Namma Metro Pillar Collapse: ಪ್ರಕರಣಕ್ಕೆ ತಿರುವು, ₹10 ಕೋಟಿ ಪರಿಹಾರಕ್ಕೆ ಆಗ್ರಹ, HC ನೋಟಿಸ್ ಜಾರಿ
ಬೆಂಗಳೂರು, ಜುಲೈ 26: ಬೆಂಗಳೂರಿನಲ್ಲಿ ನಡೆದಿದ್ದ ನಮ್ಮ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣಕ್ಕೆ ಮತ್ತೊಂದು ಹಂತದ ತಿರುವು ಪಡೆದುಕೊಂಡಿದೆ. ಪಿಲ್ಲರ್ ಕುಸಿತದಲ್ಲಿ ಗೃಹಿಣಿ ಮತ್ತವರ ಮಗ ಮೃತಪಟ್ಟಿದ್ದರು. ಇದೀಗ ಮೃತಳ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದು, ಎಂಟು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಆಗಿದೆ.
ತಾಯಿ ಮಗನನ್ನು ಬಲಿ ಪಡೆದ ನಮ್ಮ ಮೆಟ್ರೋ ದುರಂತವು ಬೆಂಗಳೂರು ನಗರದಲ್ಲಿನ BMRCL ಕೈಗೊಂಡಿರುವ ಮೆಟ್ರೋ ಮಾರ್ಗ ನಿರ್ಮಾಣ ಕಾಮಗಾರಿಯು ಭೀತಿ ಸೃಷ್ಟಿಸಿತ್ತು. ಕಾಂಕ್ರೀಟ್ ಹಾಕಲು ಸಿದ್ಧವಾಗಿದ್ದ ಕಬ್ಬಿಣದ ಸರಳು ಉರುಳಿ ಬಿದ್ದು ಸಾಫ್ಟವೇರ್ ಉದ್ಯೋಗಿ ತೇಜಸ್ವಿನಿ ಮತ್ತುವರ ಎರಡೂವರೆ ವರ್ಷ ಮಗ ಮೃತಪಟ್ಟಿದ್ದರು.

ಮೃತ ತೇಜಸ್ವಿನಿ ಪತಿ ಲೋಹಿತ್ ಅವರು ಒಟ್ಟು 10 ಕೋಟಿ ರೂಪಾಯಿ ಪರಿಹಾರ ಕೇಳಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದಿಕ್ಷಿತ್ ಅವರಿದ್ದ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿತು. ಇದೆ ವೇಳೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹಾಗೂ ರಾಜ್ಯ ಸರ್ಕಾರ, ಗುತ್ತಿಗೆದಾರರ ಕಂಪನಿ ಸೇರಿದಂತೆ ಒಟ್ಟು 08 ಮಂದಿಯನ್ನು ಪ್ರತಿವಾದಿಯನ್ನಾಗಿ ಮಾಡಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
BMRCL ನೀಡಿದ್ದ 20 ಲಕ್ಷ ಪರಿಹಾರ ಸೂಕ್ತವಲ್ಲ
ಈ ಮೂಲಕ ತಾಯಿ-ಮಗನ ಬಲಿ ಪಡೆದಿದ್ದ ಬೆಂಗಳೂರು ನಮ್ಮ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಈ ಹಿಂದೆ ಅವಘಡ ಸಂಭವಿಸಿದ ಟಿಕ್ಕಿ ತೇಜಸ್ವಿನಿ ಮೃತಪಟ್ಟಾಗ ಅವರಿಗೆ BMRCL ಒಟ್ಟು 20 ಲಕ್ಷ ರೂಪಾಯಿಗಳನ್ನು ಘೋಷಣೆ ಮಾಡಿತ್ತು.

ಇಪ್ಪತ್ತು ಲಕ್ಷ ಪರಿಹಾರ ಹಣ ಸೂಕ್ತವಲ್ಲ ಎಂದಿರುವ ಮೃತರ ಪತಿ ಲೋಹಿತ್ ಅವರು 10 ಕೋಟಿ ರೂಪಾಯಿ ಪರಿಹಾರಕ್ಕೆ ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನಗರದ ನಾಗವಾರ ಬಳಿ ಮೆಟ್ರೋ ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಕಾಂಕ್ರೀಟು ಹಾಕಲು ಸಿದ್ಧಪಡಿಸಿ ನಿಲ್ಲಿಸಲಾಗಿದ್ದ ಕಬ್ಬಿಣ ಸರಳುಗಳ ಪಿಲ್ಲರ್ ಕುಸಿತು ಬಿದ್ದಿತ್ತು. ಈ ಪಿಲ್ಲರ್ ಕೆಳಗೆ ಬೈಕಿನಲ್ಲಿ ತೆರಳುತ್ತಿದ್ದ ಟೆಕ್ಕಿ ತೇಜಸ್ವಿನಿ ದಂಪತಿ ಮತ್ತು ಮಗು ಸಿಲುಕಿದ್ದವು, ಈ ವೇಳೆ ತಾಯಿ ಮಗ ಅಸುನೀಗಿದರು. ಪತಿ ಲೋಹಿತ್‌ಗೆ ಗಾಯಗಳಾಗಿದ್ದವು. ಅವರು ಗದಗ ಜಿಲ್ಲೆ ಮೂಲದವರು ಎನ್ನಲಾಗಿದ್ದು, ಬೆಂಗಳೂರಿನಲ್ಲಿ ದಂಪತಿ ಉದ್ಯೋಗ ಮಾಡಿಕೊಂಡಿದ್ದರು.
ಈ ಘಟನೆಯಿಂದ ಬಿಎಂಆರ್‌ಸಿಎಲ್ ನಮ್ಮ ಮೆಟ್ರೊ ಕಾಮಗಾರಿಯ ಗುಣಮಟ್ಟದ ಮೇಲೆ ಅನುಮಾನ ವ್ಯಕ್ತವಾಗಿದೆ. ದುರಂತದಲ್ಲಿ ಎರಡು ಅಮಾಯಕ ಜೀವಗಳ ಬಲಿಯಾಗಿದ್ದು, ಗುತ್ತಿಗೆದಾರರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.












Click it and Unblock the Notifications