ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Namma Metro:ರೈಲ್ವೆ ಹಳಿಗೆ ಅಡ್ಡಲಾಗಿ ವೆಬ್‌ ಗರ್ಡರ್ ನಿರ್ಮಿಸಿದ BMRCL, ಏನಿದು?

ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ಗೆ ಸಂಪರ್ಕ ಸಾಧಿಸುವ ಮೆಟ್ರೊ ರೈಲು ಮಾರ್ಗಕ್ಕೆ ಸೃಷ್ಟಿಯಾಗಿದ್ದ ರೈಲ್ವೆ ಹಳಿ ಗರ್ಡ್‌ರ್ ಸಮಸ್ಯೆ ಪರಿಹಾರವಾಗಿದೆ. ಉಂಟಾಗಿದ್ದ ಸಮಸ್ಯೆ ಏನು, ಪರಿಹಾರ ಯಾವುದು ತಿಳಿಯಿರಿ.

|
Google Oneindia Kannada News

ಬೆಂಗಳೂರು, ಫೆಬ್ರುವರಿ 03: ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ಗೆ ಸಂಪರ್ಕ ಸಾಧಿಸುವ ಮೆಟ್ರೊ ರೈಲು ಮಾರ್ಗಕ್ಕೆ ಸೃಷ್ಟಿಯಾಗಿದ್ದ ರೈಲ್ವೆ ಹಳಿ ಗರ್ಡ್‌ರ್ ಸಮಸ್ಯೆ ಪರಿಹಾರವಾಗಿದೆ. ಇತ್ತೀಚೆಗಷ್ಟೇ ಆರಂಭಿಸಲಾಗಿದ್ದ ವೆಬ್ ಗರ್ಡರ್ ಕಾಮಗಾರಿ ಪೂರ್ಣಗೊಳಿಸಿ ಅದನ್ನು ಶುಕ್ರವಾರ ತೆರೆಯಲಾಗಿದೆ.

ಬೆನ್ನಿಗಾನಹಳ್ಳಿ ಬಳಿ ಹಾದುಹೋಗಿರುವ ಸೇಲಂ ರೈಲ್ವೆ ಮಾರ್ಗ ಮೇಲ್ಭಾಗದಲ್ಲಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಒಟ್ಟು 65 ಮೀಟರ್ ಉದ್ದದ ವೆಬ್ ಗರ್ಡರ್ ನಿರ್ಮಿಸಿದೆ. ನಮ್ಮ ಮೆಟ್ರೊ ಮಾರ್ಗದಲ್ಲಿ ಅಳವಡಿಕೆ ಆದ ಅತಿ ಉದ್ದದ ವೆಬ್ ಗರ್ಡರ್ ಇದಾಗಿದೆ. ಸುರಕ್ಷತೆ ಸಂಬಂಧ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಿ ಈ ವೆಬ್ ಗರ್ಡರ್ ಸ್ಥಾಪಿಸಲಾಗಿದ್ದು, ಇದೀಗ ಅದನ್ನು ತೆರೆಯಲಾಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

Namma Metro: ಪಿಲ್ಲರ್ ಕುಸಿತದ ಬಳಿಕ ಕಾಮಗಾರಿ ಸ್ಥಗಿತ, BMRCL ಕೈಗೊಂಡ ಸುರಕ್ಷತಾ ವಿಧಾನ ಇದುNamma Metro: ಪಿಲ್ಲರ್ ಕುಸಿತದ ಬಳಿಕ ಕಾಮಗಾರಿ ಸ್ಥಗಿತ, BMRCL ಕೈಗೊಂಡ ಸುರಕ್ಷತಾ ವಿಧಾನ ಇದು

ನೈಋತ್ಯ ರೈಲ್ವೆ ವಿಭಾಗದ ಅನುಮತಿಸಿದ ಸಮಯದಲ್ಲಿ ಪೂರ್ಣಗೊಳಿಸಲಾಗಿದೆ. ರೈಲು ಸುಗಮ ಸಂಚಾರಕ್ಕಾಗಿ ವೆಬ್ ಗರ್ಡರ್‌ ಕೆಳಭಾಗದಲ್ಲಿ ಒಟ್ಟು 845 ಮೀಟರ್ ಅಂತರ ಇಡಲಾಗಿದೆ.

Namma Metro: Open web girder across Railway track near Benniganahalli launched by BMRCL

ವೆಬ್‌ ಗರ್ಡರ್ ಪೂರ್ತಿ ವಿವರ

ಸ್ಪ್ಯಾನ್ ಉದ್ದ 65 ಮೀಟರ್

ಓಪನ್ ವೆಬ್‌ ಗರ್ಡರ್ ಉದ್ದ 63.225 ಮೀಟರ್

ಓಪನ್ ವೆಬ್‌ ಗರ್ಡರ್ ಒಟ್ಟು ಅಗಲ 11.450 ಮೀಟರ್

ಓಪನ್ ವೆಬ್‌ ಗರ್ಡರ್ ಒಟ್ಟ ಎತ್ತರ 9.650ಮೀಟರ್

ಓಪನ್ ವೆಬ್‌ ಗರ್ಡರ್ ತೂಕ 550 ಮಿಲಿಯನ್ ಟನ್

ವೆಬ್‌ ಗರ್ಡರ್‌ಗೆ ಬಳಸಿದ ಬೇರಿಂಗ್ ಮಾದರಿ ಸ್ಪೀರಿಕಲ್ ಬೇರಿಂಗ್

Namma Metro: Open web girder across Railway track near Benniganahalli launched by BMRCL

ಬೆನ್ನಿಗಾನಹಳ್ಳಿ ಬಳಿ ನೀಲಿ (ವಿಮಾನ ನಿಲ್ದಾಣ ಮಾರ್ಗ), ನೇರಳೆ ಮಾರ್ಗಗಳೆರಡೂ ಹಾದು ಹೋಗಲು ಪಿಲ್ಲರ್‌ಗಳ ಮೇಲೆ ಕಬ್ಬಿಣದ ಗರ್ಡರ್ ಅಳವಡಿಕೆ ಅಗತ್ಯವಿತ್ತು. ಇದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್‌ ಲಿ.ಗೆ ಸವಾಲಿನ ಕೆಲಸವಾಗಿತ್ತು. ಇದೀಗ ಆ ಸಮಸ್ಯೆಗೆ ಪರಿಹಾರ ದೊರೆತಿದೆ. ಮೊದಲ ಹಂತದಲ್ಲಿ ಕೆ.ಆರ್.ಪುರದಿಂದ ವೈಟ್‌ಫೀಲ್ಡ್ ತನಕದ ಮಾರ್ಗ 2023ರ ಜೂನ್ ವೇಳೆಗೆ ಸಾರ್ವಜನಿಕ ಪ್ರಯಾಣಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.

English summary
Namma Metro: Open web girder across Railway track near Benniganahalli launched by Bengaluru Metro Rail Corporation Limited (BMRCL).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X