Get Updates
Get notified of breaking news, exclusive insights, and must-see stories!

Namma Metro: ಆಗ ಅನ್ನದಾತ, ಈಗ ಕಾರ್ಮಿಕನಿಗೆ ಅವಮಾನಿಸಿದ ಮೆಟ್ರೋ ಸಿಬ್ಬಂದಿ, ವಿಡಿಯೋ ವೈರಲ್‌-ಮುಂದಾಗಿದ್ದೇನು?

ಬೆಂಗಳೂರು, ಏಪ್ರಿಲ್‌, 09: ಬೆಂಗಳೂರಿನ ನಮ್ಮ ಮೆಟ್ರೋ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇದೆ. ಈ ಹಿಂದೆ ಮೆಟ್ರೋ ಸಿಬ್ಬಂದಿ ರೈತನಿಗೆ ಬಟ್ಟೆ ಸರಿಯಿಲ್ಲ ಎಂದು ತಡೆದು ಅವಮಾನಿಸಿದ್ದರು. ಇದೀಗ ಅಂತಹದ್ದೇ ಒಂದು ಘಟನೆ ನಡೆದಿದ್ದು, ಇದಕ್ಕೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಬಟ್ಟೆ ಸರಿಯಿಲ್ಲ, ಶರ್ಟ್‌ ಗುಂಡಿಯನ್ನು ಹಾಕಿಕೊಂಡು ನೀಟಾಗಿ ಬಾ ಎಂದು ಕಾರ್ಮಿಕನೋರ್ವನನ್ನು ಹೊರಗಡೆ ನಿಲ್ಲಿಸಿ ಮೆಟ್ರೋ ಸಿಬ್ಬಂದಿ ಅವಮಾನಿಸಿದ ಘಟನೆ ಬೆಂಗಳೂರಿನ ದೊಡ್ಡ ಲಕ್ಕಸಂದ್ರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಸಾರ್ವಜನಿಕರು ಮೆಟ್ರೋ ಸಿಬ್ಬಂದಿಯ ಈ ವರ್ತನೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಕಾರ್ಮಿಕನನ್ನು ಅವಮಾನಿಸಿದ ಮೆಟ್ರೋ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆಯೂ ಒತ್ತಾಯಿಸಿದ್ದಾರೆ.

Namma Metro staff insulted to labour video viral
ಇತ್ತೀಚಿಗಷ್ಟೇ ರಾಜಾಜಿನಗರ ಮೆಟ್ರೋ

ಇತ್ತೀಚಿಗಷ್ಟೇ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಸಿಬ್ಬಂದಿ ಅನ್ನದಾತನಿಗೆ ಅವಮಾನ ಮಾಡಿದ್ದರು. ಬಟ್ಟೆ ಶುಚಿಯಿಂದ ಇಲ್ಲ ಎಂಬ ಕಾರಣಕ್ಕೇ ರೈತನನ್ನು ಮೆಟ್ರೋ ಒಳಗಡೆ ಬಿಡದೆ ಸಿಬ್ಬಂದಿ ಅವಮಾನಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು. ಈ ದೃಶ್ಯಗಳನ್ನು ವೀಕ್ಷಣೆ ಮಾಡಿದ್ದ ಸಾರ್ವಜನಿಕರು ಬಿಎಂಆರ್‌ಸಿಎಲ್‌ಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದರು. ಇದೀಗ ಕಾರ್ಮಿಕನಿಗೂ ಅವಮಾನ ಮಾಡಿದ್ದು, ಜನರು ಮೆಟ್ರೋ ಸಿಬ್ಬಂದಿ ಈ ನಡೆಗೆ ಕ್ಯಾಕರಿಸಿ ಉಗಿಯುತ್ತಿದ್ದಾರೆ.

ಸಾಮಾನ್ಯವಾಗಿ ಮೆಟ್ರೋದಲ್ಲಿ ಸಾರ್ವಜನಿಕರು, ಉದ್ಯೋಗಿಗಳು ಪ್ರಯಾಣ ಮಾಡುತ್ತಿರುತ್ತಾರೆ. ಇನ್ನು ಕಚೇರಿ, ಕಂಪನಿಗಳಲ್ಲಿ ಕೆಲಸ ಮುಗಿಸಿಕೊಂಡು ಅತೀ ಬೇಗ ಮನೆಗೆ ಹೋಗಬೇಕೆಂದು ಉದ್ಯೋಗಿಗಳು ಮೆಟ್ರೋವನ್ನು ಅವಲಂಬಿಸಿರುತ್ತಾರೆ. ಅದರಲ್ಲೂ ಕಾರ್ಖಾನೆಗಳಲ್ಲೂ ಕೆಲಸ ಮಾಡುವವರು ಕೂಡ ಇರುತ್ತಾರೆ. ಹಾಗಂತ ಅವರೇನೂ ಹಣ ಕೊಡದೇ ಮೆಟ್ರೋ ಹತ್ತುತ್ತಾರಾ?, ಮೆಟ್ರೋದಲ್ಲಿ ಬರೀ ನೀಟಾಗಿ ಬಟ್ಟೆ ಹಾಕಿಕೊಂಡವರೇ ಮಾತ್ರ ಪ್ರಯಾಣ ಮಾಡಬೇಕಾ? ಎನ್ನುವ ಪ್ರಶ್ನೆಗಳು ಎದ್ದಿವೆ.

ಸಾರ್ವಜನಿಕರಿಂದ ತೀವ್ರ ಆಕ್ರೋಶ: ರೈತ ಇಲ್ಲದಿದ್ದರೆ ಅನ್ನ ದೊರಕುವುದಿಲ್ಲ, ಕಾರ್ಮಿಕರು ಇಲ್ಲದೆ ವಾಹನಗಳ ಬಿಡಿಭಾಗಗಳು, ಅಷ್ಟೇ ಯಾಕೆ ಮೆಟ್ರೋ ಗಾಲಿ ಕೂಡ ತಯಾರಾಗುವುದಿಲ್ಲ. ಅಷ್ಟೇ ಅಲ್ಲದೆ ಬಿಸಿಲು ನೆರಳೆನ್ನದೇ ಮೆಟ್ರೋ ಕಾಮಗಾರಿಯನ್ನು ಮಾಡುವವರು ಕಾರ್ಮಿಕರೇ ಎನ್ನುವುದನ್ನು ಮೊದಲು ಬಿಎಂಆರ್‌ಸಿಎಲ್‌ ತಿಳಿದುಕೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+