Pink Line ಮೆಟ್ರೋಗೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್: 33,000ಮಂದಿ ಸಂಚಾರ, ಜಯದೇವ ಇಂಟರ್‍‌ಚೇಂಜ್‌ನಲ್ಲೂ ದಾಖಲೆ

ಬೆಂಗಳೂರು: ಪ್ರಯಾಣಿಕರ ಬಹುನಿರೀಕ್ಷೆ ನಮ್ಮ ಮೆಟ್ರೋ ಗುಲಾಬಿ ಮಾರ್ಗವು (Metro Pink Line) ಪ್ರಯಾಣಿಕರಿಗೆ ಮುಕ್ತಗೊಂಡಿದೆ. ಶನಿವಾರ (ನವೆಂಬರ್ 14) ಮೊದಲ ವಾಣಿಜ್ಯ ಸೇವೆ ಶುರುವಾಗಿದ್ದು, ಪ್ರಯಾಣಿಕರಿಂದ ವ್ಯಾಪಕ ಸ್ಪಂಧನೆ ವ್ಯಕ್ತವಾಗಿದೆ. ಒಂದೇ ದಿನ ಬರೋಬ್ಬರಿ 33,409 ಮಂದಿ ಸಂಚಾರ ಮಾಡಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕೃತ ಮಾಹಿತಿ ನೀಡಿದೆ.

ಪಿಂಕ್ ಲೈನ್ ಮೊದಲ ದಿನವೇ ಮಹತ್ವದ ದಾಖಲೆ ನಿರ್ಮಿಸಿದೆ ಎಂದಿರುವ ಬಿಎಂಆರ್‌ಸಿಎಲ್ ನಿಲ್ದಾಣವಾರು ಮತ್ತು ಪ್ರಮುಖ ಇಂಟರ್‍‌ ಚೇಂಜ್ ಜಯದೇವ ಮೆಟ್ರೋ ನಿಲ್ದಾಣದಲ್ಲಿ ಸಂಚರಿಸಿದ ಪ್ರಯಾಣಿಕರ ಮಾಹಿತಿ, ಅಂಕಿ ಸಂಖ್ಯೆ ನೀಡಿದೆ.

Namma Metro Pink Line

ಜಯದೇವ ಇಂಟರ್‌ಚೇಂಜ್ ನಲ್ಲಿ ಅತ್ಯಧಿಕ ಜನರ ಓಡಾಟ

ಜಯದೇವ ಆಸ್ಪತ್ರೆ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಅತೀ ಹೆಚ್ಚು ಪ್ರಯಾಣಿಕರು ರೈಲು ಬದಲಾಯಿಸಿದ್ದಾರೆ. ಈ ನಿಲ್ದಾಣವೊಂದರಲ್ಲೇ ಒಟ್ಟು 18,714 ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಹಳದಿ ಮಾರ್ಗದೊಂದಿಗೆ ಸಂಧಿಸುವ ಪಿಂಕ್ ಲೈನ್ ಪ್ಲಾಟ್‌ಫಾರ್ಮ್‌ಗಳಿಂದಲೇ ಬರೋಬ್ಬರಿ 6,703 ಮಂದಿ ಪ್ರಯಾಣ ಮಾಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Bengaluru Metro: ನೂತನ ಗುಲಾಬಿ ಮಾರ್ಗದಲ್ಲಿ ಬೆಳಗ್ಗೆ, ರಾತ್ರಿ ಮೆಟ್ರೋ ಸಂಚಾರ ಸಮಯ, ವೇಳಾಪಟ್ಟಿ ಬಿಡುಗಡೆ
Bengaluru Metro: ನೂತನ ಗುಲಾಬಿ ಮಾರ್ಗದಲ್ಲಿ ಬೆಳಗ್ಗೆ, ರಾತ್ರಿ ಮೆಟ್ರೋ ಸಂಚಾರ ಸಮಯ, ವೇಳಾಪಟ್ಟಿ ಬಿಡುಗಡೆ

ನಿಲ್ದಾಣವಾರು ಪ್ರಯಾಣಿಕರು ಓಡಾಡಿದ್ದೆಷ್ಟು?

ಇನ್ನೂ ಕಳೆದ ನಾಲ್ಕು ಶನಿವಾರಗಳ ಸರಾಸರಿಗೆ (5,969) ಹೋಲಿಸಿದರೆ ಪಿಂಕ್ ಲೈನ್ ತೆರೆದ ಮೊದಲ ದಿನವೇ ಜಯದೇವ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಸುಮಾರು 3 ಪಟ್ಟು ಏರಿಕೆ ಆಗಿದೆ. ಇನ್ನೂ ಹೊಸ ಪಿಂಕ್ ಲೈನ್‌ನ ಅರು ನಿಲ್ದಾಣಗಳ ಪೈಕಿ ಟರ್ಮಿನಲ್ ನಿಲ್ದಾಣ ಕಾಳೇನ ಅಗ್ರಹಾರ 4,944 ಮಂದಿ, ಹುಳಿಮಾವು ನಿಲ್ದಾಣದಲ್ಲಿ 3,028 ಪ್ರಯಾಣಿಕರು ಸಂಚಾರ ಮಾಡಿದ್ದಾರೆ.

