ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 7 ಸ್ಕೈವಾಕ್ ನಿರ್ಮಿಸಲಿದೆ ನಮ್ಮ ಮೆಟ್ರೋ: ಎಲ್ಲೆಲ್ಲಿ?

|
Google Oneindia Kannada News

ಬೆಂಗಳೂರು, ಜನವರಿ 12: ನಮ್ಮ ಮೆಟ್ರೋ ನಗರದಲ್ಲಿ 7 ಸ್ಕೈವಾಕ್‌ಗಳನ್ನು ನಿರ್ಮಾಣ ಮಾಡಲಿದೆ.

ನಮ್ಮ ಮೆಟ್ರೋದಲ್ಲಿ ಓಡಾಡಿ ಅಕ್ಕ ಪಕ್ಕದಲ್ಲಿರುವ ಬಸ್​ ಸ್ಟ್ಯಾಂಡ್, ರೈಲ್ವೇ ಸ್ಟೇಷನ್ ಗೆ ಹೋಗೋಕೆ ಇನ್ಮುಂದೆ ಕಷ್ಟು ಪಡುವ ಅಗತ್ಯವಿಲ್ಲ. ಪ್ರಯಾಣಿಕರ ಅನುಕೂಲಕ್ಕೆ ನಮ್ಮ ಮೆಟ್ರೋ ಈಗ ಹೊಸದೊಂದು ದಾರಿ ಕಂಡುಕೊಂಡಿದೆ..

ಯಾಕಂದ್ರೆ ಪ್ರಯಾಣಿಕರ ಅನುಕೂಲಕ್ಕಂತಲೇ ನಮ್ಮ ಮೆಟ್ರೋ ಈಗ ಸ್ಕೈ ವಾಕ್ ನಿರ್ಮಾಣ ಮಾಡಲು ಮುಂದಾಗಿದೆ.

ನೇರವಾಗಿ ಮೆಟ್ರೋ ಇಳಿದು ಬಸ್ ನಿಲ್ದಾಣ ಹಾಗೂ ರೈಲ್ವೇ ಸ್ಟೇಷನ್ ಗೆ ಹೋಗಬಹುದು. ಅಥವಾ ಬಸ್ ಇಳಿದು ನೇರವಾಗಿ ಮೆಟ್ರೋ ಪ್ಲಾಟ್ ಫಾರ್ಮ್ ಗೆ ಬಂದು ಬಿಡಬಹುದು.

ನಮ್ಮ ಮೆಟ್ರೋ ಈಗ ಕೈಗೆತ್ತಿಕೊಂಡೊರುವ ಈ ಯೋಜನೆ ಬೆಂಗಳೂರು ಜನರ ಓಡಾಟ ಸುಗಮವಾಗಲಿದೆ.

ಪ್ರಯಾಣಿಕರಿಗೆ ಈ ಸ್ಕೈ ವಾಕ್ ಇನ್ನೇನು ಕೆಲವೇ ತಿಂಗಳಿನಲ್ಲಿ ಓಡಾಟಕ್ಕೆ ಸಿಗಲಿದೆ. ಇದರ ಜೊತೆಗೆ ನಗರದ 17 ಮೆಟ್ರೋ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು, ಇದನ್ನು ತಡೆಗಟ್ಟಲು ಸರ್ವೀಸ್ ರಸ್ತೆಯನ್ನೂ ನಿರ್ಮಿಸುವ ಯೋಜನೆ ನಮ್ಮ ಮೆಟ್ರೋಗಿದೆ.

ಮೊದಲು ಸ್ಕೈವಾಕ್ ನಿರ್ಮಾಣವೆಲ್ಲಿ?

ಮೊದಲು ಸ್ಕೈವಾಕ್ ನಿರ್ಮಾಣವೆಲ್ಲಿ?

ಈ ಯೋಜನೆಯ ಚೊಚ್ಚಲ ಹೆಜ್ಜೆ ಎಂಬಂತೆ ನಗರದ ಯಶವಂತಪುರ ಮೆಟ್ರೋ ನಿಲ್ದಾಣದಿಂದ ನೇರವಾಗಿ ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸ್ಕೈ ವಾಕ್ ನಿರ್ಮಾಣ ಮೊದಲಾಗಲಿದೆ. ಈಗಾಗಲೇ ಇದರ ರೂಪುರೇಷಗಳು ಸಿದ್ಧಗೊಂಡಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಅಂತ ನಮ್ಮ ಮೆಟ್ರೋ ಸಾರ್ವಜನಿಕ ಸಂಪರ್ಕಧಿಕಾರಿ ಯಶವಂತ ಚೌಹಾಣ್ ತಿಳಿಸಿದ್ದಾರೆ.

