Namma metro: ನಮ್ಮ ಮೆಟ್ರೋದಲ್ಲಿ 2ನೇ ಮಹಿಳಾ ಕೋಚ್‌ಗೆ ಹೆಚ್ಚಿದ ಬೇಡಿಕೆ, ಯಾವ ಮಾರ್ಗದಲ್ಲಿ? -ಮಾಹಿತಿ
ಬೆಂಗಳೂರು, ನವೆಂಬರ್, 24: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ಮೂಲಕ ಮೆಟ್ರೋ ಜನಪ್ರಿಯತೆಯನ್ನು ಪಡೆಯುತ್ತಲೇ ಇದೆ. ಹಾಗೆಯೇ ಮೆಟ್ರೋದಲ್ಲಿ ಮಹಿಳೆಯರಿಗಂತಲೇ ಮೀಸಲಿಟ್ಟ ಕೋಚ್ ತುಂಬಿ ತುಳುಕುತ್ತಲೇ ಇದೆ. ಆದ್ದರಿಂದ 2ನೇ ಮಹಿಳಾ ಕೋಚ್ ನಿಧಿಪಡಿಸುವಂತೆ ಬೇಡಿಕೆಗಳು ಕೇಳಿಬರುತ್ತಿವೆ. ಯಾವ ಮಾರ್ಗದಲ್ಲಿ ಈ ಬೇಡಿಕೆ ಹೆಚ್ಚಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಒಂದು ಕಾಲದಲ್ಲಿ ವಿಶ್ರಾಂತಿ ಮತ್ತು ಆರಾಮದಾಯಕ ಆಗಿದ್ದ ಪ್ರಯಾಣವಾಗಿದ್ದ ನಮ್ಮ ಮೆಟ್ರೋದ ಸವಾರಿ ಈಗ, ಅದರಲ್ಲೂ ನೇರಳೆ ಮಾರ್ಗದಲ್ಲಿ ಹೆಚ್ಚಿನ ಪ್ರಯಾಣಿಕರು ಉಸಿರುಗಟ್ಟುವ ವಾತಾವರಣದಲ್ಲಿ ಪ್ರಯಾಣಿಸುವಂತದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಆರ್ ಪುರ-ಬೈಯಪ್ಪನಹಳ್ಳಿ ಮಾರ್ಗ ಆರಂಭವಾಗಿ 45 ದಿನಗಳಷ್ಟೇ ಕಳೆದಿವೆ. ನವೆಂಬರ್‌ನಲ್ಲಿ ದಿನಕ್ಕೆ ಸರಾಸರಿ 6.5 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಆದರೆ 73.81 ಕಿಲೋ ಮೀಟರ್ ಮಾರ್ಗವನ್ನು ಕವರ್ ಮಾಡಲು ಕೇವಲ 52 ರೈಲುಗಳು ಮಾತ್ರ ಇವೆ. ಸದ್ಯ ಇದಕ್ಕೆ ಯಾವುದೇ ಬೇರೆ ಪರಿಹಾರ ಇಲ್ಲದಂತಾಗಿದೆ.
ಪ್ಲಾಟ್‌ಫಾರ್ಮ್‌ಗಳಲ್ಲಿ ಇರುವ ಭದ್ರತಾ ಸಿಬ್ಬಂದಿ ಮತ್ತು ಹೋಮ್ ಗಾರ್ಡ್ಸ್ ರೈಲುಗಳ ಒಳಗೆ ಮತ್ತು ಹೊರಗೆ ಹೋಗುವ ಜನಸಂದಣಿಯನ್ನು ನಿಯಂತ್ರಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಸಿಬ್ಬಂದಿ ಸ್ವಯಂ ಚಾಲಿತ ಬಾಗಿಲುಗಳನ್ನು ಮುಚ್ಚಲು ಜನರನ್ನು ತಳ್ಳಬೇಕಾಗುತ್ತಿದೆ.
