Namma Metro disruption: ಮೆಟ್ರೋ ಸೇವೆಯಲ್ಲಿ ಇಂದು ಸಂಚಾರ ವ್ಯತ್ಯಯ: ಗಮನಿಸಿ
ಬೆಂಗಳೂರು, ಜೂನ್ 02: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಸಂಜೆಯಿಂದಲೇ ಜೋರು ಮಳೆ ಸುರಿಯುತ್ತಿದೆ. ಇದರಿಂದ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನಿರ್ವಹಿಸುವ ನಮ್ಮ ಮೆಟ್ರೋ ರೈಲಿನ ಸಂಚಾರಕ್ಕೆ ತೊಂದರೆ ಆಗಿದೆ. ವೈಟ್‌ಫಿಲ್ಡ್ ಮತ್ತು ಚಲಘಟ್ಟವರೆಗಿನ ಮೆಟ್ರೋ ಸಂಚಾರ ಅಸ್ತವೆಸ್ತಗೊಂಡಿದೆ.
ಹೌದು, ಚಲಘಟ್ಟ-ವೈಟ್‌ಫಿಲ್ಡ್ ವರೆಗೆ ಇರುವ ಮೆಟ್ರೋ ನೇರಳೆ ಮಾರ್ಗ ಮಧ್ಯೆ ಇಂದು ಭಾನುವಾರ ಸಂಜೆ ಬಂದ ಜೋರು ಗಾಳಿ ಸಹಿತ ಮಳೆಗೆ ಮರದ ಕೊಂಬೆಯೊಂದು ಹಳಿಗೆ ಅಡ್ಡಲಾಗಿ ಬಿದ್ದಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾನುವಾರ ಇಂದು ಸಂಜೆ 19.26 ಗಂಟೆಗೆ ಭಾರೀ ಮಳೆಯಿಂದಾಗಿ ಮರದ ಕೊಂಬೆಗಳು ಎಂಜಿ ರಸ್ತೆ ಮತ್ತು ಟ್ರಿನಿಟಿ ನಿಲ್ದಾಣಗಳ ನಡುವಿನ ವಯಡಕ್ಟ್ ಟ್ರ್ಯಾಕ್‌ನಲ್ಲಿ ಬಿದ್ದಿವೆ. ಈ ಕಾರಣದಿಂದ ಎಂಜಿ ರಸ್ತೆ ಮತ್ತು ಇಂದಿರಾನಗರ ನಡುವೆ ರೈಲು ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಆದಾಗ್ಯೂ ನೇರಳೆ ಮಾರ್ಗದ ಇಂದಿರಾನಗರ ಮತ್ತು ವೈಟ್‌ಫೀಲ್ಡ್ ಹಾಗೂ ಚಲ್ಲಘಟ್ಟ ಮತ್ತು ಎಂ ಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಶಾರ್ಟ್ ಲೂಪ್‌ಗಳು ಚಾಲನೆಯಲ್ಲಿವೆ. ಸದ್ಯ ಮಳೆಗಾಳಿಯಿಂದ ಉಂಟಾದ ಅನನುಕೂಲತೆಯನ್ನು ವಿಷಾದಿಸಲಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕಿದೆ ಎಂದು ನಮ್ಮ ಮೆಟ್ರೋದ ಸಹಾಯಕ ಸಾರ್ವಜನಿಕ ಸಂಪರ್ಕಾಧಿಕಾರಿಶ್ರೀವಾಸ್ ರಾಜಗೋಪಾಲನ್ ಮಾಹಿತಿ ನೀಡಿದ್ದಾರೆ.
Due to a tree branch falling on the metro tracks just after Trinity Station towards MG road . Trains are operating only between Indranagar to Whitefield and MG road to Challaghatta , from 7.26 PM . Efforts are on to clear the branch and resume normal operations FKI
— ನಮ್ಮ ಮೆಟ್ರೋ (@OfficialBMRCL) June 2, 2024
ಎಂಜಿ ರಸ್ತೆ-ಇಂದಿರಾ ನಗರದವರೆಗೆ ಸಂಚಾರ ಕಟ್
ಟ್ರಿನಿಟಿ ನಿಲ್ದಾಣದ ದಿಂದ ಎಂಜಿ ರಸ್ತೆಗೆ ಹೋಗುವ ಕಡೆಗೆ ಮೆಟ್ರೋ ಹಳಿಗಳ ಮೇಲೆ ಮರದ ಕೊಂಬೆ ಬಿದ್ದಿದೆ. ಹೀಗಾಗಿ ಇಂದಿರಾನಗರದಿಂದ ವೈಟ್‌ಫೀಲ್ಡ್ ವರೆಗೆ ಮತ್ತು ಎಂಜಿ ರಸ್ತೆಯಿಂದ ಚಲ್ಲಘಟ್ಟದ ನಡುವೆ ಮಾತ್ರ ರೈಲುಗಳು ರಾತ್ರಿ 7.26 ರಿಂದ ಕಾರ್ಯ ನಿರ್ವಹಿಸುತ್ತಿವೆ. ಈ ಮರೆದ ಕೊಂಬೆ ತೆರವಿನ ಬಳಿಕ ಎಂದಿನಂತೆ ಮೆಟ್ರೋ ಕಾರ್ಯಾಚರಣೆ ನಡೆಯುತ್ತದೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಭಾನುವಾರ ಸಂಜೆಯಿಂದ ಜೋರು ಮಳೆ ಸುರಿಯುತ್ತಿದೆ. ನಗರ ರಸ್ತೆಗಳು, ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿತ್ತು. ಮರದ ಕೊಂಬೆ ಬಿದ್ದು ಕೆಲವೆಡೆ ತೊಂದರೆ ಆಗಿದೆ. ಅದೇ ರೀತಿ ಮೊದಲ ಬಾರಿಗೆ ಮೆಟ್ರೋ ಹಳಿ ಮೇಲೆ ಮರದ ಕೊಂಬೆ ಬಿದ್ದು, ಮೆಟ್ರೋ ಸಂಚಾರಕ್ಕೆ ಅಡ್ಡಿಯಾಗಿದೆ.
ರಾತ್ರಿಯೆಲ್ಲ ಮೆಟ್ರೋ ಟ್ರ್ಯಾಕ್ ಮೇಲೆ ಅಡ್ಡಲಾಗಿ ಬಿದ್ದಿದ್ದ ಮರದ ಕೊಂಬೆ ತೆರವು ಮಾಡಿ, ಮೆಟ್ರೋ ರೈಲಿನ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಪ್ರಯಾಣಿಕರು ಎಂದಿನಂತೆ ಸಂಚರಿಸಬಹುದಾಗಿದೆ ಎಂದು BMRCL ಅಧಿಕಾರಿಗಳು ಸೋಮವಾರ ಬೆಳಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸೋಮವಾರದಿಂದ ವೈಟ್‌ಫಿಲ್ಡ್-ಚಲಘಟ್ಟವರೆಗೆ ಪೂರ್ಣ ನೇರಳೆ ಮಾರ್ಗದಲ್ಲಿ ರೈಲುಗಳು ಸಂಚರಿಸಲಿವೆ. ಗ್ರಿನ್ ಲೈನ್ ನಲ್ಲಿ ಯಾವುದೇ ತೊಂದರೆಗಳು ಆಗಿಲ್ಲ. ಇದೀಗ ಎರಡು ಮಾರ್ಗದಲ್ಲಿ ಸುಗಮ ಸಂಚಾರ ನಡೆಯುತ್ತಿದೆ.












Click it and Unblock the Notifications