Namma Metro: ಚಲ್ಲಘಟ್ಟ-ವೈಟ್‌ಫಿಲ್ಡ್ ಮಾರ್ಗ ಅ.6ಕ್ಕೆ ಉದ್ಘಾಟನೆ ಸಾಧ್ಯತೆ
ಬೆಂಗಳೂರು, ಅಕ್ಟೋಬರ್ 02: ಐಟಿ ಕಾರಿಡಾರ್ ತೆರಳುವ ಉದ್ಯೋಗಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇಂಟರ್‌ನ್ಯಾಷನಲ್ ಟೆಕ್ ಪಾರ್ಕ್ ಬೆಂಗಳೂರು (ಐಟಿಪಿಬಿ) ಮತ್ತು ಕಾಡುಗೋಡಿಯಂತಹ ಪ್ರದೇಶಗಳಿಗೆ ಪ್ರಯಾಣಿಸುವ ಟೆಕ್ಕಿಗಳ ಬಹುನಿರೀಕ್ಷಿತ ವೈಟ್‌ಫೀಲ್ಡ್-ಚಲ್ಲಘಟ್ಟ ಮೆಟ್ರೋ ಕಾರಿಡಾರ್ (Namma Metro Purple Line) ಸಂಚಾರ ಮುಕ್ತಕ್ಕೆ ದಿನಗಣನೆ ಆರಂಬವಾಗಿದೆ.
ನಮ್ಮ ಮೆಟ್ರೋದ ನೇರಳೆ ಮಾರ್ಗದ ಪೂರ್ಣ ಸಂಚಾರ ಅಂದರೆ ಚಲ್ಲಘಟ್ಟದಿಂದ ಆಡುಗೋಡಿ (ವೈಟ್‌ಫಿಲ್ಡ್) ವರೆಗೆ ಮೆಟ್ರೋ ಸಂಚಾರ ಇದೇ ಅಕ್ಟೋಬರ್ 6 ರಂದು ಪ್ರಾರಂಭವಾಗುವ ಸಾಧ್ಯತೆ ಇದೆ.

ಕಾರಿಡಾರ್ಗೆ ಸಂಪರ್ಕ ತಪ್ಪಿಹೋಗಿದ್ದ ಬೈಯಪ್ಪನಹಳ್ಳಿ-ಕೆಆರ್ ಪುರ 2.2 ಕಿಮೀ ಮತ್ತು ಕೆಂಗೇರಿ - ಚಲ್ಲಘಟ್ಟ 2.1 ಕಿಮೀ ವಿಸ್ತರಿಸಿದ ಮಾರ್ಗ ಅಕ್ಟೋಬರ್ 6 ರಂದು ಉದ್ಘಾಟನೆಗೊಳ್ಳುವ ಸಾಧ್ಯತೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮೂಲಗಳು ತಿಳಿಸಿವೆ ಎಂದು 'ಮನಿಕಂಟ್ರೋಲ್' ವರದಿ ಮಾಡಿದೆ.
CMRS ಅನುಮೋದನೆ ನೀಡಿದೆ
ಕಳೆದ ಸೆಪ್ಟೆಂಬರ್ 25 ರಂದು ಮೆಟ್ರೋ ರೈಲು ಸುರಕ್ಷತೆಗಾಗಿ ಕಮಿಷನರ್ (CMRS) ಬೈಯಪ್ಪನಹಳ್ಳಿ-ಕೆಆರ್ ಪುರಂ ಮಾರ್ಗ ಪರಿಶೀಲಿಸಿ ಅನುಮೋದನೆ ನೀಡಿದ್ದಾರೆ. ಅಕ್ಟೋಬರ್ 3 ರಂದು ಕೆಂಗೇರಿ-ಚಲ್ಲಘಟ್ಟಕ್ಕೆ CMRS ಅನುಮೋದನೆಯನ್ನು ನಾವು ನಿರೀಕ್ಷೆ ಇದೆ. ಇದರ ನಂತರ, ನಾವು ಉದ್ಘಾಟನಾ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಸದ್ಯಕ್ಕೆ ದಿನಾಂಕ ನಿಗದಿ ಆಗಿಲ್ಲ ಎಂದಿದ್ದಾರೆ.
ಒಂದು ವೇಳೆ ಅ.6ರಂದು ಉದ್ಘಾಟನೆಗೊಂಡರೆ ಬೆಂಗಳೂರು ಮೆಟ್ರೋದ ನೇರಳೆ ಮಾರ್ಗ ಪೂರ್ಣವಾಗಿ 42.85 ಕಿಮೀ ಸಂಚಾರ ಆರಂಭವಾಗಲಿದೆ. ಪಶ್ಚಿಮ ಬೆಂಗಳೂರಿನ ಚಲ್ಲಘಟ್ಟವನ್ನು ಪೂರ್ವ ಬೆಂಗಳೂರಿನ ವೈಟ್‌ಫೀಲ್ಡ್ (ಕಾಡುಗೋಡಿ) ಗೆ ಸಂಪರ್ಕ ಕಲ್ಪಿಸುತ್ತದೆ. ಇಡೀ ಬೆಂಗಳೂರು ಮೆಟ್ರೋ ನೆಟ್‌ವರ್ಕ್ 72.85 ಕಿಮೀ ವ್ಯಾಪ್ತಿಯನ್ನು ಹೊಂದಿದ್ದು, ದೆಹಲಿ ಮೆಟ್ರೋದ 350.2 ಕಿಮೀ ನಂತರ ಇದು ಭಾರತದ ಎರಡನೇ ಅತಿದೊಡ್ಡ ಮೆಟ್ರೋ ವ್ಯವಸ್ಥೆ ಬೆಂಗಳೂರಿನದ್ದಾಗಿದೆ.

