ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳಾ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೋ

|
Google Oneindia Kannada News

ಬೆಂಗಳೂರು, ಡಿಸೆಂಬರ್ 04 : ಬಿಎಂಆರ್‌ಸಿಎಲ್ ಮಹಿಳಾ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸುವವರು ಪೆಪ್ಪರ್ ಸ್ಪ್ರೇ ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ.

ಸ್ವಯಂ ರಕ್ಷಣೆಗಾಗಿ ಮಹಿಳೆಯರು ಪೆಪ್ಪರ್ ಸ್ಪ್ರೇ ಉಪಯೋಗ ಮಾಡುತ್ತಿದ್ದಾರೆ. ಆದರೆ, ನಮ್ಮ ಮೆಟ್ರೋ ರೈಲಿನಲ್ಲಿ ಸಂಚಾರ ನಡೆಸುವಾಗ ಪೆಪ್ಪರ್ ಸ್ಪ್ರೇ ತೆಗೆದುಕೊಂಡು ಹೋಗಲು ಇದುವರೆಗೂ ಅವಕಾಶ ಇರಲಿಲ್ಲ.

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ಮಾಡುವಾಗ ಮಹಿಳೆಯರ ಬ್ಯಾಗ್‌ನಲ್ಲಿದ್ದ ಪೆಪ್ಪರ್ ಸ್ಪ್ರೇಗಳನ್ನ ವಶಕ್ಕೆ ಪಡೆದುಕೊಂಡ ಘಟನೆಗಳು ನಡೆದಿದ್ದವು. ಪೆಪ್ಪರ್ ಸ್ಪ್ರೇ ತೆಗೆದುಕೊಂಡು ಹೋಗಲು ಅವಕಾಶ ನೀಡಬೇಕು ಎಂಬ ಚರ್ಚೆಯೂ ನಡೆದಿತ್ತು.

Namma Metro Will Allow Women To Carry Pepper Spray

ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ ನಡೆದ ಬಳಿಕ ಮಹಿಳಾ ಸುರಕ್ಷತೆ ಬಗ್ಗೆ ದೇಶಾದ್ಯಂತ ಚರ್ಚೆ ಆರಂಭವಾಗಿದೆ. ಈಗ ಬಿಎಂಆರ್‌ಸಿಎಲ್ ಪೆಪ್ಪರ್ ಸ್ಪ್ರೇ ತೆಗೆದುಕೊಂಡು ಹೋಗಲು ಒಪ್ಪಿಗೆ ನೀಡಿದೆ.

ಪೆಪ್ಪರ್ ಸ್ಪ್ರೇ ಮಹಿಳೆಯರ ಬ್ಯಾಗ್‌ನಲ್ಲಿ ಇದ್ದರೆ ಅವರನ್ನು ಪ್ರಯಾಣಿಸಲು ಬಿಡಬೇಕು ಎಂದು ಮೆಟ್ರೋ ನಿಲ್ದಾಣದಲ್ಲಿನ ಭದ್ರತಾ ಸಿಬ್ಬಂದಿಗೆ ಬಿಎಂಆರ್‌ಸಿಎಲ್ ಸೂಚನೆ ನೀಡಿದೆ. ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಬೋಗಿಯೂ ಇದೆ.

ಪೆಪ್ಪರ್ ಸ್ಪ್ರೇ ತೆಗೆದುಕೊಂಡು ಹೋಗಲು ಅನುಮತಿ ನೀಡದಿರುವುದು ಬಿಎಂಆರ್‌ಸಿಎಲ್ ತೀರ್ಮಾನವೇ?, ಭದ್ರತಾ ಸಿಬ್ಬಂದಿಯ ತೀರ್ಮಾನವೇ? ಎಂದು ಹಲವು ಪ್ರಯಾಣಿಕರು ಟ್ವೀಟರ್ ಮೂಲಕ ಪ್ರಶ್ನೆ ಮಾಡಿದ್ದರು. ಈ ಬಗ್ಗೆ ಚರ್ಚೆಗಳು ಆರಂಭವಾಗಿತ್ತು.

English summary
Bangalore Metro Rail Corporation Ltd. (BMRCL) decided to allow women to carry pepper spray. Namma Metro station security staff not allowed to carry pepper spray several women questioned this decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X