Namma metro: ಜುಲೈ ವೇಳಗೆ ಈ ಮಾರ್ಗದಲ್ಲಿ ಮೆಟ್ರೋ ಸೇವೆ, ಮಾರ್ಗ ಹಾಗೂ ವೆಚ್ಚದ ಮಾಹಿತಿ ತಿಳಿಯಿರಿ

ಬೆಂಗಳೂರು, ಜನವರಿ, 11: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಜನಸಂದಣಿ ಹೆಚ್ಚಾಗುತ್ತಲೇ ಇದೆ. ಅದೇ ರೀತಿ ಪ್ರಯಾಣಿಕರ ಬೇಡಿಕೆಯ ಮೇರೆಗೂ ಮೆಟ್ರೋ ವಿಸ್ತರಣೆಯಾಗುತ್ತಲೇ ಇದೆ. ಇನ್ನು ನಗರದ ನಾಗಸಂದ್ರದಿಂದ ಮಾದಾವರದವರೆಗೆ 3.3 ಕಿಲೋ ಮೀಟರ್‌ ಉದ್ದದ ಮೆಟ್ರೊದ ಹಸಿರು ಮಾರ್ಗದ ವಿಳಂಬವಾದ ಉತ್ತರ ವಿಸ್ತರಣೆ ಕಾಮಗಾರಿ ಯಾವಾಗ ಪೂರ್ಣಗೊಳ್ಳಲ್ಲಿದೆ ಹಾಗೂ ಸಾರ್ವಜನಿಕ ಸೇವೆಗೆ ಯಾವಾಗ ಮುಕ್ತವಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬೆಂಗಳೂರಿನ ಜೀವನಾಡಿ ಸಾರಿಗೆ ವಿಭಾಗಗಳಲ್ಲಿ ನಮ್ಮ ಮೆಟ್ರೋ ಒಂದಾಗಿದೆ. ಇನ್ನು ಈ ಮಾರ್ಗದಲ್ಲಿ ಯಾವಾಗ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ಬಹುತೇಕ ಪ್ರಯಾಣಿಕರು ಕಾತರದಿಂದ ಕಾಯುತ್ತಲೇ ಇದ್ದಾರೆ. ಹಾಗೂ ಬೇಡಿಕೆಗಳು ಕೂಡ ಕೇಳಿಬರುತ್ತಿವೆ. ಇದೀಗ ಸಿಹಿಸುದ್ದಿಯೊಂದು ಹೊರಬಿದ್ದಿದ್ದು, ಈ ಮಾರ್ಗದಲ್ಲಿ ಅತೀ ಶೀಘ್ರದಲ್ಲೇ ಅಂದರೆ ಜುಲೈ ವೇಳೆಗೆ ಮೆಟ್ರೋ ಸೇವೆ ಆರಂಭವಾಗುವ ಸಾಧ್ಯೆತೆಯಿದೆ ಎಂದು ತಿಳಿದುಬಂದಿದೆ.

Namma metro: Metro service start on this route during July, know details

298 ಕೋಟಿ ರೂಪಾಯಿ ವೆಚ್ಚದ ಮೆಟ್ರೋ ಮಾರ್ಗವು ನಾಗಸಂದ್ರದ ಆಚೆಗೆ 3 ಎತ್ತರದ ಮೆಟ್ರೋ ನಿಲ್ದಾಣಗಳನ್ನು ಹೊಂದಿದೆ. ಮಂಜುನಾಥ್ ನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ ಮಾರ್ಗಗಳಾಗಿವೆ. ಸಿಎಂ ಇತ್ತೀಚೆಗೆ ಮುಂದಿನ ಏಪ್ರಿಲ್‌ನೊಳಗೆ ಕೆಲಸ ಮುಗಿಸಬೇಕು ಎಂದು ಗಡುವು ನೀಡಿದ್ದರು. ಜೂನ್ 9, 2017ರಂದು ಕೆಲಸ ಪ್ರಾರಂಭವಾಗಿದ್ದು, ಆಗಸ್ಟ್ 2019ರ ವೇಳೆಗೆ ಕಾರ್ಯಾರಂಭ ಮಾಡಬೇಕಿತ್ತು. ಆದರೆ ಇಷ್ಟು ತಡವಾಗಿದ್ದು, ದಿಕ್ಕೆ ಕಾರಣ ಏನೆಂದು ಇಲ್ಲಿ ತಿಳಿಯಿರಿ.

ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು, ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಾಗಿದೆ. ಪ್ರಕ್ರಿಯೆಯಲ್ಲಿ ಪೂರ್ಣಗೊಳಿಸುವ ಕೆಲಸಗಳು ಮಾತ್ರ ಇವೆ. ಟ್ರ್ಯಾಕ್‌ ಹಾಕುವ ಕಾಮಗಾರಿ ಪೂರ್ಣಗೊಳ್ಳಲು ಎರಡೂವರೆ ತಿಂಗಳು ಬೇಕಾಗಲಿದ್ದು, ಈ ವರ್ಷ ಜುಲೈ ವೇಳೆಗೆ ಲೈನ್‌ ಸಂಪೂರ್ಣ ಕಾರ್ಯಾರಂಭ ಮಾಡಲಿದೆ. ರೈಲುಗಳ ಪ್ರಾಯೋಗಿಕ ಓಡಾಟ ಮತ್ತು ಮೆಟ್ರೋ ರೈಲು ಸುರಕ್ಷತೆಯ ಆಯುಕ್ತರಿಂದ ತಪಾಸಣೆ ಕೂಡ ನಡೆಯಲಿದೆ.

ಇದೀಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದ ಅಧಿಕಾರಿ, ಅಂಚೆಪಾಳ್ಯ ಗ್ರಾಮದ ನಿವಾಸಿಗಳು ಚಿಕ್ಕಬಿದಿರಕಲ್ಲು ಮತ್ತು ಮಾದಾವರ ನಡುವೆ ಮೆಟ್ರೊ ನಿಲ್ದಾಣಕ್ಕಾಗಿ ಒತ್ತಾಯ ಮಾಡುತ್ತಿದ್ದರು. ಗ್ರಾಮಸ್ಥರ ಪ್ರತಿಭಟನೆ ಮತ್ತು ಶೇಕಡಾ 80ರಷ್ಟು ಕಾಮಗಾರಿ ಪೂರ್ಣಗೊಂಡ ನಂತರ ಗುತ್ತಿಗೆದಾರರು ಕಾಮಗಾರಿ ನಡೆಸಲು ಅಡ್ಡಿಪಡಿಸಿದ್ದರಿಂದ ತಿಂಗಳುಗಟ್ಟಲೇ ಕಾಮಗಾರಿ ಸ್ಥಗಿತಗೊಂಡಿದೆ. ಸಂಧಾನದ ಬಳಿಕ, ಬಿಎಂಆರ್ ಸಿಎಲ್ ಗ್ರಾಮದೊಳಗೆ ರಸ್ತೆಗಳನ್ನು ನಿರ್ಮಿಸಿ ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ರಸ್ತೆಗಳನ್ನು ನಿರ್ಮಿಸಿತು.

ಇದರ ನಂತರ ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್‌ನೊಂದಿಗಿನ ಲೈನ್‌ನ ಒಪ್ಪಂದವನ್ನು ರದ್ದುಗೊಳಿಸಲಾಯಿತು. ಗುತ್ತಿಗೆದಾರರು ಈಗಾಗಲೇ ಕಾಳೇನ ಅಗ್ರಹಾರ ಮತ್ತು ತಾವರಕೆರೆ ಮಾರ್ಗದ ಕಾಮಗಾರಿಗಳನ್ನು ನಡೆಸುತ್ತಿದ್ದು, ಜನವರಿ 2021ರಲ್ಲಿ ಮುಕ್ತಾಯಗೊಳಿಸಲಾಯಿತು ಎಂದು ಹೇಳಿದರು.

ಮಹಾಮಾಡಿ ಕೊರೊನಾದಿಂದ ತುಸು ಕಾಮಗಾರಿ ವಿಳಂಬ ಆಗಿದೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ. ನೈಸ್ ರಸ್ತೆಯ ಮೇಲೆ ಹಾದು ಹೋಗುವ ವಯಡಕ್ಟ್ ಸಮಸ್ಯೆ ಮತ್ತೊಂದು ವಿವಾದಕ್ಕೆ ಕಾರಣವಾಯಿತು. ಬಿಎಂಆರ್‌ಸಿಎಲ್ ಅಂತಿಮವಾಗಿ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್‌ಗೆ ಆಗಸ್ಟ್ 2023ರಲ್ಲಿ 67.65 ಲಕ್ಷ ರೂಪಾಯಿಗಳನ್ನು ರಸ್ತೆಯ ಮೇಲೆ ವಯಡಕ್ಟ್ ನಿರ್ಮಿಸಿದಾಗ ಟೋಲ್ ಗೇಟ್‌ನಿಂದ ಉಂಟಾದ ನಷ್ಟಕ್ಕೆ ಪಾವತಿಸಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+