ಅನೇಕ ನಿಲ್ದಾಣಗಳಲ್ಲಿ, ಬೋಗಿಗಳೊಳಗಿನ ಪ್ರಯಾಣಿಕರು ಹತ್ತಲು ಪ್ರಯತ್ನಿಸುವವರಿಗೆ ಜಾಗ ಇಲ್ಲ ಎಂದು ಕಿರುಚುತ್ತಾರೆ. ಪ್ರತಿ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು, ಹತ್ತಲು ವಿಫಲರಾದವರು ಮುಂದಿನ ರೈಲಿಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮೊದಲು ಪ್ರತಿ ರೈಲಿನಲ್ಲಿ ಮಹಿಳೆಯರಿಗೆ ಮತ್ತೊಂದು ಕೋಚ್ ಮೀಸಲಿಡಿ. ಅವರು ನಜ್ಜುಗುಜ್ಜಾಗುವ ರೀತಿಯನ್ನು ನೋಡಿದರೆ ನನಗೆ ದುಃಖ ಆಗುತ್ತದೆ. ಮೆಟ್ರೋದಲ್ಲಿ ಈ ರೀತಿ ಪ್ರಯಾಣ ಮಾಡಲು ಹೇಗೆ ಅನುಮತಿಸಲಾಗಿದೆ? 80 ಮತ್ತು 90ರ ದಶಕದಲ್ಲಿ ಬಿಟಿಎಸ್ ಬಸ್‌ಗಳಲ್ಲಿ ಈ ರೀತಿಯ ದೃಶ್ಯಗಳು ಕಂಡು ಬರುತ್ತಿದ್ದವು ಎಂದು ಹಿರಿಯ ನಾಗರಿಕ ರಾಕೇಶ್ ಗೌಡ ಅವರು ಹೇಳಿದ್ದಾರೆ ಎಂದಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಪೀಕ್ ಅವರ್‌ನಲ್ಲಿ ಮಹಿಳಾ ಕೋಚ್‌ನಲ್ಲಿ ಒಂದು ಇಂಚು ಕೂಡ ಜಾಗ ಇರುವುದಿಲ್ಲ. ಆದ್ದರಿಂದ ನಾನು ಜನರಲ್ ಕೋಚ್‌ನಲ್ಲಿ ಪ್ರಯಾಣಿಸಬೇಕಾಗುತ್ತದೆ. ಕಳೆದ ಒಂದು ತಿಂಗಳಿನಿಂದ ತುಂಬಾ ಕಷ್ಟಪಟ್ಟು ಪ್ರಯಾಣ ಮಾಡುತ್ತಿದ್ದೇನೆ ಎಂದು ಎಂಜಿ ರಸ್ತೆಯಿಂದ ದೀಪಾಂಜಲಿ ನಗರಕ್ಕೆ ಪ್ರತಿದಿನ ಪ್ರಯಾಣಿಸುವ ಪ್ರಯಾಣಿಕರಿಬ್ಬರು ಹೇಳಿದ್ದಾರೆ ಅಂತಾ ವರದಿ ಮಾಡಿದೆ.
ವಿಧಾನಸೌಧದಿಂದ ಜಯನಗರದ ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದ ಮೂವರು ಸಹೋದ್ಯೋಗಿಗಳು ಕೆಂಪೇಗೌಡ ಇಂಟರ್‌ಚೇಂಜ್ ನಿಲ್ದಾಣದಲ್ಲಿ ರೈಲು ಬದಲಾಯಿಸಲು ಬರುತ್ತಿದ್ದವರನ್ನು ಮಾತನಾಡಿಸಿದ TNIE,ನಿಮಗೆ ಕುಳಿತುಕೊಳ್ಳಲು ಸ್ಥಳವಿದೆಯೇ ಎಂದು ಕೇಳಿದಾಗ, ಅವರು ನಗಲು ಪ್ರಾರಂಭಿಸಿದರು.
ನಮಗೆ ನಿಲ್ಲಲು ಸಹ ಒಂದು ಇಂಚು ಜಾಗವಿರುವುದಿಲ್ಲ. ಆಸನದ ಬಗ್ಗೆ ಯೋಚಿಸುವ ಧೈರ್ಯವನ್ನು ಯಾರೂ ಮಾಡುವುದಿಲ್ಲ. ಸರ್ಕಾರಕ್ಕೆ ಒಂದೇ ಒಂದು ಮನವಿ, ಅದೇನೆಂದರೆ ದಯವಿಟ್ಟು ರೈಲುಗಳ ನಡುವಿನ ಸಮಯವನ್ನು ಕಡಿಮೆ ಮಾಡಿ ಎಂದು ಹೇಳಿದ್ದಾರೆ ಅಂತಾ ವರದಿ ಮಾಡಿದೆ.












Click it and Unblock the Notifications