೆಳಗ್ಗೆ ಮತ್ತು ಸಂಜೆ ಹಾಗೂ ಭಾನುವಾರ ರೈಲುಗಳ ಸಂಚಾರ ಸಮಯದ ವೇಳಾಪಟ್ಟಿಯನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.

Namma Metro Yellow Line

ಪರಿಷ್ಕೃತ ರೈಲು ಸಂಚಾರದ ಆವರ್ತನ

ಸುಮಾರು 19. 15 ಕಿಲೋ ಮೀಟರ್ ಉದ್ದದ ಹಳದಿ ಮಾರ್ಗದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ ಮತ್ತು ಸಂಜೆ ಪೀಕ್ ಹವರ್‍‌ನಲ್ಲಿ ಸದ್ಯ ಇರುವ 6 ನಿಮಿಷಗಳ ಅಂತರದ ಬದಲಾಗಿ ಪ್ರತಿ 5.5 ನಿಮಿಷಗಳಿಗೊಮ್ಮೆ ಮೆಟ್ರೋ ರೈಲುಗಳು ಸಂಚರಿಸಲಿವೆ. ಇನ್ನೂ ಸಂಚಾರ ದಟ್ಟಣೆ ಕಡಿಮೆ ಇರುವ ಅವಧಿಯಲ್ಲಿ ಪ್ರತಿ 10 ನಿಮಿಷಗಳಿಗೊಮ್ಮೆ ರೈಲುಗಳು ಒಡಾಡಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Pink Line ಮೆಟ್ರೋಗೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್: 33,000ಮಂದಿ ಸಂಚಾರ, ಜಯದೇವ ಇಂಟರ್‍‌ಚೇಂಜ್‌ನಲ್ಲೂ ದಾಖಲೆ
Pink Line ಮೆಟ್ರೋಗೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್: 33,000ಮಂದಿ ಸಂಚಾರ, ಜಯದೇವ ಇಂಟರ್‍‌ಚೇಂಜ್‌ನಲ್ಲೂ ದಾಖಲೆ

ಶನಿವಾರ ಮತ್ತು ಭಾನುವಾರ ಸಂಚಾರ ಸಮಯ

ಅದೇ ರೀತಿ ಶನಿವಾರ ಮತ್ತು ಭಾನುವಾರ ಸಂಚಾರದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ವಾರಂತ್ಯದ ದಿನಗಳಲ್ಲಿ ಎಂದಿನಂತೆ ದಿನವಿಡೀ ಪ್ರತಿ 10 ನಿಮಿಷಗಳಿಗೊಮ್ಮೆ ರೈಲುಗಳು ಸಂಚರಿಸಲಿವೆ.
ವಾರದ ಯಾವುದೇ ದಿನಗಳಲ್ಲಿ ಹಳದಿ ಮಾರ್ಗದ ಕೊನೆಯ ನಿಲ್ದಾಣಗಳಾದ ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಿಂದ ಹೊರಡುವ ಮೊದಲ ಮತ್ತು ಕೊನೆಯ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಪ್ರಯಾಣಿಕರು ಪರಿಷ್ಕೃತ ರೈಲು ಸಂಚಾರದ ಆವರ್ತನ ಸಮಯು ಗಮನದಲ್ಲಿಟ್ಟುಕೊಂಡು, ಸುಧಾರಿತ ಮೆಟ್ರೋ ಸೇವೆಗಳ ಸದುಪಯೋಗ ಪಡೆದುಕೊಳ್ಳುವಂತೆ ಬಿಎಂಆರ್‌ಸಿಎಲ್ ವಿನಂತಿಸಿಕೊಂಡಿದೆ.

3 ನಿಮಿಷಕ್ಕೊಂದು ರೈಲು ಸಂಚಾರ ಸಾಧ್ಯತೆ

ಹಳದಿ ಮಾರ್ಗದಲ್ಲಿ ಒಟ್ಟು 15 ರೈಲುಗಳನ್ನು ಓಡಿಸಲು ಪ್ಲ್ಯಾನ್ ಮಾಡಿಕೊಂಡಿರುವ ಅಧಿಕಾರಿಗಳು ಈಗಾಗಲೇ 14, 15ನೇ ಮೆಟ್ರೋಗಳನ್ನು ಸ್ವೀಕರಿಸಿದ್ದು, ಶಾಸನಬದ್ಧ ಪರೀಕ್ಷೆಗೆ ಒಳಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವುಗಳು ಸೇವೆಗೆ ಲಭ್ಯವಾಗಲಿವೆ. ಆಗ ರೈಲುಗಳ ಆವರ್ತನ ಸಮಯ ಗಣನೀಯವಾಗಿ ಇಳಿಕೆ ಆಗಲಿದ್ದು, ಪೀಕ್ ಹವರ್‌ನಲ್ಲಿ 3 ನಿಮಿಷಕ್ಕೊಂದು ರೈಲು ಸಂಚರಿಸುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+