ಸುದ್ದಗುಂಟೆ ಪಾಳ್ಯ (ಎಸ್.ಜಿ. ಪಾಳ್ಯ) ನಿಲ್ದಾಣದಿಂದ 2,767 ಪ್ರಯಾಣಿಕರು, ಬಿಳೇಕಹಳ್ಳಿ (ಐಐಎಂಬಿ) ನಿಲ್ದಾಣ 2,316 ಮತ್ತು ಎನ್.ಎಸ್. ಪಾಳ್ಯ-ಜೆ.ಪಿ. ನಗರ 4ನೇ ಹಂತದ ನಿಲ್ದಾಣದಿಂದ 1,640 ಮಂದಿ ಮೊದಲ ದಿನ ಪಿಂಕ್ ಮೆಟ್ರೋ ಏರಿದ್ದಾರೆ. ಈ ಮೂಲಕ ಗುಲಾಬಿ ಮೆಟ್ರೋ ಮಾರ್ಗದ ಅಗತ್ಯತೆ ಎಷ್ಟಿದೆ ಎಂದು ತೋರಿಸಿಕೊಟ್ಟಿದ್ದಾರೆ.

ಹೊಸ ಮಾರ್ಗ ತೆರೆದ ಬಳಿಕ ನಿತ್ಯವು ಬನ್ನೇರುಘಟ್ಟ ರಸ್ತೆಯ ಸಂಚಾರದಲ್ಲಿ ಟ್ರಾಫಿಕ್ ಎದುರಿಸಿ ಹೈರಾಣಾಗಿದ್ದವರು ನಿಟ್ಟುಸಿರು ಬಿಡುವಂತಾಗಿದೆ. ಸಾರ್ವಜನಿಕ ಸಾರಿಗೆ ಬಳಸುವವರಿಗೆ ಪಿಂಕ್ ಲೈನ್ ದೊಡ್ಡ ನಿರಾಳತೆ ಒದಗಿಸಿದೆ. ಮೊದಲ ದಿನ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

5 ರೈಲುಗಳ ಸಂಚಾರ

ಈ ಪಿಂಕ್ ಲೈನ್ ಮಾರ್ಗದಲ್ಲಿ ಒಟ್ಟು ಆರು ಮೆಟ್ರೋ ರೈಲುಗಳಿದ್ದು, ಒಂದನ್ನು ತುರ್ತು ಸೇವೆಗಾಗಿ ಇಟ್ಟುಕೊಂಡಿದ್ದು, ಉಳಿದ ಐದು ರೈಲುಗಳ ನಿತ್ಯ 6 ನಿಲ್ದಾಣಗಳ ನಡುವೆ ಬೆಳಗ್ಗೆಯಿಂದಲೇ ಸೇವೆ ನೀಡುತ್ತಿವೆ.

ಬೆಂಗಳೂರು ಟ್ರಾಫಿಕ್ 50% ಇಳಿಕೆಗೆ ಮಾಸ್ಟರ್ ಪ್ಲ್ಯಾನ್: ಮೆಟ್ರೋ ಜಾಲ 500 ಕಿಮೀ ವಿಸ್ತರಣೆ: ಡಿಕೆಶಿ ಅಪ್ಡೇಟ್
ಬೆಂಗಳೂರು ಟ್ರಾಫಿಕ್ 50% ಇಳಿಕೆಗೆ ಮಾಸ್ಟರ್ ಪ್ಲ್ಯಾನ್: ಮೆಟ್ರೋ ಜಾಲ 500 ಕಿಮೀ ವಿಸ್ತರಣೆ: ಡಿಕೆಶಿ ಅಪ್ಡೇಟ್

ಮೆಟ್ರೋ ಫೀಡರ್ ಬಸ್

ಈ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗಲೆಂದು, ಕೊನೆ ಮೈಲಿ ಸಂಪರ್ಕಕ್ಕಾಗಿ ಐದು ಮಾರ್ಗಗಳಲ್ಲಿ ಮೆಟ್ರೋ ಫೀಡರ್ ಬಸ್ ಬಿಡಲಾಗಿದೆ. 7ಮೀಟರ್ ಉದ್ದದ ಕಾಂಪ್ಯಾಕ್ಟ್ ವಿಶೇಷ ಬಸ್ ಇವಾಗಿದ್ದು, ಮೆಟ್ರೋ ಹಾಗೂ ಸಾರ್ವಜನಿಕರ ನಡುವೆ ಉತ್ತಮ ಸಂಪರ್ಕ ಕೊಂಡಿಯಾಗಿ ಸೇವೆ ನೀಡಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+