ಎಷ್ಟು ನಿಮಿಷಗಳಿಗೆ ರೈಲು ಓಡಾಡಲಿವೆ
ಚಲ್ಲಘಟ್ಟ ಮತ್ತು ಬೆನ್ನಿಗಾನಹಳ್ಳಿ ನಿಲ್ದಾಣಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿದೆ. ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಿದ್ಧತೆ ನಡೆದಿದೆ. ಸಂಚಾರ ದಟ್ಟಣೆ (Tfraffic) ಸಮಯದಲ್ಲಿ, ಚಲ್ಲಗಟ್ಟ- ವೈಟ್‌ಫೀಲ್ಡ್ (ಕಾಡುಗೋಡಿ) ನಡುವೆ 10 ನಿಮಿಷಗಳಿಗೆ ಒಂದು ರೈಲು ಸಂಚರಿಸಲಿವೆ. ಅದೇ ರೀತಿ ಪಟ್ಟಂದೂರು ಅಗ್ರಹಾರ ಮತ್ತು ಮೈಸೂರು ರಸ್ತೆ ನಿಲ್ದಾಣಗಳ ರೈಲು ಓಡಾಟಗಳ ಮಧ್ಯೆ ಐದು ನಿಮಿಷಗಳ ಅಂತವಿರಲಿದೆ.
BMRCL ಹೇಳುವ ಪ್ರಕಾರ ಪಶ್ಚಿಮ ಬೆಂಗಳೂರಿನ ಚಲ್ಲಘಟ್ಟದಿಂದ ಪೂರ್ವ ಬೆಂಗಳೂರಿನ ವೈಟ್‌ಫೀಲ್ಡ್‌ಗೆ ಪ್ರಯಾಣಿಸಲು ಮೆಟ್ರೋ ರೈಲು ಸುಮಾರು ಒಂದೂ ಕಾಲು ಗಂಟೆ (76 ನಿಮಿಷ) ತೆಗೆದುಕೊಳ್ಳಲಿದೆ. ನೇರಳೆ ಮಾರ್ಗದ ಒಂದು ತುದಿಯಿಂದ ಮತ್ತೊಂದು ತುದಿಗೆ 60ರೂಪಾಯಿ ಟಿಕೆಟ್ ಚಾರ್ಜ್ ಇರಲಿದೆ.
ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ
ಇದೇ ವರ್ಷದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೋದಿ ಅವರು 13.7 ಕಿಮೀ ದೂರದ ವೈಟ್‌ಫೀಲ್ಡ್-ಕೆಆರ್ ಪುರ ಮೆಟ್ರೋ ವಿಭಾಗ ಉದ್ಘಾಟಿಸಿದ್ದರು. ಸದ್ಯ ನಿತ್ಯ ಈ ಮಾರ್ಗದಲ್ಲಿ ಸುಮಾರು 35,000 ಪ್ರಯಾಣಿಕರು ಓಡಾಡುತ್ತಿದ್ದಾರೆ. ಕೆಆರ್ ಪುರ ಮತ್ತು ಬೈಯಪ್ಪನಹಳ್ಳಿ ನಡುವಿನ ಸಂಪರ್ಕ ಜೋಡಣೆ ಆಗಿಲ್ಲದ್ದರಿಂದ ಪ್ರಯಾಣಿಕರು ಮೆಟ್ರೋ ಫಿಡರ್ ಬಸ್ ಸೇವೆ ಅವಲಂಬಿಸಿದ್ದಾರೆ.
ಮುಂದಿನ ಕೆಲವೇ ದಿನಗಳಲ್ಲಿ ಚಲ್ಲಘಟ್ಟದಿಂದ ಕಾಡುಗೋಡಿವರೆಗೆ ಫಿಡರ್ ಬಸ್ ಇಲ್ಲದೇ ಪ್ರಯಾಣ ಮಾಡಲಿದ್ದಾರೆ. ಈ ಕಾರಣದಿಂದ ಈ ಭಾಗದಲ್ಲಿ ಮೆಟ್ರೋ ಪ್ರಯಾಣಿಕರು ಇನ್ನಷ್ಟು ಏರಿಕೆ ಆಗಲಿದೆ.












Click it and Unblock the Notifications