ರೈಲ್ವೆ ನಿಲ್ದಾಣಕ್ಕೆ ನೇರ ಸಂಪರ್ಕ

ರೈಲ್ವೆ ನಿಲ್ದಾಣಕ್ಕೆ ನೇರ ಸಂಪರ್ಕ

ಯಶವಂತಪುರದಲ್ಲಿ ನಿರ್ಮಾಣ ಆಗ್ತಿರೋ ಈ ಸ್ಕೈವಾಕ್ ನೇರವಾಗಿ ರೈಲ್ವೇ ನಿಲ್ದಾಣದಲ್ಲಿನ ಸ್ಕೈವಾಕ್ ಗೆ ಸಂಪರ್ಕ ಕಲ್ಪಿಸಿಕೊಡಲಿದೆ. ಜೊತೆಗೆ ಆರನೇ ಪ್ಲಾಟ್ ಫಾರ್ಮ್ ಗೆ ನೇರವಾಗಿ ಒಂದು ಇಳಿಮುಖ ಮೆಟ್ಟಿಲು ಹಾಗೂ ಯಶವಂತಪುರ ಮಾರ್ಕೆಟ್ ಕಡೆಗಿರುವ ರೈಲ್ವೇ ನಿಲ್ದಾಣದ ಮುಖ್ಯ ದ್ವಾರಕ್ಕೂ ಮೆಟ್ರೋ ನಿಲ್ದಾಣದಿಂದ ನೇರವಾಗಿ ಈ ಮೇಲ್ಸೇತುವೆ ಸಂಪರ್ಕ ಮಾಡಲಿದೆ. ಇದೇ ಮಾದರಿಯಲ್ಲಿ ಉಳಿದ ಆರು ಸ್ಕೈ ವಾಕ್ ಗಳು ಮೆಟ್ರೋ ನಿಲ್ದಾಣದ ಆಸುಪಾಸಿನಲ್ಲಿರುವ ಬಸ್, ರೈಲ್ವೇ ನಿಲ್ದಾಣ ಅಥವಾ ಇತರೆ ನಿಲ್ದಾಣಗಳಿಗೆ ಸಂಪರ್ಕ ಏರ್ಪಡಿಸಲಿದೆ.

ಮೊದಲ ಹಂತದಲ್ಲಿ ಮೂರು ಕಡೆ ಸ್ಕೈವಾಕ್ ನಿರ್ಮಾಣ

ಮೊದಲ ಹಂತದಲ್ಲಿ ಮೂರು ಕಡೆ ಸ್ಕೈವಾಕ್ ನಿರ್ಮಾಣ

ಮೊದಲ ಹಂತದ ಮೂರು ಕಡೆ ಹಾಗೂ ಎರಡನೇ ಹಂತದ ನಾಲ್ಕು ಕಡೆ ನಮ್ಮ ಮೆಟ್ರೋ ಸ್ಕೈ ವಾಕ್ ಗಳನ್ನು ನಿರ್ಮಿಸಲಿದೆ. ಮೊದಲ ಹಂತದ ಯಶವಂತಪುರ, ನಾಗಸಂದ್ರ ಹಾಗೂ ದಾಸರಹಳ್ಳಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಹಾಗೂ ಎರಡನೇ ಹಂತದ ಮೈಲಸಂದ್ರ, ಜ್ಞಾನಭಾರತಿ, ಬಿಐಇಸಿನ ಚಿಕ್ಕಬಿದಿರಕಲ್ಲು ಸೇರಿದಂತೆ ನಾಲ್ಕು ಕಡೆಯಲ್ಲಿ ಈ ಸ್ಕೈ ವಾಕ್ ನಿರ್ಮಾಣ ಆಗಲಿದೆ.ಇದಕ್ಕಾಗಿ ನಮ್ಮ ಮೆಟ್ರೋ ಬಿಎಂಆರ್ ಸಿಎಲ್ ಈಗಾಗಲೇ 12.50 ಕೋಟಿ ರೂಪಾಯಿಯ ಟೆಂಡರ್ ಗೆ ಆಹ್ವಾನ ನೀಡಿದೆ.

ಪ್ರಯಾಣಿಕರಿಗೆ ಬಹಳ ಅನುಕೂಲ

ಪ್ರಯಾಣಿಕರಿಗೆ ಬಹಳ ಅನುಕೂಲ

ಉಕ್ಕಿನಿಂದ ನಿರ್ಮಾಣ ಆಗಲಿರುವ ಈ ಸ್ಕೈ ವಾಕ್ ಪ್ರಯಾಣಿಕರಿಗೆ ಬಹಳ ಅನುಕೂಲಕ ಆಗಲಿದೆ. ವೃದ್ಧರು, ಮಕ್ಕಳು ಹಾಗೂ ಭಾರವಾದ ಲಗೇಜ್ ಗಳನ್ನು ಹೊತ್ತು ತರುವ ಪ್ರಯಾಣಿಕರಿಗೆ ಈ ಸ್ಕೈ ವಾಕ್ ಸುಗಮ ಓಡಾಟಕ್ಕೆ ಅನುಕೂಲವಾಗಲಿದೆ.

English summary
Namma Metro, BMRCL Will built 7 sfkywalks in Bengaluru soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X