Namma Metro: ಚುನಾವಣೆಯ ದಿನ ಮೇ 10ರಂದು ಮಧ್ಯರಾತ್ರಿವರೆಗೆ ಓಡಾಡಲಿವೆ ಮೆಟ್ರೋ ರೈಲುಗಳು
ಬೆಂಗಳೂರು, ಮೇ 08: ಕರ್ನಾಟಕ ರಾಜ್ಯ ಚುನಾವಣೆ ಪ್ರಯುಕ್ತ ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ನಮ್ಮ ಮೆಟ್ರೋ ರೈಲಿನ ಅವಧಿಯನ್ನು ವಿಸ್ತರಣೆ ಮಾಡಿದೆ ಸೋಮವಾರ ಪ್ರಕಟಣೆ ಹೊರಡಿಸಿದೆ. ಯಾವ ದಿನ, ಯಾವ ಮಾರ್ಗದ ರೈಲುಗಳು ಎಷ್ಟು ಸಮಯವರೆಗೆ ರೈಲು ಓಡುತ್ತವೆ ಎಂದು ಇಲ್ಲಿ ತಿಳಿಯಿರಿ.
ಕರ್ನಾಟಕ ರಾಜ್ಯ ಚುನಾವಣೆ 2023 ದಿನಾಂಕ ಮೇ 10 ರಂದು ಬುಧವಾರ ನಡೆಯಲಿದೆ. ಅಂದು ಮತದಾನದ ಸಲುವಾಗಿ ಹೆಚ್ಚು ಜನ ಓಡಾಡುವವರು ಇರುತ್ತಾರೆ. ಈ ಕಾರಣದಿಂದ ಬೆಂಗಳೂರು ಮೆಟ್ರೋ ರೈಲು ನಿಗಮವು ಅಂದು ಮಧ್ಯರಾತ್ರಿವರೆಗೆ ಮೆಟ್ರೋ ರೈಲು ಸೇವೆ ಸಿಗುವಂತೆ ಸಮಯವನ್ನು ವಿಸ್ತರಣೆ ಮಾಡಿದೆ.

ನಮ್ಮ ಮೆಟ್ರೋದ ಟರ್ಮಿನಲ್ ನಿಲ್ದಾಣಗಳಾದ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ರೇಷ್ಮೆ ಸಂಸ್ಥೇ, ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ಗಳಿಂದ ಕೊನೆಯ ರೈಲು ಓಡಾಡಲಿವೆ. ಈ ಮಾರ್ಗದ ರೈಲುಗಳು ಗುರುವಾರ ಮೇ 11 ರಂದು ಬೆಳಗ್ಗೆ 5 ಗಂಟೆಗೆ ಹೊರಡಲಿದೆ.
ಇನ್ನೂ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮಜೆಸ್ಟಿಕ್‌ನಿಂದ ಕೊನೆಯ ರೈಲಿನ ಸೇವೆಯು ಮೇ 11ರಂದು ಗುರುವಾರ ಬೆಳ್ಳಂಬೆಳಗ್ಗೆ 00.35 ಗಂಟೆಗೆ ಎಲ್ಲ ನಾಲ್ಕು ದಿಕ್ಕುಗಳ ಕಡೆಗೆ ಹೊರಡಲಿದೆ. ಅಂದರೆ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ, ಸಂಸ್ಥೆಯಿಂದ ಹೊರಡಲಿದೆ ಎಂದು ನಿಗಮ ತಿಳಿಸಿದೆ.

ಮೇ 10ರಂದು ಮತದಾನ ಮಾಡಲು ಹೊರಡುವವರು ಮತ್ತು ಮರಳಿ ಬೆಳಗ್ಗೆ ಬೆಂಳೂರಿಗೆ ವಾಪಸ್ ಆಗುವವರಿಗೆ ಅನುಕೂಲ ಆಗಲೆಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಪ್ರಕಟಣೆಯಲ್ಲ ತಿಳಿಸಿದೆ. ಪ್ರಯಾಣಿಕರು ಈ ಸೇವೆಯ ಸದುಪಯೋಗ ಮಾಡಿಕೊಳ್ಳುವಂತೆ ಕೋರಲಾಗಿದೆ.












Click it and Unblock the Notifications