Namma Metro: ಕೆಲವೇ ತಿಂಗಳಲ್ಲಿ ಕೆಂಗೇರಿ-ಚಲ್ಲಘಟ್ಟ ನೇರಳೆ ಮಾರ್ಗದ ಕಾರ್ಯಾಚರಣೆ ಆರಂಭ
ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ 7.53 ಕಿಮೀ ಮಾರ್ಗದ ಕಾರ್ಯಾಚರಣೆಯು ಆಗಸ್ಟ್ 30, 2021 ರಂದು ಪ್ರಾರಂಭವಾಯಿತು.
ಬೆಂಗಳೂರು, ಫೆಬ್ರವರಿ. 13: ವಿಸ್ತೃತ ನೇರಳೆ ಮಾರ್ಗದ ಕೆಂಗೇರಿ ಮತ್ತು ಚಲ್ಲಘಟ್ಟ ನಡುವಿನ ಬಾಕಿ ಉಳಿದಿರುವ 1.9 ಕಿಮೀ ಮಾರ್ಗವನ್ನು 2023 ರ ಮಧ್ಯದ ವೇಳೆಗೆ ಜನರ ಬಳಕೆಗೆ ತೆರೆಯಲಾಗುವುದು ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಸಂಪೂರ್ಣವಾಗಿ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗವನ್ನು ಪ್ರಾರಂಭಿಸುವತ್ತ ಗಮನಹರಿಸಿದ್ದರಿಂದ, ಈ ಮಾರ್ಗದ ಪ್ರಾರಂಭವು ವಿಳಂಬವಾಗಿದೆ.
ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ 7.53 ಕಿಮೀ ಮಾರ್ಗದ ಕಾರ್ಯಾಚರಣೆಯು ಆಗಸ್ಟ್ 30, 2021 ರಂದು ಪ್ರಾರಂಭವಾಯಿತು. ಚಲ್ಲಘಟ್ಟಕ್ಕೆ ಮೆಟ್ರೋ ವಿಸ್ತರಣೆ, ತಡವಾಗಿ ಸೇರ್ಪಡೆಯಾಗಿದ್ದು, ಕೆಲವು ತಿಂಗಳುಗಳ ನಂತರ ಕಾರ್ಯರೂಪಕ್ಕೆ ಬರಬೇಕಿತ್ತು. ಆದರೂ, ಇಷ್ಟು ವರ್ಷಗಳಾದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ.

ಪ್ರಸ್ತುತ ಸ್ಥಿತಿಯನ್ನು ವಿವರಿಸಿರುವ ಹಿರಿಯ ಅಧಿಕಾರಿಯೊಬ್ಬರು, "ಈ ಮಾರ್ಗದ 98% ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿವೆ. 85% ನಿಲ್ದಾಣದ ಕಾಮಗಾರಿಗಳು ಸಹ ಮುಗಿದಿವೆ. ಸಿಸ್ಟಮ್ಸ್, ಸಿಗ್ನಲಿಂಗ್, ಎಲೆಕ್ಟ್ರಿಕಲ್ ಮತ್ತು ನಿರ್ವಹಣೆಗೆ ಸಂಬಂಧಿಸಿದ ಕೆಲಸಗಳು ಇನ್ನೂ ಬಾಕಿ ಉಳಿದಿವೆ. ಇದು ಪೂರ್ಣಗೊಳ್ಳಲು ಎರಡು ತಿಂಗಳು ಬೇಕು. ಅದರ ನಂತರ ಮೆಟ್ರೊ ರೈಲು ಸುರಕ್ಷತೆಗಾಗಿ ಕಮಿಷನರ್ ಪರಿಶೀಲನೆ, ಪ್ರಾಯೋಗಿಕ ಓಡಾಟ ನಡೆಸಬೇಕಾಗಿದೆ. ಈ ವರ್ಷದ ಮಧ್ಯದಲ್ಲಿ ಈ ಮಾರ್ಗವನ್ನು ಜನರ ಸೇವೆಗೆ ಬಿಡಲಾಗುತ್ತದೆ" ಎಂದು ಮಾಹಿತಿ ನೀಡಿದ್ದಾರೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ವಾಸ ಮಾಡುವವರಿಗೆ ಈ ನಿಲ್ದಾಣ ವರದಾನವಾಗಲಿದೆ. ಲೇಔಟ್‌ನ ಪ್ರಮುಖ ರಸ್ತೆಯನ್ನು ಚಲ್ಲಘಟ್ಟದೊಂದಿಗೆ ಅಂಡರ್‌ಪಾಸ್ ಸಂಪರ್ಕಿಸಲಿದ್ದು, ಜನರಿಗೆ ಮೆಟ್ರೋ ನಿಲ್ದಾಣವನ್ನು ಪ್ರವೇಶಿಸುವುದು ಸುಲಭವಾಗುತ್ತದೆ.
ಆದರೆ, ನೇರಳೆ ಮಾರ್ಗಕ್ಕೆ ರೈಲುಗಳನ್ನು ಸ್ಥಿರಗೊಳಿಸುವ ಚಲ್ಲಘಟ್ಟ ಡಿಪೋ ಸಿದ್ಧವಾಗಿಲ್ಲ. ರಿಟ್ಸ್ ಮತ್ತು ಪವರ್ ಮೆಕ್ ಪ್ರಾಜೆಕ್ಟ್ಸ್ ಲಿಮಿಟೆಡ್ ನಡುವಿನ ಜಂಟಿ ಉದ್ಯಮಕ್ಕೆ ಡಿಪೋ ಸಿದ್ಧಡಿಸುವ ಗುತ್ತಿಗೆಯನ್ನು ನೀಡಲಾಗಿದೆ. ಆದರೆ, ಇನ್ನು, ಪ್ರಾಥಮಿಕ ಡಿಪೋ ಕಾರ್ಯಗಳನ್ನು ಪ್ರಾರಂಭಿಸಿದ್ದಾರೆ. ಡಿಪೋ ಸಿದ್ಧವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ, ಎಲ್ಲ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಕೆಂಗೇರಿಯಿಂದ ಚಲ್ಲಘಟ್ಟ ನಿಲ್ದಾಣಕ್ಕೆ ರೈಲು ಸಂಚಾರ ಆರಂಭಿಸುತ್ತೇವೆ ಎಂದಿದ್ದಾರೆ.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಈ ಮಾರ್ಗವು 2023 ರ ಮಧ್ಯದ ವೇಳೆಗೆ ಕಾರ್ಯನಿರ್ವಹಿಸಲಿದೆ ಎಂದು ಖಚಿತಪಡಿಸಿದ್ದಾರೆ.
ಇವುಗಳ ನಡುವೆ, ಕೆಆರ್ ಪುರಂ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಬೆಟ್ಟಹಲಸೂರು ಮೆಟ್ರೋ ನಿಲ್ದಾಣಕ್ಕೆ ಅನುದಾನ ನೀಡಲು ಎಂಬಸಿ ಗ್ರೂಪ್‌ನ ಪ್ರತಿನಿಧಿಗಳು ಮತ್ತೆ ಮುಂದೆ ಬಂದಿದ್ದಾರೆ. ಕಳೆದ ವಾರ ಪ್ರತಿನಿಧಿಗಳು ಮತ್ತು ಬಿಎಂಆರ್‌ಸಿಎಲ್ ಅಧಿಕಾರಿಗಳ ನಡುವೆ ಮಾತುಕತೆ ನಡೆದಿದೆ.












Click it and Unblock the Notifications