ಬೆಂಗಳೂರಿನಲ್ಲಿ ಕಾರಿನ ಮೇಲೆ ಬಿದ್ದ ಮೆಟ್ರೋ ಕಬ್ಬಿಣದ ರಾಡ್: ವಾಹನಕ್ಕಷ್ಟೇ ಹಾನಿ, ತಪ್ಪಿದ ಮತ್ತೊಂದು ದುರಂತ- ವರದಿ, ವಿವರ
ಬೆಂಗಳೂರು ಮೆಟ್ರೊ ನಿಲ್ದಾಣವೊಂದರ ಬಳಿ ವ್ಯಕ್ತಿಯೊಬ್ಬರು ಪ್ರಯಾಣಿಸುತ್ತಿದ್ದ ವೇಳೆ ಕಾರಿನ ಮೇಲೆ ಲೋಹದ ರಾಡ್ ಬಿದ್ದಿದೆ. ಶುಕ್ರವಾರ ಬೆಳಗ್ಗೆ 10.50ರ ಸುಮಾರಿಗೆ ಈ ಘಟನೆ ನಡೆದಿದೆ. ಕಳೆದ ತಿಂಗಳಷ್ಟೇ ಮೆಟ್ರೋ ಪಿಲ್ಲರ್ ದುರಂತದಲ್ಲಿ ತಾಯಿ ಮತ್ತು ಮಗು ಅಸುನೀಗಿದ್ದರು.
ಬೆಂಗಳೂರು, ಫೆಬ್ರವರಿ 25: ಬೆಂಗಳೂರು ಮೆಟ್ರೊ ನಿಲ್ದಾಣವೊಂದರ ಬಳಿ ವ್ಯಕ್ತಿಯೊಬ್ಬರು ಪ್ರಯಾಣಿಸುತ್ತಿದ್ದ ವೇಳೆ ಕಾರಿನ ಮೇಲೆ ಲೋಹದ ರಾಡ್ ಬಿದ್ದಿದೆ. ಶುಕ್ರವಾರ ಬೆಳಗ್ಗೆ 10.50ರ ಸುಮಾರಿಗೆ ಈ ಘಟನೆ ನಡೆದಿದೆ. ಕಳೆದ ತಿಂಗಳಷ್ಟೇ ಮೆಟ್ರೋ ಪಿಲ್ಲರ್ ದುರಂತದಲ್ಲಿ ತಾಯಿ ಮತ್ತು ಮಗು ಅಸುನೀಗಿದ್ದರು. ಈ ಮತ್ತೊಂದು ಆವಾಂತರ ನಡೆದಿರುವ ಬಗ್ಗೆ ವರದಿಯಾಗಿದೆ.
ಈ ಘಟನೆಯು ಯಶವಂತಪುರದ ಬಳಿಯ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಬಳಿ ನಡೆದಿದೆ. ರಿತೇಶ್ ಶೆಟ್ಟಿ ಎಂಬುವವರು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾರೆ ಈ ಘಟನೆ ನಡೆದಿದೆ. ಶೆಟ್ಟಿ ಅವರ ಪ್ರಕಾರ, ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದ ಬಳಿ ಲೋಹದ ರಾಡ್ ಅವರ ಕಾರಿನ ಮೇಲೆ ಬಿದ್ದು ಅದರ ವಿಂಡ್‌ಶೀಲ್ಡ್‌ಗೆ ಹಾನಿಯಾಗಿದೆ.

'ನಾನು ಬಸವೇಶ್ವರನಗರದಲ್ಲಿರುವ ನನ್ನ ನಿವಾಸದಿಂದ ಪೀಣ್ಯದಲ್ಲಿರುವ ನನ್ನ ಕಚೇರಿಗೆ ಹೋಗುತ್ತಿದ್ದೆ. ನನ್ನ ಕಾರು ಮೆಟ್ರೋ ನಿಲ್ದಾಣವನ್ನು ದಾಟಿದಾಗ ರಾಡ್‌ಗಳು ಕೆಳಗೆ ಬಿದ್ದವು. ಒಂದು ವೇಳೆ ದ್ವಿಚಕ್ರ ವಾಹನದ ಮೇಲೆ ಬಿದ್ದಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹಿಸಿ? ಇದಕ್ಕೆಲ್ಲಾ ಯಾರು ಹೊಣೆಗಾರರಾಗುತ್ತಾರೆ? ಇದು ಪುನರಾವರ್ತನೆಯಾಗಬಾರದು' ಎಂದು ಶೆಟ್ಟಿ ಟಿವಿ9ಗೆ ತಿಳಿಸಿದ್ದಾರೆ.
ಶೆಟ್ಟಿ ಅವರು ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅವರು ತಮ್ಮ ಕಾರಿಗೆ ಆದ ಹಾನಿಯನ್ನು ಮರುಪಾವತಿಸುವಂತೆ ಕೇಳಿದ್ದಾರೆ.

ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಒ) ಯಶವಂತ್ ಚವ್ಹಾನ್ ಅಪಘಾತದ ಹೊಣೆಯನ್ನು ಹೊತ್ತುಕೊಂಡಿಲ್ಲ.
'ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಕಾಮಗಾರಿ ಅಥವಾ ದುರಸ್ತಿ ಕಾರ್ಯ ನಡೆಯುತ್ತಿಲ್ಲ. ಹೀಗಾಗಿ ಅಪಘಾತಕ್ಕೂ ನಮ್ಮ ಮೆಟ್ರೋಗೂ ಸಂಬಂಧವಿಲ್ಲ. ಪೊಲೀಸರು ತನಿಖೆ ನಡೆಸಲಿ' ಎಂದು ಚವ್ಹಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಜನವರಿ 10ರಂದು ಬೆಳಗ್ಗೆ 10.30ರ ಸುಮಾರಿಗೆ ಎಚ್‌ಬಿಆರ್ ಲೇಔಟ್ ಬಳಿಯ ಹೊರ ವರ್ತುಲ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು. ನಮ್ಮ ಮೆಟ್ರೊ (ಬೆಂಗಳೂರು ಮೆಟ್ರೊ) ಕಾಂಕ್ರೀಟ್ ಪಿಲ್ಲರ್ ಹಾಕಲು ಹಾಕಿದ್ದ ಸ್ಟೀಲ್ ರಾಡ್ ದ್ವಿಚಕ್ರ ವಾಹನದ ಮೇಲೆ ಬಿದ್ದಿತ್ತು. ಲೋಹಿತ್‌ಕುಮಾರ್ ಅವರ ಪತ್ನಿ ತೇಜಸ್ವಿನಿ ಮತ್ತು ಅವರ ಮಗು ಪ್ರಯಾಣಿಸುತ್ತಿದ್ದರು.
ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಮತ್ತು ಆಕೆಯ ಮಗ ವಿಹಾನ್ ಅವರನ್ನು ಅಕ್ಕಪಕ್ಕದಲ್ಲಿದ್ದವರು ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಮಹಿಳೆ ಮತ್ತು ಆಕೆಯ ಮಗ ಬದುಕಿ ಉಳಿಯಲಿಲ್ಲ. ಗಾಯಗೊಂಡಿದ್ದ ಪತಿ ಬದುಕಿ ಉಳಿದಿದ್ದಾರೆ.

ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ (ಎನ್‌ಸಿಸಿ) ಸೇರಿದಂತೆ ಒಂಬತ್ತು ಜನರನ್ನು ಹೆಸರಿಸಲಾಗಿದೆ. ಜನವರಿ 13 ರಂದು, ಕರ್ನಾಟಕ ಹೈಕೋರ್ಟ್ ಅಪಘಾತದ ಬಗ್ಗೆ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಂಡಿದೆ.
ಮೆಟ್ರೋ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ ಬಲವರ್ಧನೆಯ ಪಂಜರ ದ್ವಿಚಕ್ರ ವಾಹನದ ಮೇಲೆ ಬಿದ್ದಿತ್ತು. ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮಹಿಳೆ ಮತ್ತು ಮಗ ಸಾವನ್ನಪ್ಪಿದ್ದು, ಆಕೆಯ ಪತಿ ಮತ್ತು ಮಗಳು ಸಹ ಗಾಯಗೊಂಡಿದ್ದರು. ಅಪಘಾತದ ನಂತರ ಬೆಂಗಳೂರಿನ ಮೂವರು ಮೆಟ್ರೋ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧಿಕಾರಿಗಳು ಪಂಜರ ಬೀಳಲು ಕಾರಣವೇನು ಎಂಬುದರ ಕುರಿತು ಪುರಾವೆಗಳನ್ನು ದೃಢೀಕರಿಸಲು ನಿರ್ಮಾಣಕ್ಕೆ ಬಳಸಲಾದ ಕಚ್ಚಾ ವಸ್ತುಗಳನ್ನು ಸಮೀಕ್ಷೆ ಮತ್ತು ಪರಿಶೀಲಿಸಿದ್ದಾರೆ. ಲೋಹದ ಸರಳುಗಳಿಂದ ಮಾಡಿದ ಕಂಬ ಸುಮಾರು 40 ಅಡಿ ಎತ್ತರವಿತ್ತು.
ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮೃತ ಇಬ್ಬರಿಗೆ ತಲಾ ₹ 10 ಲಕ್ಷ ಆರ್ಥಿಕ ನೆರವು ಘೋಷಿಸಿದ್ದು, ಮುಖ್ಯಮಂತ್ರಿ ತಲಾ ₹ 10 ಲಕ್ಷ ಹೆಚ್ಚುವರಿಯಾಗಿ ಘೋಷಿಸಿದ್ದಾರೆ.












Click it and Unblock the Notifications